Bengaluru: ಮನೆ ತಲುಪಲು ಜಸ್ಟ್ 3KM ಬಾಕಿ, ಹದಗೆಟ್ಟ ರಸ್ತೆಗೆ ಬಲಿಯಾದ ಮಹಿಳೆ; ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

Published : Aug 13, 2026, 06:03 PM IST
Bengaluru Medha

ಸಾರಾಂಶ

ಕೇರಳ ಮೇಧಾ ಆಕರ್ಷ್ ಅವರು ಇಪಿಎಫ್ಒದಲ್ಲಿ ಉದ್ಯೋಗಿಯಾಗಿದ್ದು, ಅವರಿಗೆ ಮೂರು ವರ್ಷದ ಮಗು ಕೂಡ ಇತ್ತು. ಕಳಪೆ ರಸ್ತೆಯೇ ಅಪಘಾತಕ್ಕೆ ಕಾರಣವಾಗಿದ್ದು, ಅವರ ನ್ಯಾಯಬೇಕು ಎಂದು ಸ್ಥಳೀಯರು ಪ್ರತಿಘಟನೆ ನಡೆಸಿದ್ದಾರೆ.

ಆನೇಕಲ್: ಹದಗೆಟ್ಟ ರಸ್ತೆಯಲ್ಲಿ ಬೈಕ್ ಸ್ಕೀಡ್ ಆದ ಕಾರಣ 32 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಅನಂತ ನಗರದಲ್ಲಿ ನಡೆದಿದೆ. ಕೇರಳ ಮೂಲದ ಮೇಧಾ ಆಕರ್ಷ್ ಬೆಳಗ್ಗೆ ಎಂದಿನಿಂತೆ ಮನೆಯ ಕಡೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.

ಮೂರು ವರ್ಷದ ಮಗ ಹೊಂದಿದ್ದ ಮೇಧಾ

ವ್ಯಕ್ತಿಯೊಬ್ಬರು ಏಕಾಏಕಿ ರಸ್ತೆಗೆ ಬಂದ ಕಾರಣ ಸ್ಕೂಟರ್ ಮುಂದೆ ಹೋಗುತ್ತಿದ್ದ ಕಾರು ಚಾಲಕ ಸಡನ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹಿಂಭಾಗದಲ್ಲಿ ಬರ್ತಿದ್ದ ಸ್ಕೂಟರ್ ಚಾಲಕ ಬ್ರೇಕ್ ಹಾಕಿದ್ದು, ಆದರೆ ರಸ್ತೆ ಸರಿ ಇಲ್ಲದ ಕಾರಣ ಸ್ಕೂಟರ್ ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ಬೈಕ್ ಹಿಂಭಾಗದಲ್ಲಿ ಕುಳಿತ್ತಿದ್ದ ಮೇಧಾ ರಸ್ತೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲಿ ಸಾಗುತ್ತಿದ್ದ ಗೂಡ್ಸ್ ಗಾಡಿ ಅವರ ಮೇಲೆ ಹರಿದಿದ್ದು, ಮೇಧಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಮೇಧಾ ಅವರಿಗೆ ಮೂರು ವರ್ಷದ ಮಗ ಇದ್ದು, ಇಡೀ ಕುಟುಂಬಸ್ಥರಿಗೆ ಈ ಅಪಘಾತ ಬಿಗ್ ಶಾಕ್ ನೀಡಿದೆ.

ಇನ್ನು, ಅಪಘಾತಕ್ಕೆ ಕಾರು ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದೆ ಕಾರಣ ಎಂದು ಪೊಲೀಸರು ಗುರುತಿಸಿದ್ದಾರೆ. ಆದರೆ ಕೆಸರುಮಯವಾಗಿದ್ದ ರಸ್ತೆಯಲ್ಲಿ ಸಡನ್ ಬ್ರೇಕ್ ಹಾಕಿದ್ದರಿಂದ ಸ್ಕೂಟರ್ ಬ್ಯಾಲೆನ್ಸ್ ಮಿಸ್ ಆಗಿ ದುರಂತ ನಡೆದಿದೆ ಅನ್ನೋದು ಕೂಡ ಇಲ್ಲಿ ಮುಖ್ಯವಾಗುತ್ತದೆ.

ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ

ಮೇಧಾ ಅವರ ಸಾವಿನ ಬೆನ್ನಲ್ಲೇ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಚಂದಾಪುರ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅಪಘಾತಗಳು ಹೆಚ್ಚಾಗಿದ್ದು, ಸ್ಥಳೀಯರು ಮೇಣದಬತ್ತಿ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅಪಘಾತಕ್ಕೆ ಗುಂಡಿಯೇ ಕಾರಣ, ರಸ್ತೆ ಅಭಿವೃದ್ಧಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರು ನಿರ್ಲಕ್ಷ್ಯ ಮಾಡಲಾಗಿದೆ. ಹಲವು ಮಾರ್ಗದಗಳನ್ನು ದುರಸ್ತಿಯ ನೆಪದಲ್ಲಿ ಅಗೆದು ಬಿಟ್ಟುಬಿಟ್ಟಿದ್ದಾರೆ. ಮೃತ ಮಹಿಳೆ ಸಾವಿಗೆ ನ್ಯಾಯ ಒದಗಿಸುವಂತೆ ಅನಂತ ನಗರ ನಿವಾಸಿಗಳು ಆಗ್ರಹಿಸಿದ್ದಾರೆ.

ಹದಗೆಟ್ಟ ರಸ್ತೆಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ರಸ್ತೆಗಳನ್ನು ಅಭಿವೃದ್ಧಿ ಮಾಡುವಂತೆ ಆಗ್ರಹಿಸಿರುವ ಸ್ಥಳೀಯರು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವೇಳೆ ಪ್ರತಿಟನಾಕಾರರನ್ನು ಸಮಾಧಾನ ಮಾಡಿದ ಅಧಿಕಾರಿಗಳು, ಒಂದು ವಾರದಲ್ಲಿ ರಸ್ತೆಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಅನಂತ ನಗರದಲ್ಲಿ ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದೆ, BWSSB ವತಿಯಿಂದ ಕಾಮಗಾರಿ ಪ್ರಗತಿಯಲ್ಲಿದೆ. ಯುಜಿಡಿ ಕಾಮಗಾರಿ ಮುಗಿದ ಬಳಿಕ ಪೂರ್ಣ ಪ್ರಮಾಣದಲ್ಲಿ ರಸ್ತೆಗಳ ಅಭಿವೃದ್ಧಿ ಆಗಲಿದೆ ಎಂದು ಹೇಳಿದ್ದಾರೆ.

PREV
Read more Articles on
click me!

Recommended Stories

GBA: ಮೂರು ವರ್ಷಗಳ ಬಳಿಕ ಮತ್ತೆ ಆ ಯೋಜನೆ ಜಾರಿ? GBAಯಿಂದ ಬಂತು ಬಿಗ್‌ ಅಪ್ಡೇಟ್‌; ಗೌರಿ ಗಣೇಶ ಹಬ್ಬಕ್ಕೆ ಬರಲಿದೆ ಬಂಪರ್‌ ಗಿಪ್ಟ್‌?
Bengaluru New parking policy: ವಾಹನ ಸವಾರರಿಗೆ ಬಿಗ್‌ಶಾಕ್; ಇನ್ಮೇಲೆ ರಸ್ತೆ ಪಕ್ಕ ವೆಹಿಕಲ್ ಪಾರ್ಕ್ ಮಾಡಿದರೆ ಕಟ್ಟಬೇಕು ಹಣ, ಇಲ್ಲಿದೆ ಶುಲ್ಕ ಪಟ್ಟಿ!