Big 3 Koppal Strory: ಮಾದಿನೂರ ಗ್ರಾಮದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ನೆರೆಯ ಕಿನ್ನಾಳ ಗ್ರಾಮದ ಪ್ರೌಢ ಶಾಲೆಗೆ ಹೋಗ್ತಾರೆ. ಎರಡೂ ಗ್ರಾಮದ ಮಧ್ಯೆ ಹಿರೇ ಹಳ್ಳ ಹರಿಯುತ್ತಿದ್ದು ಮಕ್ಕಳು ಶಿಕ್ಷಣ ಪಡೆಯೋಕೆ ನಿತ್ಯ ಹರ ಸಾಹಸ ಪಡೆಯಬೇಕಿದೆ.
ಕೊಪ್ಪಳ (ಅ. 14): ಆ ಗ್ರಾಮದ ಜನ ಅಲ್ಲಿ ನಿತ್ಯ ಓಡಾಡ್ಬೇಕು ಅಂದ್ರೆ ಪರದಾಡ ಬೇಕಿದೆ. ಅವರ ನರಕ ಯಾತನೆ ನೋಡಿ ದ್ರೆ ನಿಮ್ಮ ಪಿತ್ತ ನೆತ್ತಿಗೇರುತ್ತೆ. ಆ ಜನರಿಗೆ ಅದೊಂದು ವ್ಯವಸ್ಥೆ ಮಾಡಿ ಕೊಡೋಕೆ ಇಲ್ಲಿ ತನಕ ಆಗಿಲ್ಲ. ಯೆಸ್, ಒಂದ್ಕಡೇ ಹಳ್ಳ, ಇನ್ನೊಂದ್ಕಡೆ ಅಂಗೈಯಲ್ಲಿ ಜೀವ ಹಿಡಿದು ಹಳ್ಳದಲ್ಲಿ ಶಾಲೆಗೆ ಹೋಗ್ತಿರೋ ವಿದ್ಯಾರ್ಥಿಗಳ ಗುಂಪು. ಗ್ರಾಮದ ಜನ ನಿತ್ಯ ಮೊಣಕಾಲಿನ ತನಕ ನೀರನ್ನ ದಾಟಿಕೊಂಡು ಆ ಕಡೆಯಿಂದ ಈ ಕಡೇ, ಈ ಕಡೇಯಿಂದ ಆ ಕಡೇ ಹೋಗ್ಬೇಕು. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಕೊಪ್ಪಳ ತಾಲೂಕಿನ ಮಾದಿನೂರ ಗ್ರಾಮದಲ್ಲಿ. ಈ ಗ್ರಾಮದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ನೆರೆಯ ಕಿನ್ನಾಳ ಗ್ರಾಮದ ಪ್ರೌಡ ಶಾಲೆಗೆ ಹೋಗ್ತಾರೆ. ಎರಡೂ ಗ್ರಾಮದ ಮಧ್ಯೆ ಹಿರೇ ಹಳ್ಳ ಹರಿಯುತ್ತಿದ್ದು ಮಕ್ಕಳು ಶಿಕ್ಷಣ ಪಡೆಯೋಕೆ ನಿತ್ಯ ಹರ ಸಾಹಸ ಪಡೆಯಬೇಕಿದೆ.
ಇಷ್ಟು ದಿನ ಈ ವಿದ್ಯಾರ್ಥಿಗಳು ಹಂಗೋ, ಹಿಂಗೋಕಷ್ಟ ಪಟ್ಟುಕೊಂಡು ಹಳ್ಳದಾಟಿ ಮೊಳಕಾಲುದ್ದ ನೀರಲ್ಲೆ ಶಾಲೆಗೆ ಹೋಗ್ತಿದ್ದರು. ಆದ್ರೆ ಇತ್ತಿಚಿಗೆ ಮರಳು ಮಾಫಿಯಾದ ಜಾಲಕ್ಕೆ ವಿದ್ಯಾರ್ಥಿಗಳ ಭವಿಷ್ಯವೇ ಕತ್ತಲಾಗೋ ಆತಂಕ ಎದುರಾಗಿದೆ. ಯಾಕೆಂದ್ರೆ ಹಳ್ಳದ ತುಂಬೆಲ್ಲಾ ಮರಳು ಲೂಟಿ ಮಾಡಲು ಎಲ್ಲೆಂದರಲ್ಲಿ ದೊಡ್ಡ ತಗ್ಗು ಗುಂಡಿಗಳನ್ನ ತೆಗೆಯಲಾಗಿದೆ. ಸಮತಟ್ಟದ ರಸ್ತೆಯನ್ನೇ ಅಗೆಯಲಾಗಿದ್ದು, ಅಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಬರುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಎಲ್ಲಿ ಎಷ್ಟು ನೀರು ಇದೆ ಎನ್ನೋದೆ ಗೊತ್ತಾಗುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪಡಬಾರದ ಕಷ್ಟಪಡುತ್ತಿದ್ದಾರೆ.
undefined
ಬಸ್ ಸಂರ್ಪಕವಿಲ್ಲ: ಇನ್ನು, ಮೊದಲೇ ಕಿನ್ನಾಳ ಹಾಗೂ ಮಾದಿನೂರು ಗ್ರಾಮದ ಮಧ್ಯೆ ಬಸ್ ಸಂರ್ಪಕವಿಲ್ಲ. ಹೀಗಾಗೇ ಇಲ್ಲಿನ ನೂರಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿಗೆ ಇದೇ ಕಾಲು ದಾರಿಯೇ ಆಧಾರವಾಗಿತ್ತು. ಆದ್ರೆ ಇತ್ತಿಚೆಗೆ ಇದೇ ಹಳ್ಳದಲ್ಲಿ ಹಗಲು ರಾತ್ರಿ ಮರಳು ದಂಧೆ ನಡೆಯುತ್ತಿರೋದ್ರಿಂದ ಇರೋ ಕಾಲು ದಾರಿಯು ಕೂಡ ಭಯದಲ್ಲಿ ಸಾಗುವಂತೆ ಮಾಡಿದೆ. ಇಲ್ಲಿನ ಸ್ಥಳೀಯರ ಮರಳು ಮಾಫಿಯಾವನ್ನ ತಡೆಗಟ್ಟವಂತೆ ಒತ್ತಡ ಹಾಕುತ್ತಿದ್ದಾರೆ. ಸಾಕಷ್ಟು ಬಾರಿ ಜನಪ್ರತಿ ನಧಿಗಳಿಗೆ ಮಾಹಿತಿ ನೀಡಿದ್ರು ಕ್ಯಾರೆ ಅನ್ನುತ್ತಿಲ್ಲ ಅಂತಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Big 3: ಮೂಲಸೌಕರ್ಯ ಕೊರತೆ: ದಾವಣಗೆರೆಯ ಹೊಸ ಚಿಕ್ಕನಹಳ್ಳಿ ನಿವಾಸಿಗಳ ನರಕಯಾತನೆ
ಜಲಾಶಯದಿಂದ ನೀರು ಬಿಟ್ಟರೆ ಶಾಲಾ/ ಕಾಲೇಜಿಗೆ ಹೋಗಲಸಾಧ್ಯ: ಇನ್ನು ಹಿರೇಹಳ್ಳ ಜಲಾಶಯದಿಂದ ನೀರು ಬಿಟ್ಟರೆ ನೀರು ಕಡಿಮೆ ಆಗುವವರೆಗೂ ವಿದ್ಯಾರ್ಥಿಗಳು ಶಾಲಾ,ಕಾಲೇಜಿಗೆ ಹೋಗಲು ಆಗುವುದಿಲ್ಲ.ಯಾವಾಗ ನೀರು ಕಡಿಮೆ ಆಗುತ್ತದೆಯೋ ಆಗ ವಿದ್ಯಾರ್ಥಿಗಳು ಶಾಲೆ,ಕಾಲೇಜಿಗೆ ತೆರ ಳುತ್ತಾರೆ. ಇನ್ನು ಕಿನ್ನಾಳ್ ಗ್ರಾಮಕ್ಕೆ ಹೋಗಲು ಬಸ್ ಸಂಪರ್ಕ ಇರಲಾರದ ಕಾರಣಕ್ಕೆ ವಿದ್ಯಾರ್ಥಿಗಳು ಪ್ರತಿನಿತ್ಯ ಕಿನ್ನಾಳ್ ಗೆ ಹಳ್ಳದಲ್ಲಿಯೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಬಂದೊದಗಿದೆ.
ಇನ್ನು ಕಿನ್ನಾಳ್ ಗೆ ಬಸ್ ಸೌಲಭ್ಯ ಕಲ್ಪಿಸಿ ಎಂದು ಅನೇಕ ಬಾರಿ ಗ್ರಾಮಸ್ಥರು, ವಿದ್ಯಾರ್ಥಿಗಳು ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.ಹೀಗಾಗಿ ನಮಗೆ ಸೇತುವೆಯಾದರೂ ನಿರ್ಮಿಸಿ ಅಥವಾ ಬಸ್ ಆದರೂ ಬಿಡಿ ಅಂತಾರೆ ವಿದ್ಯಾರ್ಥಿಗಳು. ಒಟ್ನಲ್ಲಿ ತಮ್ಮ ಭವಿಷ್ಯದ ಮೊದಲ ಮೆಟ್ಟಿಲಾದ 10 ನೇ ತರಗತಿ ಒದೋಕೆ ಈ ಮಕ್ಕಳು ಪಡಬಾರದ ಕಷ್ಟ ಪಡು ತ್ತಿ ದ್ದಾರೆ. ದಿನ ಬೆಳಗಾದ್ರೆ ತಮ್ಮ ಜೀವನನ್ನ ಅಂಗೈಯಲ್ಲಿ ಹಿಡಿದುಕೊಂಡು ಶಾಲೆಗೆ ಹೋಗ್ತಿದ್ದಾರೆ. ಗ್ರಾಮಸ್ಥರು ಕೂಡ ಸಂಕಷ್ಟವನ್ನ ಎದುರಿಸುತ್ತಿದ್ದಾರೆ.