ಅಲ್ಲಿ ಅಧಿಕಾರ ಪಡೆಯುವ ಕನಸು ಭಗ್ನವಾಗಿದ್ದು, ಇಲ್ಲಿ ಮಾತ್ರ ತಂತ್ರ ಫಲಿಸಿತು. ಕಾಂಗ್ರೆಸ್‌ನವರು ಮಾಡಿದ ತಂತ್ರಕ್ಕೆ ಪ್ರತಿತಂತ್ರ ಹೆಣೆದು ದಾವಣಗೆರೆಯಲ್ಲಿ ಬಿಜೆಪಿಗರು ಯಶಸ್ವಿಯಾಗಿದರು.
ದಾವಣಗೆರೆ (ಫೆ.25): ದಾವಣಗೆರೆ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿಯ ಎಸ್.ಟಿ.ವೀರೇಶ್, ಉಪ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ.
ಒಟ್ಟು 58 ಮತಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ 29 ಮತಗಳು ಚಲಾವಣೆಯಾದರೆ, ಕಾಂಗ್ರೆಸ್ ಅಭ್ಯರ್ಥಿಗಳ ಪರ 22 ಮತಗಳು ಚಲಾವಣೆಯಾದವು.
ಕಾಂಗ್ರೆಸ್ ಪಕ್ಷದ ನಾಯಕರಾದ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಎಂಎಲ್ಸಿಗಳಾದ ಕೆ.ಸಿ.ಕೊಂಡಯ್ಯ, ಯು.ಬಿ.ವೆಂಕಟೇಶ್ ಚುನಾವಣೆಗೆ ಗೈರಾಗಿದ್ದರು.
ಮುಂದುವರಿದ JDS-ಕೈ ಮೈತ್ರಿ : ಮೈಸೂರು ಮೇಯರ್ ಆಗಿ ರುಕ್ಮಿಣಿ ಮಾದೇಗೌಡ
ಮೇಯರ್, ಉಪ ಮೇಯರ್ ಸ್ಥಾನ ಗೆಲ್ಲಲು ಬಿಜೆಪಿಯ ಅತೃಪ್ತರು, ಪಕ್ಷೇತರರನ್ನು ಸೆಳೆಯಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಆದರೆ, ಕಾಂಗ್ರೆಸ್‌ನ ತಂತ್ರಕ್ಕೆ ಒಳಗೊಳಗೆ ಪ್ರತಿತಂತ್ರ ಹೆಣೆಯುತ್ತಿದ್ದ ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಎದುರಾಳಿ ಪಕ್ಷದ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ದೇವರಮನಿ ಶಿವಕುಮಾರ್ ಅವರನ್ನು ತಮ್ಮ ತೆಕ್ಕೆಗೆ ಸೆಳೆಯುವ ಮೂಲಕ ಕಾಂಗ್ರೆಸ್‌ಗೆ ಭರ್ಜರಿ ಆಘಾತ ನೀಡಿದ್ದಾರೆ.