
ಬೆಂಗಳೂರು: ರ್ಯಾಪಿಡೊ ಬೈಕ್ ಸೇವೆ ಬೆಂಗಳೂರಿನ ಸಂಚಾರದ ಪ್ರಮುಖ ವ್ಯವಸ್ಥೆಯಾಗಿ ಬೆಳೆಯುತ್ತಿದೆ. ಈ ಮಧ್ಯೆ ಅಲ್ಲಿಲ್ಲಿ, ಆಗಾಗ ನಡೆಯುವ ಘಟನೆಗಳು ರಾಪಿಡೋ ಬೈಕ್ ವ್ಯವಸ್ಥೆ ಬೇಕಾ ಎಂಬ ಪ್ರಶ್ನೆಯನ್ನ ಸಹಜವಾಗಿಯೇ ಹುಟ್ಟು ಹಾಕುತ್ತವೆ.
ಇದೀಗ ಮಹಿಳೆಯೊಬ್ಬರು ರ್ಯಾಪಿಡೊ ಡ್ರೈವರ್ ಒಬ್ಬರಿಗೆ ಕಪಾಳ ಮೋಕ್ಷ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಬನಶಂಕರಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ನೂರಾರು ಜನರ ಸಮ್ಮುಖದಲ್ಲೇ ಮಹಿಳೆ ಕೆನ್ನೆಗೆ ಬಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಬೆನ್ನಲ್ಲೇ ರ್ಯಾಪಿಡೊ ಡ್ರೈವರ್‍ಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಗಿಗ್ ಕಾರ್ಮಿಕನ ಮೇಲೆ ಮಹಿಳೆಯೊಬ್ಬರು ನಡು ರಸ್ತೆಯಲ್ಲಿ ನಿಲ್ಲಿಸಿ ಹೊಡೆಯಬಹುದಾ ಎಂಬ ಪ್ರಶ್ನೆಯನ್ನ ನೆಟ್ಟಿಗರು ಎತ್ತಿದ್ದಾರೆ.
ಕೆಲವು ಮಾಹಿತಿಗಳ ಪ್ರಕಾರ.. ಇಬ್ಬರ ಮಧ್ಯೆ ಲೋಕೇಷನ್ ವಿಚಾರಕ್ಕೆ ಗಲಾಟೆ ಆಗಿದೆ. ರಾಪಿಡೋ ಲೋಕೇಷನ್‌ನ ತಪ್ಪಾಗಿದ್ದಕ್ಕೆ ಇಬ್ಬರ ಮಧ್ಯೆ ಸಣ್ಣದಾಗಿ ವಾದ ಶುರುವಾಗಿದೆ. ಹೀಗೆ ವಾದ-ಪ್ರತಿವಾದ ಶುರುವಾಗಿ ನಂತರ ಗಲಾಟೆ ವಿಕೋಪಕ್ಕೆ ತಿರುಗಿದೆ. ಆಗ ಮಹಿಳೆ ಡ್ರೈವರ್‍ನ ಕಪಾಳಕ್ಕೆ ಬಾರಿಸಿದ್ದಾರೆ. ಡ್ರೈವರ್ ಸುಮ್ಮನೆ ನಿಂತಿದ್ದಾನೆ. ಕೆಲವು ಮಾಹಿತಿಗಳ ಪ್ರಕಾರ.. ಬೈಕ್ ಮಾಡಿದ್ದ ಮಹಿಳೆ ಲೋಕೇಷನ್ ತಪ್ಪಾಗಿ ಹಾಕಿದ್ದಳು. ಪದೇ ಪದೇ ಲೋಕೇಷನ್ ಚೇಂಜ್ ಮಾಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
ಸದ್ಯ ಈ ವಿಡಿಯೋ ವೈರಲ್ ಆಗಿದೆ. ಪೊಲೀಸರು ಇದುವರೆಗೆ ಕ್ರಮ ಜರುಗಿಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯ ಆಗಿಲ್ಲ. ಇಲ್ಲಿ ಯಾರ ತಪ್ಪಿದೆ ಅನ್ನೋದು ಸರಿಯಾಗಿ ತಿಳಿದಿಲ್ಲ. ಆದರೆ ವೈರಲ್ ಆಗ್ತಿರುವ ವಿಡಿಯೋ ನೋಡಿ ಕೆಲವರು.. ಬನಶಂಕರಿ ಬಸ್ ನಿಲ್ದಾಣ ಬಳಿ ನಡೆದಿರುವ ಘಟನೆ ಇದು. ಆ್ಯಪ್‌ನಲ್ಲಿ ಸ್ಥಳ ಹೊಂದಾಣಿಕೆಯಾಗದ ಕಾರಣ ಮಹಿಳಾ ಪ್ರಯಾಣಿಕರೊಬ್ಬರು ಹಾಡಹಗಲೇ ರ್ಯಾಪಿಡೊ ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ.
ಸದ್ಯ ವಿಡಿಯೋ ಮಹಿಳೆಯ ಪರ ವಿರೋಧಗಳಿಗೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಅನೇಕ ಬಳಕೆದಾರರು ವಿಡಿಯೋಗೆ ಕಾಮೆಂಟ್ ಮಾಡಿ.. ಕ್ಯಾಪ್ಟನ್ ಅವರನ್ನು ಬೆಂಬಲಿಸಲು ಮತ್ತು ಅಂತಹ ಹಲ್ಲೆಗಳಿಂದ ಅವರನ್ನು ರಕ್ಷಿಸಲು ನೀವು ಯಾವ ಕ್ರಮ ತೆಗೆದುಕೊಳ್ಳುತ್ತಿದ್ದೀರಿ ಎಂದು ಕಂಪನಿಗೆ ಪ್ರಶ್ನೆ ಮಾಡಿದ್ದಾರೆ. ಮಹಿಳೆ ಹೊಡೆದರೆ ಪರವಾಗಿಲ್ಲ, ಅವನು ಸಮರ್ಥಿಸಿಕೊಂಡಿದ್ದರೆ ಅಥವಾ ಪ್ರತಿದಾಳಿ ಮಾಡಿದ್ದರೆ ಏನಾಗುತ್ತಿತ್ತು? ಪೊಲೀಸ್ ಕೇಸ್ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
ಇನ್ನು ಕೆಲವರು ಬೆಂಗಳೂರು ಸಿಟಿ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ. ಕಾನೂನಿನ ಪ್ರಕಾರ ಮಹಿಳೆಯರ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು? ಪುರುಷನೂ ಆತ್ಮರಕ್ಷಣೆಗೆ ಹೊಣೆಗಾರನಾಗುತ್ತಾನೆಯೇ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ವಿಡಿಯೋ ತೆಗೆಯುವ ಬದಲು ಆ ವ್ಯಕ್ತಿ ಮಧ್ಯಪ್ರವೇಶಿಸಬೇಕಿತ್ತು. ನಾವು ಭಯಾನಕ ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಮನುಷ್ಯರಿಗೆ ಯಾವುದೇ ಬೆಲೆ ಇಲ್ಲ. ವಿಶೇಷವಾಗಿ ಈಗ AI ಸ್ಫೋಟದ ನಂತರ ಎಂದಿದ್ದಾರೆ.
🚨 Bengaluru Shocked: Rapido Captain Allegedly Assaulted Over App Location Error! 😱
A viral video from Banashankari Bus Stop shows a woman passenger allegedly assaulting a Rapido captain in broad daylight over a location mismatch in the app. https://t.co/STQNSszidG
— Pulse of the People (@CitizenPulseX) October 21, 2026