
ಬೆಂಗಳೂರು (ಫೆ.08): ಬೆಸ್ಕಾಂ ತುರ್ತು ಕಾಮಗಾರಿ ಹಿನ್ನೆಲೆ ಬೆಂಗಳೂರಿನಲ್ಲಿ ಫೆಬ್ರವರಿ 9 ಭಾನುವಾರ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಈ ಬಗ್ಗೆ ಬೆಂಗಳೂರು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 66/11 kV ನಂದಿನಿ ಲೇಔಟ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 01:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ ವಿದ್ಯುತ್ ಕಡಿತ?: ಕೃಷ್ಣಾನಂದ ನಗರ, RMC ಯಾರ್ಡ್, ಮಾರಪ್ಪನ ಪಾಳ್ಯ, ಯಶವಂತಪುರ ಕೈಗಾರಿಕಾ ಪ್ರದೇಶ, ದೂರವಾಣಿ ವಿನಿಮಯ ಕೇಂದ್ರ, ಶಂಕರ್ ನಗರ, ಶ್ರೀಕಂಠೇಶ್ವರ ನಗರ, ಸೋಮೇಶ್ವರ ನಗರ, ಆಪ್ಮಾ ಯಾರ್ಡ್, ಮಹಾಲಕ್ಷ್ಮಿ ಲೇಔಟ್, ಗಣೇಶ ಬ್ಲಾಕ್, ಆಂಜನೇಯ ಟೆಂಪಲ್‌ರೋಡ್, ಸರಸ್ವತಿ ಪುರಂ, ದಾಸನಾಯಕ ಲೇಔಟ್, ದಾಸನಾಯಕ ಲೇಔಟ್, ದಾಸನಾಯಕ ಲೇಔಟ್ ಕೈಗಾರಿಕಾ ಪ್ರದೇಶ, ಜೆ.ಎಸ್.ನಗರ, ಜೆ.ಸಿ.ನಗರ, ಕುರುಬರಹಳ್ಳಿ, 60 ಅಡಿ ರಸ್ತೆ, 9ನೇ, 10ನೇ, 11ನೇ, 12ನೇ, 13ನೇ, 14ನೇ ಮತ್ತು 15ನೇ ಮುಖ್ಯ, ಜೆ.ಸಿ.ನಗರ, ಸಾರ್ವಜನಿಕ ರಸ್ತೆ, ಇವ್ಸ್, ರಾಜ್‌ಕುಮಾರ್ ಸಮಾಧಿ ರಸ್ತೆಗಳು, ಕ್ವಾಟ್ರಸ್ ಸುತ್ತಮುತ್ತ ಪ್ರದೇಶಗಳು. ರಾಜ್‌ಕುಮಾರ್ ಸಮಾಧಿ ರಸ್ತೆ ಸೇರಿದಂತೆ ಹಲವೆಡೆ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂನಿಂದ ಮನವಿ ಮಾಡಲಾಗಿದೆ.
ಸೊಳ್ಳೆಗಳ ನಾಶಕ್ಕೆ ಶಿರಾ ಕೆರೆಯಲ್ಲಿ ಪ್ರಯೋಗ: ರಾಜ್ಯದಲ್ಲೇ ಮೊದಲು!
9ಕ್ಕೆ ವಿದ್ಯುತ್ ವ್ಯತ್ಯಯ: ಶಿಕಾರಿಪುರ:ಶಿಕಾರಿಪುರ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಹಳೆಯ ಕಂಬ ತೆರವುಗೊಳಿಸಿ ಹೊಸದಾದ ಸ್ಟನ್ ಪೋಲ್ ಲೈನ್ ಕಾಮಗಾರಿ ನಡೆಯುವುದರಿಂದ ಫೆ.9 ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ ಪಟ್ಟಣ ವ್ಯಾಪ್ತಿಯ ಕೆಎಚ್‌ಬಿ ಬಡಾವಣೆ, ಇಂಡಸ್ಟ್ರಿಯಲ್, ಕೋರ್ಟ್ ಸುತ್ತಮುತ್ತ, ಕುಮದ್ವತಿ ಕಾಲೇಜು, ಶಾಹಿ ಗಾರ್ಮೆಂಟ್ಸ್, ಡಿಗ್ರಿ ಕಾಲೇಜು, ಆದಿ ಶಕ್ತಿ ದೇವಸ್ಥಾನ, ನಂದಿ ಹಳ್ಳಿ ಐಪಿ, ತಿಮ್ಲಾಪುರ, ತರಲಘಟ್ಟ, ತರಲಘಟ್ಟ ತಾಂಡಾ ಐಪಿ, ಹಳೆ ದೂಪದಹಳ್ಳಿ, ಹೊಸ ದೂಪದಹಳ್ಳಿ ಐಪಿ ಮಾರ್ಗ, ಕೆಂಗಟ್ಟೆ ವ್ಯಾಪ್ತಿಯ ಐಪಿ ಮಾರ್ಗ, ಎನ್‌ಜೆವೈ ಎರೆಕಟ್ಟೆ, ತಿಮ್ಲಾಪುರ, ನಂದಿಹಳ್ಳಿ, ಭದ್ರಾಪುರ, ಚನ್ನಳ್ಳಿ -2, ಸದಾಶಿವಪುರ, ಹೆಲಿಪ್ಯಾಡ್ ಹಾಗೂ ಮಾಸೂರು ರಸ್ತೆಯ ಐಪಿ ಮಾರ್ಗ, ಚನ್ನಳ್ಳಿ ಹಾಗೂ ಪುರದಾಳು ಐಪಿ ಮಾರ್ಗ, ಬೇಗೂರು, ನೆಲವಾಗಿಲು, ಐಪಿ ಲಿಮಿಟ್, ಎನ್‌ಜೆವೈ ಬೆಂಡೆಕಟ್ಟೆ ಮರಡಿ, ಜಾಲಿ ಮರಡಿ ತಾಂಡಾ, ಬೇಗೂರು, ದೊಡ್ಡ ತಾಂಡಾ, ಆಪಿನಕಟ್ಟೆ, ವಡ್ಡಗೆರೆ ತಾಂಡಾ, ಸದಾಶಿವ ಪುರ ತಾಂಡಾ, ಗಾಮಾ ಹಾಗೂ ಭದ್ರಾಪುರ ಐಪಿ ಲಿಮಿಟ್ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದ್ದು ಗ್ರಾಹಕರು ಸಹಕರಿಸುವಂತೆ ಇಲ್ಲಿನ ಮೆಸ್ಕಾಂ ಎಇಇ ತಿಳಿಸಿದ್ದಾರೆ.