Big 3 Tumkur Gym Story: ಒಂದು ವರ್ಷದಿಂದ ಮೂಲೆ ಗುಂಪಾಗಿದ್ದ ಜಿಮ್ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ವರದಿಯ ಪರಿಣಾಮದಿಂದ ವಿದ್ಯಾರ್ಥಿಗಳ ಬಳಕೆಗೆ ಬಂದಿದೆ
ತುಮಕೂರು (ಅ. 12): ತುಮಕೂರಿನ (Tumkur) ಜೂನಿಯರ್ ಕಾಲೇಜು ಮೈದಾನ ಆವರಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಜಿಮ್ (Gym) ಮಾಡಿದ್ದರು. ಅದು ಕೂಡ ಸ್ಮಾರ್ಟ್ ಸಿಟಿ ಅನುದಾನದಲ್ಲಿ (Smart City Fund) ಬರೋಬ್ಬರಿ 50ಲಕ್ಷ ವೆಚ್ಚದಲ್ಲಿ. ಹೊಸ ಜಿಮ್‌ಗಾಗಿ ಹೊಸ ಕಟ್ಟಡ ಕೂಡ ನಿರ್ಮಾಣ ಮಾಡಿದ್ರು. ಹೊಸ , ಹೊಸ ಹಲವು ಬಗೆಯ ಜಿಮ್ ಸಲಕರಣೆಗಳನ್ನ ಕೂಡ ತರಿಸಲಾಗಿತ್ತು. ಆದ್ರೆ, ಜಿಮ್ ನಿರ್ಮಾಣಗೊಂಡು ವರ್ಷವೇ ಕಳೆದರೂ ಉದ್ಘಾಟನೆ ಆಗದೇ ಎಲ್ಲ ವೇಸ್ಟಾಗಿ ಬಿದ್ದಿತ್ತು. ಜೊತೆಗೆ ತುಕ್ಕು ಹಿಡಿಯುತ್ತಿತ್ತು. ಈ ಬಗ್ಗೆ ಬಿಗ್3ಯಲ್ಲಿ (Big 3) ವರದಿ ಪ್ರಸಾರ ಮಾಡಿ ಸಂಬಧ ಪಟ್ಟವರಿಗೆ ಲೈವ್ ನಲ್ಲಿ ಸಮಸ್ಯೆ ಬಗ್ಗೆ ಹೇಳಲಾಗಿತ್ತು.
ಬಿಗ್3ಯಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ತುಮಕೂರು ಜಿಲ್ಲಾಡಳಿತ (District Administration) ಎಚ್ಚೆತ್ತುಕೊಂಡಿತು. ಹೊಸ ಜಿಮ್ ಉದ್ಘಾಟನೆ ಯಾಕ್ ಮಾಡ್ತಿಲ್ಲ ಅನ್ನೋ ಸುದ್ದಿಯನ್ನ ಸ್ಥಳೀಯ ಶಾಸಕ ಜ್ಯೋತಿ ಗಣೇಶ್ ನೋಡಿದ್ರು. ತಕ್ಷಣವೇ ನಮ್ಮ ತುಮಕೂರು ಪ್ರತಿನಿಧಿಗೆ ಕರೆ ಮಾಡಿ ಎರಡು ದಿನದಲ್ಲಿ ಉದ್ಘಾಟನೆ ಮಾಡೋ ಭರವಸೆ ಕೊಟ್ಟಿದ್ರು.
ಇನ್ನು, ಬೆಳಗ್ಗೆಯೇ ಜಿಮ್ ಕೊಠಡಿಯನ್ನು ಸ್ವಚ್ಛಗೊಳಿಸಲಾಯ್ತು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗ ಸೇರಿಕೊಂಡು ಜಿಮ್ ಗೋಡೆಗಳಿಗೆ ಬಲುನ್ ಅಂಟಿಸಿ, ಬಾಗಿಲುಗಳನ್ನು ಹೂವಿನ ಹಾರದಿಂದ ಅಲಂಕರಿಸಿದ್ರು. ಬಳಿಕ ತುಮಕೂರು ಡಿಡಿಪಿಯು ಗಂಗಾಧರ್, ಸ್ಥಳೀಯ ಕಾರ್ಪೋರೇಟರ್ ಗಿರಿಜಾ ಧನ್ಯಕುಮಾರ್ ಟೇಪ್ ಕತ್ತಿರಿಸುವ ಮೂಲಕ ಜಿಮ್ ಉದ್ಘಾಟನೆ ಚಾಲನೆ ನೀಡಿದ್ರು.
BIG 3 Hero: ಹಸಿದವರ ಪಾಲಿನ ಅನ್ನದಾತ ಸ್ಯಾಮ್ಸನ್: ಮಾದರಿ ಪೊಲೀಸ್ ಠಾಣೆಯ PSI ಯತೀಶ್
ವರ್ಷದ ಸಮಸ್ಯೆಗೆ ಒಂದೇ ದಿನದಲ್ಲಿ ಪರಿಹಾರ: ಅರ್ಚಕರು ಪೂಜೆ ಸಲ್ಲಿಸಿ ವಿಘ್ನ ನಿವಾರಣೆಯ ಮಂತ್ರಗಳನ್ನು ಹೇಳಿದ್ರು. ಜೊತೆಗೆ ಜಿಮ್‌ಗೆ ಯಾವುದೇ ವಕ್ರದೃಷ್ಟಿ ಬಿರದಿರಲಿ ಎಂದು ಪೂಜೆ ಸಲ್ಲಿಸಿದ್ರು. ಈ ಸಂಭ್ರಮದಲ್ಲಿ ಪಾಲ್ಗೊಂಡ ಡಿಡಿಪಿಯು ಸುವರ್ಣ ನ್ಯೂಸ್ ಬಿಗ್ 3ಗೆ ಧನ್ಯವಾದ ಹೇಳಿದ್ರು. ಇನ್ನು, ಹೊಸ ಜಿಮ್ಗೆ ಚಾಲನೆ ಸಿಗುತ್ತಿದ್ದಂತೆ ವಿದ್ಯಾರ್ಥಿಗಳು ತಾಮುಂದು, ನಾಮುಂದು ಅಂತ ಕಸರತ್ತು ಶುರು ಮಾಡಿದ್ರು. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಕೂಡ ಜಿಮ್ ನಲ್ಲಿ ಕೆಲ ಹೊತ್ತು ಕಾಲ ಕಳೆದು ಸಂಭ್ರಮಿಸಿದ್ರು. ಒಂದು ವರ್ಷದಿಂದ ಆಗದ್ದು ಕೇವಲ ಒಂದೇ ಒಂದು ದಿನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್3 ಮೂಲಕ ಹೊಸ ಜಿಮ್ ಉದ್ಘಾಟನೆ ಆಗಿದೆ. ಹೀಗಾಗಿ, ಬಿಗ್ 3ಗೆ ಅಭಿನಂದನೆ ಕೂಡ ಹೇಳಿದ್ರು.
ತರಬೇತುದಾರರ ನೇಮಕ: ಕಾಲೇಜಿನಲ್ಲೇ ಇರುವ ದೈಹಿಕ ಶಿಕ್ಷಕರೇ ಸದ್ಯ ಜಿಮ್ ನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಶೀಘ್ರ ದಲ್ಲೇ ಇಬ್ಬರು ಜಿಮ್ ತರಬೇತುದಾರರನ್ನು ನೇಮಕ ಮಾಡಿಕೊಳ್ಳುವುದಾಗಿ ಡಿಡಿಪಿಯು ಮಾಹಿತಿ ನೀಡಿದ್ರು. ಒಟ್ಟಿನಲ್ಲಿ ಒಂದು ವರ್ಷದಿಂದ ಮೂಲೆ ಗುಂಪಾಗಿದ್ದ ಜಿಮ್ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ವರದಿಯ ಪರಿಣಾಮದಿಂದ ವಿದ್ಯಾರ್ಥಿಗಳ ಬಳಕೆಗೆ ಬಂದಿದೆ.