ಮೈಸೂರಿಗೆ ಬಿಹಾರ ಸಿಎಂ ನಿತೀಶ್‌ ಎರಡು ತಾಸಿನ ಭೇಟಿ ರಹಸ್ಯ..!

Published : Mar 21, 2024, 09:20 AM ISTUpdated : Mar 21, 2024, 09:21 AM IST
ಮೈಸೂರಿಗೆ ಬಿಹಾರ ಸಿಎಂ ನಿತೀಶ್‌ ಎರಡು ತಾಸಿನ ಭೇಟಿ ರಹಸ್ಯ..!

ಸಾರಾಂಶ

ಈ ಮುಂಚೆ ಪಾಟ್ನಾದಲ್ಲಿದ್ದ ಆ ವೈದ್ಯರು ಇತ್ತೀಚೆಗೆ ಮೈಸೂರಿನಲ್ಲಿ ಅಪಾರ್ಟ್ ಮೆಂಟ್‌ ಖರೀದಿಸಿ, ಇಲ್ಲಿಗೆ ಸ್ಥಳಾಂತರವಾಗಿದ್ದಾರೆ. ಹೀಗಾಗಿ ನಿತೀಶ್‌ ಅವರು ಚಿಕಿತ್ಸೆಗಾಗಿ ಬಂದಿದ್ದರು. ಮಧ್ಯಾಹ್ನ 1 ರ ವೇಳೆಗೆ ವಿಶೇಷ ವಿಮಾನದಲ್ಲಿ ಪಾಟ್ನಾಗೆ ವಾಪಸ್‌ ಆದರು.

ಮೈಸೂರು(ಮಾ.21):  ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಬುಧವಾರ ಮೈಸೂರಿಗೆ ದಿಢೀರ್‌ ಭೇಟಿ ನೀಡಿದ್ದರು. ಎರಡು ತಾಸು ಇದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆದು ವಾಪಸ್‌ ತೆರಳಿದ್ದಾರೆ. ನಿತೀಶ್‌ ಕುಮಾರ್‌ ಅವರೊಂದಿಗೆ ಜೆಡಿಯು ರಾಜ್ಯಸಭಾ ಸದಸ್ಯ ಸಂಜಯ್‌ ಕುಮಾರ್‌ ಜಾ, ಶಾಸಕ ಸಂಜೀವ್‌ ಕುಮಾರ್, ಬಿಜೆಪಿ ಮುಖಂಡ ರಜನೀಶ್‌ ಕುಮಾರ್‌ ಇದ್ದರು. 

ಬೆಳಗ್ಗೆ 11.15ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ಅವರು ನಂತರ ಎರಡು ಖಾಸಗಿ ಕಾರುಗಳಲ್ಲಿ ಪೊಲೀಸ್‌ ಭದ್ರತೆಯೊಂದಿಗೆ ಲಕ್ಷ್ಮೀಪುರಂನಲ್ಲಿರುವ ವೈದ್ಯರ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. 

ಗುಲಾಮಗಿರಿಗೆ ಬಗ್ಗದ ಸ್ವಾಭಿಮಾನಿ ಎಂಬ ತೃಪ್ತಿ ಇದೆ: ಸಂಸದ ವಿ.ಶ್ರೀನಿವಾಸ ಪ್ರಸಾದ್‌

ಈ ಮುಂಚೆ ಪಾಟ್ನಾದಲ್ಲಿದ್ದ ಆ ವೈದ್ಯರು ಇತ್ತೀಚೆಗೆ ಮೈಸೂರಿನಲ್ಲಿ ಅಪಾರ್ಟ್ ಮೆಂಟ್‌ ಖರೀದಿಸಿ, ಇಲ್ಲಿಗೆ ಸ್ಥಳಾಂತರವಾಗಿದ್ದಾರೆ. ಹೀಗಾಗಿ ನಿತೀಶ್‌ ಅವರು ಚಿಕಿತ್ಸೆಗಾಗಿ ಬಂದಿದ್ದರು. ಮಧ್ಯಾಹ್ನ 1 ರ ವೇಳೆಗೆ ವಿಶೇಷ ವಿಮಾನದಲ್ಲಿ ಪಾಟ್ನಾಗೆ ವಾಪಸ್‌ ಆದರು.

PREV
Read more Articles on
click me!

Recommended Stories

ಬೆಂಗಳೂರು-ಕರಾವಳಿ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ!
ಉಡುಪಿ ನೀರು ಸೇದುವಾಗ ಅಮ್ಮನ ಕೈತಪ್ಪಿ ಬಾವಿಗೆ ಬಿದ್ದ ಮಗು; ತಾಯಿ ಬಾವಿಗಿಳಿಯುವಷ್ಟರಲ್ಲಿ ಮಗು ಸಾವು!