ಲವ್ ಜಿಹಾದ್, ಮತಾಂತರಿಗಳ ಬಗ್ಗೆ ಪ್ರತಿಯೊಬ್ಬ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಎಂದು ವಾಗ್ಮಿ, ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ಹಿಂದವಿ ಸ್ವರಾಜ್ಯ ಸಮಾವೇಶ ಯುವ ಸಮಿತಿ ಹಾಗೂ ದೈವ ಮಂಡಳಿ ಮುಡಸಾಲಿ ಮತ್ತು ತಾಲೂಕಿನ ಹಿಂದೂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿಂದವೀ ಸ್ವರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿದರು. 1
ಮುಂಡಗೋಡ (ಡಿ.21) : ಲವ್ ಜಿಹಾದ್, ಮತಾಂತರಿಗಳ ಬಗ್ಗೆ ಪ್ರತಿಯೊಬ್ಬ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಎಂದು ವಾಗ್ಮಿ, ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ಹಿಂದವಿ ಸ್ವರಾಜ್ಯ ಸಮಾವೇಶ ಯುವ ಸಮಿತಿ ಹಾಗೂ ದೈವ ಮಂಡಳಿ ಮುಡಸಾಲಿ ಮತ್ತು ತಾಲೂಕಿನ ಹಿಂದೂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿಂದವೀ ಸ್ವರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.
ಏಳು ನದಿಗಳು ಹರಿಯುವ ನಮ್ಮ ರಾಷ್ಟ್ರವನ್ನು ಸಪ್ತ ಸಿಂಧು ಹಿಂದೂ ಎಂದು ಕರೆಯಲಾಗಿದೆ. ಹಾಗಾಗಿ ಹಿಂದೂ ಬೇರೆಯಲ್ಲ. ಭಾರತ ಬೇರೆಯಲ್ಲ. ಹಿಂದೂ ಧರ್ಮ ಜಗತ್ತಿನ ಅತ್ಯಂತ ಪ್ರಾಚೀನ ಧರ್ಮವಾಗಿದೆ ಎಂದು ಹೇಳಿದರು.
undefined
Love Jihad: ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ಸ್ಥಾಪನೆ ಆಂದೋಲನ
ಭಾರತ ಎಲ್ಲಿವರೆಗೆ ಹಿಂದೂ ರಾಷ್ಟ್ರವಾಗಿತ್ತೋ ಅಲ್ಲಿವರೆಗೆ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿದ್ದ ಶ್ರೇಷ್ಟರಾಷ್ಟ್ರವಾಗಿತ್ತು. ಹೀನ ಗುಣವುಳ್ಳವರನ್ನು ನಾಶಪಡಿಸುವ ಗುಣ ಉಳ್ಳವರೇ ಹಿಂದೂಗಳು. ನಿನ್ನೆ, ಮೊನ್ನೆ ಹುಟ್ಟಿದಂತಹ ಮತಗಳು ಹೇಳ ಹೆಸರಿಲ್ಲದಂತೆ ನಾಶವಾಗಿ ಹೋದವು. 25 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ಹಿಂದೂ ಧರ್ಮ ಉಳಿದಿದೆ ಎಂದರೆ ನಾವು ಹಿಂದೂ ಧರ್ಮದ ಪ್ರತಿನಿಧಿಗಳು ಎನ್ನಲು ಹೆಮ್ಮೆ ಇರಬೇಕು ಎಂದರು.
25 ಸಾವಿರ ವರ್ಷಗಳ ಹಿಂದಿನ ಸನಾತನ ಧರ್ಮ ಹಿಂದೂ ಧರ್ಮದ ಮೇಲೆ ಹಲವಾರು ವಿದೇಶಿಗರು ಅತಿಕ್ರಮಣ ಮಾಡಿದರೂ ಅದನ್ನು ಮೆಟ್ಟಿನಿಂತು ಹಿಂದು ಧರ್ಮವನ್ನು ಉಳಿಸಿಕೊಂಡು ಬಂದಿರುವುದು ನಮ್ಮ ತಾಕತ್ತು ಎಂದರು.
ಲವ್ ಜಿಹಾದ್ ಬಗ್ಗೆ ಎಷ್ಟೇ ಹೇಳಿದ್ರೂ ಕಾಂಗ್ರೆಸ್ ತಲೆಕೆಡಿಸಿಕೊಂಡಿಲ್ಲ: ಸಚಿವ ಆರ್.ಅಶೋಕ್
ಸಮಾರಂಭದಲ್ಲಿ ಜ.ವೇದಾಂತಾಚಾರ್ಯ, ಮಂಜುನಾಥ ಶ್ರೀ, ಹಡಗಲಿ ಹಾಲಶ್ರೀ ಸಂಸ್ಥಾನ ಅಭಿನವ ಹಾಲಶ್ರೀ, ಸಾಲಗಾಂವ ಗೌರಮ್ಮಾಜಿ ಆಧ್ಯಾತ್ಮ ಮಂದಿರದ ವಿರೂಪಾಕ್ಷೇಶ್ವರ ಮಹಾರಾಜರು, ಹನಮಾಪುರ ಕಾಳಿಕಾ ಮಠದ ಡಾ.ಸೋಮಶೇಖರ ಶಿವಾಚಾರ್ಯ ಶ್ರೀ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಗದೀಶ ಅಗಸಿಮನಿ, ಮಂಜುನಾಥ ಗುಲ್ಯಾನವರ, ಅಣ್ಣಪ್ಪ ಕೇದಾರ, ಶಾಂತಕುಮಾರ ಕೆ., ಕಿರಣ ಟಿ., ರಾಕೇಶ ಎಂ., ಸಂತೋಷ ಜೆ., ಮಹೇಶ ಜಿ., ಕೃಷ್ಣ ಎಂ., ಪರಶುರಾಮ ಕೆ., ನಾರಾಯಣ ಬೆಡಸಗಾಂವ ಇದ್ದರು.