
ಗುತ್ತಲ(ಡಿ.03): ಟ್ರ್ಯಾಕ್ಟರ್ ಪಲ್ಟಿಯಾಗಿ ಬಿಹಾರ ರಾಜ್ಯದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, 4 ಜನರಿಗೆ ಗಾಯವಾಗಿರುವ ಘಟನೆ ಸಮೀಪದ ಹರಳಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಮೃತ ಕಾರ್ಮಿಕರನ್ನು ಬಿಹಾರದ ಚಪ್ರಾ ಜಿಲ್ಲೆಯ ರಿವೀಲ್ ಗಂಜಾ ಗ್ರಾಮದ ಭರಕ್ ರಾಮಚಂದ್ರ ಭೀನ್(28) ಹಾಗೂ ಬಿಹಾರದ ಸರಣ ಜಿಲ್ಲೆಯ ಕಾಜುಹಟ್ಟಿ ಗ್ರಾಮದ ಜಿತೇಂದ್ರ ದರೊಗ ಪ್ರಸಾದ (30) ಎಂದು ಗುರ್ತಿಸಲಾಗಿದೆ.
ಸರ್ಕಾರದ ವಿರುದ್ಧ ಸೆಡ್ಡು ಹೊಡೆದ ಮತ್ತೋರ್ವ ಬಿಜೆಪಿ ಶಾಸಕ
ಮೃತರು ಹರಳಹಳ್ಳಿ ಗ್ರಾಮದ ಫಕ್ಕೀರಪ್ಪ ಅಂಬಿಗೇರ ಎಂಬುವವರ ಜಮೀನಿಗೆ ಟ್ರ್ಯಾಕ್ಟರ್‌ನಲ್ಲಿ ಕೃಷಿ ಕೆಲಸಕ್ಕಾಗಿ ತೆರಳುತ್ತಿದ್ದ ವೇಳೆ ಫಕ್ಕೀರಪ್ಪ ವೇಗವಾಗಿ ನಿರ್ಲಕ್ಷ್ಯತನದಿಂದ ಓಡಿಸಿ ಜಮೀನಿನ ಬಳಿ ಇದ್ದ ದೊಡ್ಡ ಗುಂಡಿಗೆ ಟ್ರ್ಯಾಕ್ಟರ್ ಪಲ್ಟಿ ಮಾಡಿದ ಪರಿಣಾಮ ಈ ಇಬ್ಬರು ಸಾವನ್ನಪ್ಪಿದ್ದಾರೆ.
ಉಳಿದಂತೆ ಸೋನುಕುಮಾರ ಪ್ರಭುಪ್ರಸಾದ ಸಹಾನಿ, ಚೋಟು ಗೋಪಾಲ ಸಾನಿ, ಅಜಯ ಸಹಾನಿ ಹಾಗೂ ನಾನ್ ಹಕ್ ಇವರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಘಟನೆ ಕುರಿತು ಗುತ್ತಲ ಪೊಲೀಸ ಠಾಣೆಯಲ್ಲಿ ಫಕ್ಕೀರಪ್ಪ ಅಂಬಿಗೇರ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.