Bengaluru: ಪ್ರತಿಭಟನಾನಿರತ ಎಎಪಿ ಕಾರ್ಯಕರ್ತರ ಮೇಲೆ ಬಿಜೆಪಿಗರಿಂದ ಹಲ್ಲೆ

Kannadaprabha News   | Asianet News
Published : Dec 29, 2021, 05:45 AM IST
Bengaluru: ಪ್ರತಿಭಟನಾನಿರತ ಎಎಪಿ ಕಾರ್ಯಕರ್ತರ ಮೇಲೆ ಬಿಜೆಪಿಗರಿಂದ ಹಲ್ಲೆ

ಸಾರಾಂಶ

*  ಪೊಲೀಸ್‌ ಠಾಣೆ ಎದುರೇ ಗುಂಡಾಗಿರಿ *  ಈ ಸಂಬಂಧ ಆಯುಕ್ತರಿಗೆ ದೂರು *  ಬಿಜೆಪಿ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ  

ಬೆಂಗಳೂರು(ಡಿ.29):  ಸಮಾಜ ಕಲ್ಯಾಣ ಇಲಾಖೆಯಲ್ಲಿನ ಭ್ರಷ್ಟಾಚಾರ(Corruption) ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ(BJP) ಕಾರ್ಯಕರ್ತರು(Activists) ಹಲ್ಲೆ ಮಾಡಿದ್ದಾರೆ ಎಂದು ಆಮ್‌ ಆದ್ಮಿ(Aam Aadmi Party)ಪಕ್ಷ ಆರೋಪಿಸಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ(Department of Social Welfare) ಮೂರು ಕೋಟಿ ರು. ಮೊತ್ತದ ಆರು ಕಾಮಗಾರಿಗಳ ಗುತ್ತಿಗೆ ರುದ್ದುಪಡಿಸಿ, ಕೆಆರ್‌ಡಿಎಲ್‌ಗೆ ನೀಡಿರುವುದರ ಹಿಂದೆ ಭಾರೀ ಭ್ರಷ್ಟಾಚಾರವಿದೆ ಎಂದು ಆರೋಪಿಸಿ ಮಂಗಳವಾರ ಆಮ್‌ ಆದ್ಮಿ ಪಾರ್ಟಿಯ ಮುಖಂಡರು ಹಾಗೂ ಕಾರ್ಯಕರ್ತರು, ತಿಪ್ಪಸಂದ್ರ ಮುಖ್ಯರಸ್ತೆಯ ಮಹಾದ್ವಾರದ ಬಳಿ ಪ್ರತಿಭಟನೆ(Protest) ನಡೆಸುತ್ತಿದ್ದರು. 

ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾನಿರತ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆದೊಯ್ಯುವಾಗ ಠಾಣೆ ಎದುರೇ ಬಿಜೆಪಿ ಕಾರ್ಯಕರ್ತರು ಗೂಂಡಾಗಿರಿ ಮಾಡಿದ್ದಾರೆ. ಇದರಿಂದ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಗುಂಪ ಘರ್ಷಣೆ ನಡೆದಿದೆ. ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ(Assault) ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕ್ಯಾಮರಾಗಳನ್ನು ಕಸಿದುಕೊಂಡು ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ(Mohan Dasari) ಆರೋಪಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆ: ಬಿಜೆಪಿಗೆ ಮುಳುವಾಗುತ್ತಾ AAP ಕೊಟ್ಟ ಆ ಒಂದು ಭರವಸೆ?

ನಗರ ಪೊಲೀಸ್‌ ಆಯುಕ್ತರಿಗೆ ದೂರು: 

ಬಿಜೆಪಿ ಶಾಸಕ ಎಸ್‌.ರಘು(S Raghu) ಅವರು ಸುಮಾರು 300 ಮಂದಿ ಬಿಜೆಪಿ ಕಾರ್ಯಕರ್ತರನ್ನು ಕಳುಹಿಸಿ ಪ್ರತಿಭಟನಾನಿರತ ಎಎಪಿ ಕಾರ್ಯಕರ್ತರ ಮೇಲೆ ಜೀವನ ಭೀಮಾನಗರ ಪೊಲೀಸ್‌ ಠಾಣೆ ಬಳಿ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿ ಎಎಪಿ ನಿಯೋಗ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ಗೆ ದೂರು ನೀಡಿದೆ. ಈ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಹುದ್ದೆಯ ಬೇಡಿಕೆ ಇಲ್ಲ ಎಂದು ಆಪ್ ಸೇರ್ಪಡೆಯಾದ ಮಾಜಿ ಸಂಸದ

ಬೆಂಗಳೂರು ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಾ.ವಿ. ವೆಂಕಟೇಶ್‌ Dr  V venkatesh) ಆಮ್‌ ಆದ್ಮಿ ಪಾರ್ಟಿಗೆ (AAP) ನ.13 ರಂದು ಸೇರ್ಪಡೆಯಾಗಿದ್ದರು. ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಎಪಿಯ (AAP) ಧ್ಜಜವನ್ನು ಸ್ವೀಕರಿಸಿದ ವೆಂಕಟೇಶ್‌ ತಾವು ಅರವಿಂದ ಕೇಜ್ರಿವಾಲ್‌ (Arvind Kejriwal) ಅವರ ದೆಹಲಿ ಸರ್ಕಾರದ (Delhi Govt) ಜನಪರ ಕೆಲಸವನ್ನು ಒಪ್ಪಿಕೊಂಡು ಆಪ್‌ ಸೇರುತ್ತಿರುವುದಾಗಿ ಪ್ರಕಟಿಸಿದ್ದರು. 

1984ರಲ್ಲಿ ಜನತಾ ರಂಗದಿಂದ (Janatha Ranga) ಸ್ಪರ್ಧಿಸಿ ಕೋಲಾರದಿಂದ (Kolar) ಗೆದ್ದಿದ್ದೆ. ಆದರೆ ಕಾಂಗ್ರೆಸ್‌ (Congress) ಅನ್ನು ವಿರೋಧಿಸಿ ರಾಜಕಾರಣ ಮಾಡುತ್ತ ಬಂದ ಪಕ್ಷಗಳು ಆ ಬಳಿಕ ತೋಳ್ಬಲ, ಹಣದ ಬಲ ಮತ್ತು ಕುಟುಂಬ ರಾಜಕಾರಣಕ್ಕೆ (Family politics) ಬಲಿಯಾದವು. ಆದರೆ ಆಮ್‌ ಆದ್ಮಿ ಪಕ್ಷ ಮಾತ್ರ ಪರ್ಯಾಯ ರಾಜಕಾರಣ ಮಾಡುತ್ತಿದೆ ಎಂದು ವೆಂಕಟೇಶ್‌ (Venkatesh) ಹೇಳಿದ್ದರು.

ಎಲ್ಲಾ ಕಡೆ ಆಪ್‌ ಶೂನ್ಯ ಸಂಪಾದನೆ

ಈ ಸಂದರ್ಭದಲ್ಲಿ ಮಾತನಾಡಿದ ಆಪ್‌ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ವೆಂಕಟೇಶ್‌ ಅವರು ಯಾವುದೇ ಹುದ್ದೆಯ ಬೇಡಿಕೆ ಇಟ್ಟುಕೊಂಡು ಪಕ್ಷಕ್ಕೆ ಸೇರಿಲ್ಲ. ಅವರ ರಾಜಕೀಯ ಅನುಭವವನ್ನು ಪಕ್ಷ ಬಳಸಿಕೊಳ್ಳಲಿದೆ ಎಂದು ತಿಳಿಸಿದ್ದರು.

ದೆಹಲಿ ಸರ್ಕಾರದಿಂದ ಅಯೋಧ್ಯೆಗೆ ಉಚಿತ ಪ್ರವಾಸ :  ಅಯೋಧ್ಯೆಯ ರಾಮ ಮಂದಿರ ಭೇಟಿಯ ನಂತರ ಅರವಿಂದ್‌ ಕೇಜ್ರಿವಾಲ್ (Aravind Kejriwal) ದೆಹಲಿ ಸರ್ಕಾರದ "ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ" ಯಲ್ಲಿ ಅಯೋಧ್ಯೆಯನ್ನು ಸೇರಿಸಲಾಗುವುದು ಎಂದು ಹೇಳಿದ್ದಾರೆ. ಈ ಹಿಂದೆ ಜಗನ್ನಾಥ ಪುರಿ, ಉಜ್ಜಯಿನಿ, ಶಿರಡಿ, ಅಮೃತಸರ, ಜಮ್ಮು, ದ್ವಾರಕಾ, ತಿರುಪತಿ, ರಾಮೇಶ್ವರಂ, ಹರಿದ್ವಾರ, ಮಥುರಾ ಮತ್ತು ಬೋಧಗಯಾಗಳನ್ನು ಈ ಯೋಜನೆಗೆ ಸೇರಿಸಲಾಗಿತ್ತು. ದೆಹಲಿಯಿಂದ ವೃದ್ಧರು ಯಾವುದೇ ವೆಚ್ಚವಿಲ್ಲದೆ ರಾಮ್ ಲಲ್ಲಾನ ಆಶೀರ್ವಾದ ಪಡೆಯಲು ಈಗ ಅಯೋಧ್ಯೆಗೆ (Ayodhya) ಭೇಟಿ ನೀಡಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಿನ್ನು ಕೆಲವೇ ತಿಂಗಳಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು  (Uttar Pradesh Assembly Elections 2022) ನಡೆಯಲಿವೆ ಎಂಬುವುದು ಉಲ್ಲೇಖನೀಯ.
 

PREV
Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!