ಬಿಜೆಪಿ - ಜೆಡಿಎಸ್ ದೋಸ್ತಿ ಮಾಡಿಕೊಂಡು ಅಧಿಕಾರಿ ನಡೆಸಿದ್ದು, ಇದೀಗ ಈ ದೋಸ್ತಿಯಲ್ಲಿ ಬಿರುಕು ಮೂಡಿದೆ. ದೋಸ್ತಿ ಮುರಿದುಕೊಳ್ಳಲು ಮುಂದಾಗಿದ್ದಾರೆ.
ತುಮಕೂರು (ಜ.18): ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ದೋಸ್ತಿ ಅಂತ್ಯವಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ನಿರ್ಧರಿಸಲಾಗಿದೆ. ಒಟ್ಟು 57 ಸದಸ್ಯ ಬಲದ ತುಮಕೂರು ಜಿಲ್ಲಾ ಪಂಚಾಯತ್ನಲ್ಲಿ ಜೆಡಿಎಸ್ 14, ಬಿಜೆಪಿ 19 ಹಾಗೂ ಕಾಂಗ್ರೆಸ್ 23 ಸದಸ್ಯರನ್ನು ಒಳಗೊಂಡಿದೆ.
ಜೆಡಿಎಸ್ ಹಾಗೂ ಬಿಜೆಪಿ ಸೇರಿ ಅಧಿಕಾರ ಹಿಡಿದಿದ್ದು, ಜೆಡಿಎಸ್ನ ಲತಾ ರವಿಕುಮಾರ್ ಅಧ್ಯಕ್ಷರಾಗಿದ್ದರು. ಉಪಾಧ್ಯಕ್ಷರಾಗಿ ಬಿಜೆಪಿ ಶಾರದಾ ನರಸಿಂಹಮೂರ್ತಿ ಅಧಿಕಾರ ವಹಿಸಿಕೊಂಡಿದ್ದರು.
ಮಾನನಷ್ಟ ಪ್ರಕರಣ: ಕೋರ್ಟ್‌ನಲ್ಲಿ ದೇವೇಗೌಡರಿಗೆ ಹಿನ್ನಡೆ ...
ಒಪ್ಪಂದದಂತೆ ಅಧಿಕಾರವಧಿ ಪೂರ್ಣಗೊಂಡರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರಾಜೀನಾಮೆ ನೀಡಿರಲಿಲ್ಲ. ಇಂದು ಅವಿಶ್ವಾಸ ಮಂಡನೆ ಮಾಡಲು ಬಿಜೆಪಿ ಸದಸ್ಯರು ನಿರ್ಧರಿಸಿದ್ದಾರೆ.
ಇಂದು ನಡೆಯುವ ಸಭೆಯು ಜಿಲ್ಲಾ ಪಂಚಾಯತ್ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ.