ಚುನಾವಣೆ ಹೊಸ್ತಿಲ್ಲೇ ಬಿಜೆಪಿಗೆ ಎದುರಾಗಿದೆ ಈಗ ಹೊಸ ಸವಾಲು

By Kannadaprabha News  |  First Published Sep 9, 2020, 12:38 PM IST

ರಾಜ್ಯದಲ್ಲಿ ಶೀಘ್ರ ಚುನಾವಣೆಯೊಂದು ನಡೆಯಲಿದ್ದು, ಚುನಾವಣೆ ಬೆನ್ನಲ್ಲೇ ಇದೀಗ ಬಿಜೆಪಿಗೆ ಹೊಸ ಸವಾಲೊಂದು ಎದುರಾಗಿದೆ. ಏನದು ಸವಾಲು..?


ಚಿಕ್ಕಬಳ್ಳಾಪುರ (ಸೆ.09) :  ಜಿಲ್ಲೆಯ ರಾಜಕೀಯ ವಲಯದಲ್ಲಿ ಗ್ರಾಪಂ ಚುನಾವಣೆಗಳು ಮೊದಲಿನಿಂದಲೂ ರಾಜಕೀಯ ಪಕ್ಷಗಳಿಗೆ ತೀವ್ರ ಪ್ರತಿಷ್ಠೆಯಾಗಿದ್ದು, ಪಕ್ಷಾತೀತವಾಗಿ ಚುನಾವಣೆಗಳು ನಡೆದರೂ ಪಕ್ಷಗಳ ಪರೋಕ್ಷ ಬೆಂಬಲದಿಂದ ಸದಸ್ಯರು ಚುನಾವಣ ಅಖಾಡಕ್ಕೆ ಇಳಿಯುವುದು ಸರ್ವೇ ಸಾಮಾನ್ಯ.

ಹೀಗಾಗಿ ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಬುನಾದಿ ಹಾಕಿಕೊಳ್ಳಲು ರಾಜಕೀಯ ಪಕ್ಷಗಳು ಹಾಗೂ ನಾಯಕರು ಮುಂದಾಗಿರುವುದು ಸಾಕಷ್ಟುಕುತೂಹಲಕ್ಕೆ ಎಡೆಮಾಡಿಕೊಟ್ಟಿವೆ.

Tap to resize

Latest Videos

ಜಿಲ್ಲೆಯ ಮಟ್ಟಿಗೆ ಗೌರಿಬಿದನೂರಲ್ಲಿ ಒಂದರೆಡು ಗ್ರಾಪಂಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ತಾಲೂಕಿನಲ್ಲಿ ಅಧಿಕಾರ ಹಿಡಿಯುವಷ್ಟುಗ್ರಾಪಂ ಸದಸ್ಯರನ್ನು ಬಿಜೆಪಿ ತನ್ನ ಸ್ವಂತ ಬಲದಿಂದ ಇದುವರೆಗೂ ಗೆಲ್ಲಿಸಿಕೊಂಡಿಲ್ಲ. ಆದರೆ ಈ ಬಾರಿ ಗ್ರಾಪಂ ಚುನಾವಣೆ ಆಡಳಿತರೂಢ ಬಿಜೆಪಿಗೆ ದೊಡ್ಡ ಸವಾಲಾಗಿದೆ. 

'ಮಾಜಿ ಸಿಎಂ ಕುಮಾರಸ್ವಾಮಿ ಬಣ್ಣ ಬದಲಿಸುವ ಊಸರವಳ್ಳಿ' .

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಸುಧಾಕರ್‌ ಆರಿಸಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವುದರಿಂದ ಚಿಕ್ಕಬಳ್ಳಾಪುರದಲ್ಲಿ ಕ್ಷೇತ್ರದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಾಬಲ್ಯ ಇರುವ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ವಿರುದ್ಧ ಬಿಜೆಪಿ ಸೆಣಸಾಟ ನಡೆಸಬೇಕಿದೆ.

click me!