ಮಂಗಳೂರು: ದೆಹಲಿ ತಲುಪಿದ ಭಾರತ ಶಿಕ್ಷಣ ರಥಯಾತ್ರೆ

Published : Aug 01, 2019, 11:01 AM ISTUpdated : Aug 01, 2019, 11:07 AM IST
ಮಂಗಳೂರು: ದೆಹಲಿ ತಲುಪಿದ ಭಾರತ ಶಿಕ್ಷಣ ರಥಯಾತ್ರೆ

ಸಾರಾಂಶ

ಬಂಟ್ವಾಳದ ಪೊಳಲಿ ಕ್ಷೇತ್ರದಿಂದ ಹೊರಟ ಭಾರತ ಶಿಕ್ಷಣ ರಥಯಾತ್ರೆ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಗೋವಾ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಸಂಚರಿಸಿದ ರಥಯಾತ್ರೆ ಶಿಕ್ಷಣ ಜಾಗೃತಿಯನ್ನು ಮೂಡಿಸಿದೆ.

ಮಂಗಳೂರು(ಆ.01): ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಹಾಗೂ ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಪ್ರಕಾಶ್‌ ಅಂಚನ್‌ ನೇತೃತ್ವದಲ್ಲಿ ಜುಲೈ 21 ರಂದು ಬಂಟ್ವಾಳದ ಪೊಳಲಿ ಕ್ಷೇತ್ರದಿಂದ ಹೊರಟ ಭಾರತ ಶಿಕ್ಷಣ ರಥಯಾತ್ರೆ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದೆ.

ಕಳೆದ ಹತ್ತು ದಿನಗಳ ಅವಧಿಯಲ್ಲಿ ಗೋವಾ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಸಂಚರಿಸಿದ ರಥಯಾತ್ರೆ ಶಿಕ್ಷಣ ಜಾಗೃತಿಯನ್ನು ಮೂಡಿಸಿದೆ. ಆಗಸ್ವ್‌ 1ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಯಲಿದೆ.

ಇದರಲ್ಲಿ ರಾಜ್ಯದ ವಿವಿಧ ಭಾಗಗಳ ಶಿಕ್ಷಣ ಪ್ರೇಮಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂಟ್ವಾಳ ಜೇಸಿಐ ಸಂಸ್ಥೆ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಅದರ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಧರಣಿಯಲ್ಲಿ ಸೇರಿಕೊಳ್ಳಲಿದ್ದಾರೆ.

ಸಂಸದರ ಭೇಟಿ:

ಭಾರತ ಶಿಕ್ಷಣ ರಥಯಾತ್ರೆಯ ತಂಡದ ಸದಸ್ಯರು ಮಂಗಳೂರು ಸಂಸದ ನಳಿನ್‌ ಕುರ್ಮಾ ಕಟೀಲು ಅವರನ್ನು ದೆಹಲಿಯ ಮಹಾದೇವ್‌ ರಸ್ತೆಯಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿ ಬಳಿಕ ಮನವಿ ಸಲ್ಲಿಸಿತು.

ಕೋಲಾರ: ದಾಖಲಾತಿ ಹೆಚ್ಚಿಸಲು ಸೈಕಲ್‌ ವಿತರಣೆ

ಈ ಸಂದರ್ಭದಲ್ಲಿ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಸಮಿತಿಯ ಅಧ್ಯಕ್ಷ ಪ್ರಕಾಶ್‌ ಅಂಚನ…,ಕಾರ್ಯದರ್ಶಿ ಪುರುಷೋತ್ತಮ ಅಂಚನ, ಸದಸ್ಯ ರಾಮಚಂದ್ರ ಪೂಜಾರಿ ಕರೆಂಕಿ ಮೊದಲಾದವರು ಹಾಜರಿದ್ದರು. ಬಳಿಕ ಜಂತರ್‌ ಮಂತರ್‌ನಲ್ಲಿ ಸಿದ್ಧತೆಯನ್ನು ಪರಿಶೀಲಿಸಲಾಯಿತು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!