ಡಾಕ್ಟರ್ ಪತ್ನಿ ಮರ್ಡರ್ ಕೇಸ್‌ಗೆ ಬಿಗ್ ಟ್ವಿಸ್ಟ್ : ರಹಸ್ಯ ಬಿಚ್ಚಿಟ್ಟ ಪೊಲೀಸರು

By Kannadaprabha News  |  First Published Feb 27, 2020, 11:31 AM IST

ಚಿಕ್ಕಮಗಳೂರಿನಲ್ಲಿ ನಡೆದ ವೈದ್ಯನ ಪತ್ನಿ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ರಹಸ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ. 


ಕಡೂರು [ಫೆ.27]:   ಕಡೂರಿನ ದಂತವೈದ್ಯ ಡಾ. ರೇವಂತ್‌ ಪತ್ನಿ ಕವಿತಾ ಕೊಲೆ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಕಡೂರು ಪೊಲೀಸರು ವೈದ್ಯ ತನ್ನ ಪ್ರೇಯಸಿ ಹರ್ಷಿತಾಗೆ ಕೊರಿಯರ್‌ ಮೂಲಕ ಕಳುಹಿಸಿದ್ದ 4.50 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಫೆ. 17ರಂದು ಕಡೂರು ಪಟ್ಟಣದ ಲಕ್ಷ್ಮೇಶನಗರದಲ್ಲಿ ಡಾ. ರೇವಂತ್‌ ಪತ್ನಿ ಕವಿತಾ ಕೊಲೆಯಾಗಿದ್ದು, ಚಿನ್ನಾಭರಣ ದೋಚಲು ಕೊಲೆ ಮಾಡಲಾಗಿದೆ ಎಂದು ರೇವಂತ್‌ ಪೋಲೀಸರಿಗೆ ದೂರು ನೀಡಿದ್ದರು. ಚಿನ್ನಾಭರಣ ತಾನೇ ತೆಗೆದುಕೊಂಡು ಬೀರೂರು ಪಟ್ಟಣದ ಕೋಯರ್‌ ಒಂದರ ಮೂಲಕ ತನ್ನ ಪ್ರೇಯಸಿ ಹರ್ಷಿತಾಗೆ ಕಳಿಸಿದ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡ ಪೋಲೀಸರು ಬೆಂಗಳೂರಿಗೆ ಹೋಗಿ ಆಕೆ ಮನೆಯಲ್ಲಿದ್ದ ಸುಮಾರು 4.50 ಲಕ್ಷ ರು. ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Latest Videos

undefined

ಪ್ರಕರಣದ ಕುರಿತು ಕಡೂರು ಪೋಲೀಸ್‌ ವೃತ್ತ ನಿರೀಕ್ಷಕ ಬಿ.ಎನ್‌ ಮಂಜುನಾಥ್‌ ಸುದ್ದಿಗೋಷ್ಠಿ ನಡೆಸಿ, ಡಾ. ರೇವಂತ್‌ ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದ ಹರ್ಷಿತಾಳೊಂದಿಗೆ ಇರುವ ಅಕ್ರಮ ಸಂಬಂಧಕ್ಕೆ ತನ್ನ ಹೆಂಡತಿ ಕವಿತಾ ಅಡ್ಡಿ ಪಡಿಸುತ್ತಾರೆ ಎಂಬ ಉದ್ದೇಶದಿಂದ ಹರ್ಷಿತಾ ಕುಮ್ಮಕ್ಕಿನಿಂದ ಸಂಚು ಸೃಷ್ಟಿಸಿ ಹರಿತವಾದ ಆಯುಧದಿಂದ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿದ್ದಾನೆ ಎಂದರು.

ಬೇರೆಯವರು ಕೊಲೆ ಮಾಡಿದ್ದಾರೆಂದು ರೇವಂತ್‌ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ತನ್ನ ಮನೆಯ ಹಿಂಬಾಗಿಲನ್ನು ತಾನೇ ಒಡೆದು ತೆರೆದು ಮನೆಯೊಳಗಿನ ಬೀರುವಿನಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತಾನೇ ತೆಗೆದುಕೊಂಡು ಹೋಗಿ ಕಳುವಾಗಿದೆ ಎಂದು ದೂರು ನೀಡಿದ್ದರು ಎಂದರು.

ಆತ್ಮಹತ್ಯೆಗೂ ಮುನ್ನ ಪ್ರೇಯಸಿಗೆ ಚಿನ್ನ ಕೋರಿಯರ್​ ಮಾಡಿದ್ದ ಡಾಕ್ಟರ್ ರೇವಂತ್...

ಸದರಿ ಆಭರಣಗಳನ್ನು ರೇವಂತ್‌ ಬೀರೂರಿನ ಕೊರಿಯರ್‌ ಒಂದರ ಮೂಲಕ ತನ್ನ ಪ್ರೇಯಸಿಗೆ ಕಳುಹಿಸಿದ್ದರು. ಸದರಿ ಪ್ರಕರಣದ ಜಾಡು ಹಿಡಿದ ಪೋಲೀಸರ ತನಿಖಾ ತಂಡವು ಬೆನ್ನು ಹತ್ತಿ ಬೆಂಗಳೂರಿಗೆ ತೆರಳಿ ಹರ್ಷಿತಾ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದರು.

ಆತ್ಮಹತ್ಯೆಗೂ ಮುನ್ನ ಪ್ರೇಯಸಿಗೆ ಚಿನ್ನ ಕೋರಿಯರ್​ ಮಾಡಿದ್ದ ಡಾಕ್ಟರ್ ರೇವಂತ್...

ಜನರ ಅಭಿನಂದನೆ: ಜಿಲ್ಲಾ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಹಾಗೂ ಹೆಚ್ಚುವರಿ ಅಧೀಕ್ಷಕರಾದ ಶೃತಿ ಮಾರ್ಗದರ್ಶನದಲ್ಲಿ ರಚನೆಯಾದ ಡಿವೈಎಸ್ಪಿ ರೇಣುಕಾಪ್ರಸಾದ್‌ ನೇತೃತ್ವದ ತಂಡದ ಕಡೂರು ವೃತ್ತ ನಿರೀಕ್ಷಕ ಮಂಜುನಾಥ್‌, ಕಡೂರು ಪಿಎಸ್‌ಐ ವಿಶ್ವನಾಥ್‌, ಸಖರಾಯಪಟ್ಟಣ ಪಿಎಸ್‌ಐ ರಾಜಶೇಖರ್‌, ಸಖರಾಯಪಟ್ಟಣ ಪಿಎಸ್‌ಐ ಮೌನೇಶ್‌, ಜಿಲ್ಲಾ ಪೊಲೀಸ್‌ ಕಚೇರಿ ವೈಜ್ಞಾನಿಕ ತನಿಖಾ ತಂಡದ ರಕ್ಷಿತ್‌, ನಯಾಜ್‌, ರಬ್ಬಾನಿ, ಶೇಷಾದ್ರಿ, ಕಡೂರು ಬೀರೂರು ವೃತ್ತದ ಎಎಸ್‌ಐ ವೇದಮೂರ್ತಿ, ಸಿಬ್ಬಂದಿ ಕೃಷ್ಣಮೂರ್ತಿ, ಚಂದ್ರಶೇಖರ್‌, ವಸಂತಕುಮಾರ್‌, ರಮೇಶ್‌, ಮಲ್ಲಪ್ಪ, ಮಧು, ರಾಜಪ್ಪ, ರವಿ, ಹೇಮಂತ್‌, ಮಧುಕುಮಾರ್‌, ವಿದ್ಯಾಶಂಕರ, ನಜೀರ್‌, ಈಶ್ವರ್‌, ಗೋಪಾಲ್‌, ಮಧು ಬೀರೇಶ್‌, ಕಿರಣ, ಕಿಶೋರ್‌, ಗೋಪಾಲ್‌, ಅಣ್ಣಯ್ಯ ಅವರಿಗೆ ಪೋಲೀಸ್‌ ವರಿಷ್ಟಾಧಿಕಾರಿ ಮತ್ತು ತಾಲೂಕಿನ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

click me!