Big 3 Yadagiri Hospital Story: ಕೋಟಿ ಕೋಟಿ ಸುರಿದು ಆಸ್ಪತ್ರೆ ಕಟ್ಟಿದ್ದಾರೆ. ಆದ್ರೆ, ಇಲ್ಲೊಂದು ಶವಗಾರ ಇಲ್ಲದೇ ಇರೋದ್ರಿಂದ ಈ ಪರಿಸ್ಥಿತಿ ಬಂದಿದೆ.
ಯಾದಗಿರಿ (ಸೆ. 06): ಮನುಷ್ಯ ಸತ್ತ ಮೇಲೂ ಆತನಿಗೆ ನೆಮ್ಮದಿ ಇಲ್ಲವೇ ಇಲ್ಲ, ರಸ್ತೆ ಬದಿಯಲ್ಲೇ ನಡೆಯುತ್ತಿದೆ ಅಮಾನವೀಯ ಘಟನೆ, ಆ ದೃಶ್ಯಗಳನ್ನ ಕಂಡು ರಸ್ತೆಯಲ್ಲಿ ಓಡಾಡೋಕೂ ನಡುಗ್ತಿದ್ದಾರೆ ಜನ. ಹೌದು! ವೈಟ್ ಕಲರ್ ಜೀಪ್, ಅಡ್ಡವಾಗಿ ನಿಂತಿರೋ ಒಂದು ಬೈಕ್, ಇಬ್ಬರು ಪೊಲೀಸ್, ನೋಟ್ ಬುಕ್ ಹಿಡ್ಕೊಂಡು ನಿಂತಿರುವ ಮತ್ತೊಬ್ಬ... ಅಲ್ಲೇ ಪಕ್ಕದಲ್ಲಿ ಮತ್ತೆ ಮೂವರು. ಅಲ್ಲೊಬ್ಬರು ಕೆಳಗೆ ಕೂತು ಏನೋ ಮಾಡ್ತಿದ್ದಾರೆ. ಪ್ಲಾಸ್ಟಿಕ್ ಚೀಲದ ಮೇಲೆ ಹೆಣವಿದೆ. ಇಂಥದ್ದೊಂದು ಅಮಾನವೀಯ ಘಟನೆ, ದೃಶ್ಯ ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ.
ಕೋಟಿ ಕೋಟಿ ಸುರಿದು ಆಸ್ಪತ್ರೆ ಕಟ್ಟಿದ್ದಾರೆ. ಆದ್ರೆ, ಇಲ್ಲೊಂದು ಶವಗಾರ ಇಲ್ಲದೇ ಇರೋದ್ರಿಂದ ಹೆಣವನ್ನ ರಸ್ತೆ ಬದಿಯಲ್ಲಿಯೇ ಪೋಸ್ಟ್ ಮಾರ್ಟಂ ಮಾಡುವ ಪರಿಸ್ಥಿತಿ ಬಂದಿದೆ. ಮರಣೋತ್ತರ ಪರೀಕ್ಷೆ ಮಾಡಲು ರೂಂ ಇಲ್ಲದೇ ಹೆಣಗಾಡೋ ಪರಿಸ್ಥಿತಿ ಇಲ್ಲಿನ ಆರೋಗ್ಯ ಸಿಬ್ಬಂದಿಗಳದ್ದು.
undefined
ಮೃತ ದೇಹಗಳನ್ನು 2 ಕಿ.ಮೀಟರ್ ದೂರ ತೆಗೆದುಕೊಂಡು ಹೋಗ್ಬೇಕು. ಶವ ಹೊತ್ತು 2 ಕಿ.ಮಿ ಸಂಚರಿಸುವ ಸಿಬ್ಬಂದಿಗಳು, ಜೊತೆಗೆ ವೈದ್ಯಕೀಯ ಸಲಕರಣೆಗಳನ್ನು ತೆಗೆದುಕೊಂಡು ಹೋಗಬೇಕು. ನಂತರವೇ ಇಲ್ಲಿ ಪೋಸ್ಟ್ ಮಾರ್ಟಂ ನಡೆಯೋದು. ಈ ಅಮಾನವೀಯ ಘಟನೆಗೆ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
4 ಕೋಟಿ 90 ಲಕ್ಷ ರೂ. ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಿದ್ರು, ಮರಣೋತ್ತರ ಪರೀಕ್ಷೆಗೆ ಕೊಠಡಿಯೇ ಇಲ್ಲದಿರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇಲ್ಲೊಂದು 30 ವರ್ಷದ ಹಿಂದೆ ಕಟ್ಟಿದ ಶವಗಾರ ಇದೆ. ಅದು ಶಿಥಿ ಲಗೊಂಡು ಲಗಾಡೆದ್ದು ಹೋಗಿದೆ. ಇನ್ನು,ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದ್ರು ಯಾರಂದ್ರೆ ಯಾರೂ ತಲೆ ಕೆಡಿಸಿಕೊಳ್ತಿಲ್ಲ.
ಈ ಘಟನೆ ನೋಡಿದ್ರೆ ಮನುಷ್ಯ ಜೀವಂತ ಇದ್ದಾಗಲೂ ನೆಮ್ಮದಿ ಇಲ್ಲ. ಸತ್ತ ಮೇಲೂ ಆತನಿಗೆ ಗೌರವಯುತವಾಗಿ ಕಳಿಸಿ ಕೊಡೋ ಯೋಗ್ಯತೆಯೂ ನಮ್ಮನ್ನಾಳುವರಿಗೆ ಇಲ್ಲದಂತಾಗಿದೆ. ಇವತ್ತು ಬಿಗ್3ಯಲ್ಲಿ (Big 3) ಈ ವರದಿ ಪ್ರಸಾರ ಆದ್ಮೇಲಾದ್ರೂ ಈ ಸಮಸ್ಯೆ ಬಗೆ ಹರಿಯುತ್ತಾ ಎಂದು ಕಾದು ನೋಡಬೇಕಿದೆ