ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆವ ವಿಶ್ವಕಪ್ ಪಂದ್ಯ ವೀಕ್ಷಿಸುವ ಕ್ರಿಕೆಟ್ ಪ್ರೇಮಿಗಳಿಗೆ ಸಂಚಾರಕ್ಕೆ ಬಿಎಂಟಿಸಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ಬೆಂಗಳೂರು (ಅ.19): ರಾಜ್ಯ ರಾಜಧಾನಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ವಿಶ್ವಕಪ್ ಪಂದ್ಯಗಳನ್ನು ವೀಕ್ಷಣೆ ಮಾಡಲು ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲ ಆಗುವಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ವತಿಯಿಂದ ಹೆಚ್ಚುವರಿಯಾಗಿ ಬಸ್‌ಗಳನ್ನು ಬಿಡಲಾಗಿದೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳು ವಿಶ್ವಕಪ್ ಪಂದ್ಯ ವೀಕ್ಷಣೆಗೆ ಸಾರ್ವಜನಿಕ ವಾಹನದಲ್ಲಿ ಸಂಚಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರಿನಲ್ಲಿ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದ ದಿನ ಬಿಎಂಟಿಸಿ ವತಿಯಿಂದ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ನೀಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 20, ಅಕ್ಟೋಬರ್ 26, ನವೆಂಬರ್ 04, ನವೆಂಬರ್ 09 ಮತ್ತು ನವೆಂಬರ್ 12ರಂದು ಒಟ್ಟು 5 ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಈ ದಿನಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಮಾರ್ಗವಾಗಿ ಹೆಚ್ಚುವರಿ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡಲಿವೆ ಎಂದು ಬಿಎಂಟಿಸಿ ತಿಳಿಸಿದೆ.
ಈಗಾಗಲೇ ಟ್ರಾಫಿಕ್ ರಹಿತ ಸಂಚಾರಕ್ಕೆ ಅನುಕೂಲ ಆಗಿರುವ ಮೆಟ್ರೋ ರೈಲುಗಳ ಹೆಚ್ಚುವರಿ ಸೇವೆ ನೀಡಲು ಮುಂದಾಗಿದೆ. ಹೆಚ್ಚುವರಿ ಮೆಟ್ರೋ ನಿಯೋಜನೆ ಬೆನ್ನಲ್ಲೇ ಇದೀಗ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ರಾತ್ರಿ ವೇಳೆ ಸಂಚಾರ ಮಾಡಲಿಕ್ಕೂ ಅನುಕೂಲ ಆಗಲಿದೆ. ಜೊತೆಗೆ, ಸ್ವಂತ ವಾಹನಗಳನ್ನು ಬಳಸದೇ ಸಾರ್ವಜನಿಕ ವಾಹನಗಳನ್ನು ಬಳಕೆ ಮಾಡಿದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವುದನ್ನು ತಡೆಯಬಹುದು ಎಂಬುದು ಸಂಚಾರ ಪೊಲೀಸ್ ಇಲಾಖೆಯ ಚಿಂತನೆಯಾಗಿದೆ.
ವಿಶ್ವಕಪ್ ಕ್ರಿಕೆಟ್‌ಗೆ ಆಫರ್ ಕೊಟ್ಟ ನಮ್ಮ ಮೆಟ್ರೋ: ಬೆಂಗಳೂರು ಪಂದ್ಯಕ್ಕೆ ವಿಶೇಷ ಟಿಕೆಟ್ ವ್ಯವಸ್ಥೆ
ಧರ್ಮಸ್ಥಳದಲ್ಲಿ ದುಷ್ಟರಿಗೆ ಬಲಿಯಾದ ಸೌಜನ್ಯಾ ಪ್ರತಿಮೆ ಪ್ರತಿಷ್ಠಾಪನೆ: 28ನೇ ಹುಟ್ಟುಹಬ್ಬ ಆಚರಣೆ
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಬಿಎಂಟಿಸಿ: ಹೊಸ ಮೆಟ್ರೋ ಫೀಡರ್ ಬಸ್ ಮಾರ್ಗಗಳನ್ನು ಪರಿಚಯಿಸಿದ ಬಿಎಂಟಿಸಿ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಫೀಡರ್ ಬಸ್ ಸೇವೆಯನನು ಅಕ್ಟೋಬರ್ 23ರಿಂದ ಕಾರ್ಯಾಚರಣೆಗೆ ಇಳಿಸಲಿದೆ. ಹೂಡಿ ಮೆಟ್ರೋ ನಿಲ್ದಾಣದಿಂದ ಹೂಡಿ, ಅಯ್ಯಪ್ಪನಗರ, ದೇವಸಂದ್ರ ಮಾರ್ಗವಾಗಿ ಕೆ.ಆರ್ ಪುರಂವರೆಗೆ 2 ಮೆಟ್ರೋ ಫೀಡರ್ ಬಸ್ ಸೇವೆಗಳು.
ಜೆಪಿನಗರ ಮೆಟ್ರೋ ನಿಲ್ದಾಣದಿಂದ ಆರ್.ವಿ ಡೆಂಟಲ್ ಕಾಲೇಜು, ಪುಟ್ಟೇನಹಳ್ಳಿ ಕ್ರಾಸ್, ಬ್ರಿಗೇಡ್ ಮಿಲೆನಿಯಂ ಮಾರ್ಗವಾಗಿ ಜೆ.ಪಿ ನಗರ 7 ನೇ ಹಂತದವರೆಗೆ 2 ಬಸ್ಸುಗಳು.
ಜಯನಗರ 9 ನೇ ಹಂತದಿಂದ ರಾಗಿಗುಡ್ಡ ರಾಘವೇಂದ್ರ ಸ್ವಾಮಿ ಮಠ, ಆರ್.ವಿ ಮೆಟ್ರೋ ನಿಲ್ದಾಣ, ಜಯನಗರ ಮೆಟ್ರೋ ನಿಲ್ದಾಣ, ಸಂಜಯಗಾಂಧಿ ಆಸ್ಪತ್ರೆ ಮೂಲಕ ಜಯನಗರ 9 ನೇ ಹಂತಕ್ಕೆ 1 ಬಸ್ಸು.
ಬನಶಂಕರಿಯಿಂದ ಜೆಪಿನಗರ ಆರನೇ ಹಂತ, ಆರ್.ವಿ ಡೆಂಟಲ್ ಕಾಲೇಜು, ಡೆಲ್ಮಿಯಾ, ಜೆಪಿನಗರ ಮೂರನೇ ಹಂತ, ಮಹದೇಶ್ವರ ಬಡವಾಣೆ ಮಾರ್ಗವಾಗಿ ಬಿಟಿಎಂ ಲೇಔಟ್ ವರೆಗೆ 2 ಬಸ್ಸುಗಳು ಸಂಚರಿಸಲಿವೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.