ಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲಿಯದ ಬಿಗ್ ಬಾಸ್ ಪುಡಾರಿ ರಜತ್, ರೀಲ್ಸ್ ಹುಚ್ಚಿಗೆ ಪೆಟ್ರೋಲ್ ಬಾಂಬ್ ಸಿಡಿಸಿ ಹುಚ್ಚಾಟ, FIR ದಾಖಲು

Published : Apr 30, 2026, 10:13 AM IST
Bigg Boss Rajat in Legal Trouble Again Police File Case Over Risky Petrol Bomb Video

ಸಾರಾಂಶ

ಬಿಗ್ ಬಾಸ್ ಖ್ಯಾತಿಯ ರಜತ್, ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಬೆಂಗಳೂರಿನ ವಡೇರಹಳ್ಳಿ ರಸ್ತೆಯಲ್ಲಿ ಪೆಟ್ರೋಲ್ ಸ್ಫೋಟಿಸಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಈ ಕೃತ್ಯಕ್ಕಾಗಿ ಕಗ್ಗಲೀಪುರ ಪೊಲೀಸರು ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಜನರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲು.

ಬೆಂಗಳೂರು (ಏ.30) ರಾತ್ರಿಯ ನಿಶ್ಯಬ್ದ, ಜನರಿಲ್ಲದ ರಸ್ತೆ.. ಇದ್ದಕ್ಕಿದ್ದಂತೆ ಅಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಬಾಂಬ್ ಸ್ಫೋಟವಾದಂತೆ ಬೆಂಕಿಯ ಜ್ವಾಲೆ ಅಬ್ಬರಿಸಿತು! ನೋಡುವವರು ಬೆಚ್ಚಿಬಿದ್ದರು. ಇದು ಯಾವುದೋ ಸಿನಿಮಾದ ಶೂಟಿಂಗ್ ಅಲ್ಲ, ಬದಲಾಗಿ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ಕಾಮೆಂಟ್ಸ್‌ಗಾಗಿ ನಡೆದ ಅಪಾಯಕಾರಿ ಸ್ಟಂಟ್ ಹೀರೋಯಿಸಂ ತೋರಿಸೋಕೆ ರಜತ್ ಹುಚ್ಚಾಟ.

ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್ ಶೂಟಿಂಗ್!

ಹೌದು, ಬೆಂಗಳೂರಿನ ವಡೇರಹಳ್ಳಿ ರಸ್ತೆಯಲ್ಲಿ ಬಿಗ್ ಬಾಸ್ ಖ್ಯಾತಿಯ, ಒಳ್ಳೆ ನಡತೆಗಿಂತ ಕಾಂಟ್ರವರ್ಸಿ ಮಾಡ್ಕೊಂಡೇ ಆಡುವವರ ಬಾಯಲ್ಲಿ ಅಂತಾಗಿರುವ ರಜತ್ ನಡೆಸಿದ ಈ ಕಿಡಿಗೇಡಿತನ ಈಗ ಅವನನ್ನೇ ಕಾನೂನು ಸಂಕಷ್ಟಕ್ಕೆ ಸಿಲುಕಿಸಿದೆ. ಏಪ್ರಿಲ್ 24ರ ರಾತ್ರಿ 10ರಿಂದ 11 ಗಂಟೆಯ ಸುಮಾರಿಗೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಪೆಟ್ರೋಲ್ ತುಂಬಿಸಿ, ಸಾರ್ವಜನಿಕ ರಸ್ತೆಯಲ್ಲೇ ಸ್ಫೋಟಿಸಿ ರಜತ್ ಅಟ್ಟಹಾಸ ಮೆರೆದಿದ್ದ.

ವೈರಲ್ ವಿಡಿಯೋದಲ್ಲಿ ಏನಿದೆ?

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಾ, ಬಾಂಬ್ ಸ್ಫೋಟಿಸಿದ ರೀತಿ ರಸ್ತೆಯ ಮೇಲೆ ಬೆಂಕಿ ಹಚ್ಚಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತ ಕಗ್ಗಲೀಪುರ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದಾರೆ.

ಹಿಂದೆ ಮಚ್ಚು ತೋರಿಸಿ ಜೈಲಿಗೆ ಹೋಗಿಬಂದರೂ ಬುದ್ದಿ ಕಲಿಯದ ರಜತ್

ಪೆಟ್ರೋಲ್ ಬಾಂಬ್ ಸ್ಫೋಟದಿಂದ ಸಾರ್ವಜನಿಕರಿಗೆ ಆತಂಕ, ವಾಹನ ಸವಾರರಿಗೆ ತೊಂದರೆ, ರಸ್ತೆಯು ಕಪ್ಪಾಗಿದ್ದು, ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ರಜತ್ ವಿರುದ್ಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ FIR ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಜತ್‌ಗೆ ನೋಟೀಸ್ ನೀಡಿ ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ.

ರಜತ್ ವಿರುದ್ಧ ದಾಖಲಾದ ಪ್ರಕರಣಗಳು ಮತ್ತು ಸೆಕ್ಷನ್‌ಗಳು

ರಜತ್ ವಿರುದ್ಧ ಕಗ್ಗಲೀಪುರ ಠಾಣೆಯಲ್ಲಿ ಕಾನೂನು ಕುಣಿಕೆ ಬಿಗಿಯಾಗಿದೆ:

  • BNS 287, 292: ಸಾರ್ವಜನಿಕರಿಗೆ ತೊಂದರೆ ಕೊಡುವುದು ಮತ್ತು ನಿರ್ಲಕ್ಷ್ಯತನದ ವರ್ತನೆ.
  • IMV Act 177, 194D: ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ಸಂಚಾರಿ ನಿಯಮಗಳ ಉಲ್ಲಂಘನೆ.
  • PDPP Act 1984: ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ ಗಂಭೀರ ಆರೋಪ.

ರೀಲ್ಸ್ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ, ಸಾರ್ವಜನಿಕರ ಜೀವದ ಜೊತೆ ಆಟವಾಡುವವರಿಗೆ ಈ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಿದೆ!

PREV
Read more Articles on
click me!

Recommended Stories

ಹರಿಹರ ಪೀಠದಲ್ಲಿ ಶಾಂತಿಭಂಗಕ್ಕೆ ಯತ್ನ: 20 ಜನರ ಮೇಲೆ ಪ್ರಕರಣ
Kollegala Incident: ಪ್ರೀತಿ ಗೆದ್ದಿತ್ತು, ಆದರೆ ಹಣದ ಮುಂದೆ ಮದುವೆ ಸೋತಿತು! ಕೊಳ್ಳೇಗಾಲದ ಕಲ್ಯಾಣ ಮಂಟಪದಲ್ಲಿ ನಡುರಾತ್ರಿ ರಕ್ತಪಾತ!