ಕೇವಲ 24 ತಾಸಲ್ಲಿ 44 ಲಕ್ಷ ದಂಡ ವಿಧಿಸಿದ ಪೊಲೀಸರು!

By Web DeskFirst Published Sep 20, 2019, 7:06 AM IST
Highlights

ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಪೊಲೀಸರ ಭರ್ಜರಿ ಕಾರ್ಯಾಚರಣೆ| 24 ತಾಸಿನಲ್ಲಿ ತಾಸಲ್ಲಿ 44 ಲಕ್ಷ ದಂಡ ವಿಧಿಸಿದ ಪೊಲೀಸರು| ಸಂಚಾರ ನಿಯಮ ಜಾರಿಯಾದಾಗಿನಿಂದ ಡ್ರಂಕ್‌ ಆ್ಯಂಡ್‌ ಡ್ರೈವ್‌ ಪ್ರಕರಣ ಕಡಿಮೆಯಾಗಿವೆ| 

ಬೆಂಗಳೂರು:(ಸೆ.20) ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ತಮ್ಮ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು, ಬುಧವಾರ ಬೆಳಗ್ಗೆ 10ರಿಂದ ಗುರುವಾರ ಬೆಳಗ್ಗೆ 10ರವರೆಗೆ ನಗರದಲ್ಲಿ 12962 ಪ್ರಕರಣ ದಾಖಲು ಮಾಡಿದ್ದು, ಬರೋಬ್ಬರಿ 44,27,500 ದಂಡ ಸಂಗ್ರಹ ಮಾಡಿದ್ದಾರೆ.

ಇನ್ನು ಹೊಸ ಸಂಚಾರ ನಿಯಮ ಜಾರಿಯಾದಾಗಿನಿಂದ ಡ್ರಂಕ್‌ ಆ್ಯಂಡ್‌ ಡ್ರೈವ್‌ ಪ್ರಕರಣ ಕಡಿಮೆಯಾಗಿವೆ. ಕಳೆದ 24 ಗಂಟೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆಯ 32 ಪ್ರಕರಣಗಳು ಮಾತ್ರ ದಾಖಲಾಗಿವೆ. ವಾರಂತ್ಯದಲ್ಲಿ ಮದ್ಯ ಸೇವಿಸಿ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದರು.

ವಾಹನ ಸವಾರರಿಗೆ ಗುಡ್‌ ನ್ಯೂಸ್: ಕರ್ನಾಟಕದಲ್ಲೂ ದುಬಾರಿ ದಂಡಕ್ಕೆ ಬ್ರೇಕ್?

ಸವಾರ ಹೆಲ್ಮೆಟ್‌ ಧರಿಸದ 2616 ಪ್ರಕರಣ ದಾಖಲಿಸಿ 6,41,400 ಹೆಲ್ಮೆಟ್‌ ಧರಿಸದ ಹಿಂಬದಿ ಸವಾರರ ವಿರುದ್ಧ 1648 ಪ್ರಕರಣ ದಾಖಲಿಸಿ 4,50100 ದಂಡ ವಿಧಿಸಲಾಗಿದೆ. ಇನ್ನು ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ ಮಾಡಿದ್ದ 1851 ಮಂದಿಯಿಂದ 3,83,100 ದಂಡ ಸಂಗ್ರಹಿಸಲಾಗಿದೆ. 
 

click me!