ಪ್ರಯಾಣಿಕರಿಗೆ ಗುಡ್‌ನ್ಯೂಸ್, ಬಿಎಂಟಿಸಿ ವಜ್ರ ಮಾಸಿಕ ಬಸ್ ಪಾಸ್ ದರ ಇಳಿಕೆ

Published : Dec 28, 2021, 11:08 PM ISTUpdated : Dec 28, 2021, 11:13 PM IST
ಪ್ರಯಾಣಿಕರಿಗೆ ಗುಡ್‌ನ್ಯೂಸ್, ಬಿಎಂಟಿಸಿ ವಜ್ರ ಮಾಸಿಕ ಬಸ್ ಪಾಸ್ ದರ ಇಳಿಕೆ

ಸಾರಾಂಶ

* ಬಿಎಂಟಿಸಿ ಪ್ರಯಾಣಿಕರಿಗೆ ಗುಡ್‌ನ್ಯೂಸ್ * ಬಿಎಂಟಿಸಿ ವಜ್ರ ಮಾಸಿಕ ಬಸ್ ಪಾಸ್ ದರ ಇಳಿಕೆ *  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆ

ಬೆಂಗಳೂರು, (ಡಿ.28): ಬಿಎಂಟಿಸಿಯು (Bangalore Metropolitan Transport Corporation) ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್ ಪಾಸ್‌ಗಳನ್ನು (Bus Pass) ನೀಡುತ್ತಿದ್ದು, ಸಾರ್ವಜನಿಕರನ್ನು ವೋಲ್ವೋ ಸೇವೆಗಳಲ್ಲಿ ಪ್ರಯಾಣಿಸಲು ಉತ್ತೇಜಿಸುವ ಸಲುವಾಗಿ, ಬಿಎಂಟಿಸಿ ವಜ್ರ ಮಾಸಿಕ ಬಸ್ ಪಾಸ್ ದರವನ್ನು ರೂ.2000 ರಿಂದ ರೂ.1500 ಕ್ಕೆ ಇಳಿಸಿದೆ.

ಪರಿಷ್ಕೃತ ವಜ್ರ ಮಾಸಿಕ ಪಾಸ್‌ಗಳನ್ನು 28.12.2021 ರಿಂದ ವಜ್ರ ಸೇವೆಗಳಲ್ಲಿ ಕಂಡಕ್ಟರ್‌ಗಳ ಮೂಲಕ ಮತ್ತು ಬಿಎಂಟಿಸಿಯ ಪ್ರಮುಖ ಬಸ್ ನಿಲ್ದಾಣಗಳು ಮತ್ತು ಟಿಟಿಎಂಸಿಗಳಲ್ಲಿ ನೀಡಲಾಗುತ್ತಿದೆ.

Girls Education: ಹಳ್ಳಿ ಪ್ರೌಢಶಾಲೆ ಹೆಣ್ಮಕ್ಳಿಗೂ ವಿದ್ಯಾನಿಧಿ ವಿಸ್ತರಣೆ: ಸಿಎಂ ಬೊಮ್ಮಾಯಿ

ಇದಲ್ಲದೆ, ಜನವರಿ 2022 ಸಾಮಾನ್ಯ ಸೇವಾ ಮಾಸಿಕ ಪಾಸ್‌ಗಳನ್ನು 28.12.2021 ರಿಂದ ನೀಡಲಾಗುತ್ತಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ವಿಕಲಚೇತನರ ಬಸ್​ಪಾಸ್​​​ಗೆ ಅರ್ಜಿ ಆಹ್ವಾನಿಸಿದ ಕೆಎಸ್​ಆರ್​ಟಿಸಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಕಲಚೇತನರಿಗೆ 2022ನೇ ಸಾಲಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಾಸ್​ನ್ನು ಹೊಂದಲು ಅರ್ಜಿ ಆಹ್ವಾನಿಸಿದೆ.

ಜನವರಿ 1ರಿಂದ ವಿಕಲಚೇತನರಿಗೆ ಅನ್ವಯವಾಗುವಂತೆ ಈ ಬಸ್​ ಪಾಸ್​ ಇರಲಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

31 ಡಿಸೆಂಬರ್​​ 2021ರವರೆಗೆ ಮಾತ್ರ ಅನುಮತಿ ಇರುವ ಈಗಿನ ಪಾಸ್​ಗಳನ್ನು ಮುಂದಿನ ವರ್ಷದ ಫೆಬ್ರವರಿ 28ರವರೆಗೂ ಬಳಕೆ ಮಾಡಬಹುದು ಎಂದು ಕೆಎಸ್​ಆರ್​ಟಿಸಿ ಹೇಳಿದೆ.

ಹೊಸ ಬಸ್​ ಪಡೆಯಲು ಇಚ್ಛಿಸುವ ವಿಕಲಚೇತನರು ಸೇವಾಸಿಂಧು ಪೋರ್ಟಲ್​​ನ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಕೆ ಮಾಡಿದ ವಿಕಲಚೇತನರಿಗೆ 2022ರ ಜನವರಿ 17ರಿಂದ ಬಸ್​ ಪಾಸ್​ ವಿತರಣೆ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಕೆಎಸ್​ಆರ್​ಟಿಸಿ ಹೇಳಿದೆ. ಈ ಬಸ್​ ಪಾಸ್​ ಹೊಂದಲು ವಿಕಲಚೇತನರು 660 ರೂಪಾಯಿ ಶುಲ್ಕ ಪಾವತಿ ಮಾಡಬೇಕಿದೆ. ಇದನ್ನು ನಗದು ಇಲ್ಲವೇ ಡಿಡಿ ರೂಪದಲ್ಲಿ ಪಾವತಿ ಮಾಡಬಹುದಾಗಿದೆ.

ಈಗಾಗಲೇ ಪಾಸ್​ಗಳನ್ನು ಹೊಂದಿರುವ ವಿಕಲಚೇತನರು ಆ ಪಾಸ್​ಗಳನ್ನು ನವೀಕರಣ ಮಾಡಲು 2022ರ ಫೆಬ್ರವರಿ 28ರವರೆಗೆ ಅವಕಾಶ ನೀಡಲಾಗಿದೆ. ನೂತನ ಪಾಸ್​ ವಿತರಣೆ ಮಾಡಲು ನಿರ್ದಿಷ್ಟ ಕಾಲಮಿತಿ ಇರೋದಿಲ್ಲ.ವಿಕಲಚೇತನರು ತಮ್ಮ ಅರ್ಜಿಗಳನ್ನು ಆನ್​ಲೈನ್​​ನಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಜೆಪಿಜಿ ಅಥವಾ ಪಿಡಿಎಫ್​ ನಮೂನೆಯಲ್ಲಿ ಆನ್​ಲೈನ್​ನಲ್ಲಿ ಅಡಕಗೊಳಿಸಬೇಕು ಎಂದು ಕೆಎಸ್​ಆರ್​ಟಿಸಿ ಸೂಚನೆ ನೀಡಿದೆ.

ಬೆಂಗಳೂರಿನ ಗಾರ್ಮೆಂಟ್ಸ್ಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ  “ವನಿತಾ ಸಂಗಾತಿ” ಯೋಜನೆಯಡಿಯಲ್ಲಿ ಉಚಿತವಾಗಿ ಮಾಸಿಕ  ಬಸ್ ಪಾಸುಗಳನ್ನು ಜನವರಿ-22 ರಿಂದ ವಿತರಣೆ ಮಾಡಲಾಗುತ್ತದೆ.

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌