ದಸರಾ ಸಂಭ್ರಮದಲ್ಲಿ ಕರಾವಳಿಗೆ ರೈಲ್ವೆ ಇಲಾಖೆಯ ವಿಶೇಷ ಕೊಡುಗೆ, ಟಿಕೆಟ್ ಈಗಲೇ ಬುಕ್‌ ಮಾಡಿ

Published : Sep 25, 2025, 07:58 PM IST
Railway Recruitment Board

ಸಾರಾಂಶ

ದಸರಾ ಹಬ್ಬದ ಪ್ರಯುಕ್ತ, ನೈರುತ್ಯ ರೈಲ್ವೆ ಇಲಾಖೆಯು ಬೆಂಗಳೂರಿನ ಯಶವಂತಪುರದಿಂದ ಮಂಗಳೂರಿಗೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಸಂಚರಿಸಲಿರುವ ಈ ರೈಲು, ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ನೆರವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಜನತೆಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಸಂತಸದ ಸುದ್ದಿ ಬಂದಿದೆ. ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲು ಸೇವೆ ಘೋಷಿಸಲಾಗಿದೆ. ಈ ಸೇವೆ ಹಬ್ಬದ ಸಂಭ್ರಮದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ನೆರವಾಗಲಿದೆ. ದಸರಾ ಜೊತೆಗೆ ದೀಪಾವಳಿ ಹಬ್ಬವೂ ಹತ್ತಿರದಲ್ಲಿರುವುದರಿಂದ ಈ ಸೇವೆ ದೂರದ ಊರಿನಲ್ಲಿರುವವರಿಗೆ ತಮ್ಮ ತಾಯಿನಾಡಿಗೆ ತೆರಳಲು ಅತ್ಯಂತ ಸಹಾಯಕವಾಗಲಿದೆ

ವಿಶೇಷ ರೈಲಿನ ವೇಳಾಪಟ್ಟಿ

ಸೆಪ್ಟೆಂಬರ್ 30ರಂದು ರಾತ್ರಿ 11.55 ಗಂಟೆಗೆ ಯಶವಂತಪುರ ಜಂಕ್ಷನ್‌ನಿಂದ ರೈಲು ಸಂಖ್ಯೆ 06257 ಹೊರಟು, ಅಕ್ಟೋಬರ್ 1ರಂದು ಬೆಳಿಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಅದೇ ದಿನ ಅಂದರೆ ಅಕ್ಟೋಬರ್ 1ರಂದು ಮತ್ತೊಂದು ರೈಲು ಮಧ್ಯಾಹ್ನ 2.35ಕ್ಕೆ ಮಂಗಳೂರು ಜಂಕ್ಷನ್‌ನಿಂದ ರೈಲು ಸಂಖ್ಯೆ 06258 ಹೊರಟು, ಅದೇ ದಿನ ರಾತ್ರಿ 11.30ಕ್ಕೆ ಯಶವಂತಪುರ ಜಂಕ್ಷನ್ ತಲುಪಲಿದೆ.

ನಿಲುಗಡೆ ಸ್ಥಳಗಳು

ಈ ವಿಶೇಷ ರೈಲುಗಳು ಕೆಳಗಿನ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ:

ಬಂಟ್ವಾಳ

ಕಬಕ ಪುತ್ತೂರು

ಸುಬ್ರಹ್ಮಣ್ಯ ರಸ್ತೆ

ಸಕಲೇಶಪುರ

ಹಾಸನ ಜಂಕ್ಷನ್

ಚನ್ನರಾಯಪಟ್ಟಣ

ಕುಣಿಗಲ್

ಬೋಗಿಗಳ ವಿನ್ಯಾಸ

ಪ್ರಯಾಣಿಕರ ಸೌಕರ್ಯಕ್ಕಾಗಿ ರೈಲಿನಲ್ಲಿ ಒಟ್ಟು 22 ಬೋಗಿಗಳನ್ನು ಅಳವಡಿಸಲಾಗಿದೆ:

2 ಲಗೇಜ್‌ ಕಂ ಗಾರ್ಡ್‌ ಕೋಚ್‌

4 ಜನರಲ್‌ ಕೋಚ್‌

11 ಸ್ಲೀಪರ್‌ ಕ್ಲಾಸ್‌ ಬೋಗಿ

3 ತೃತೀಯ ದರ್ಜೆ ಎಸಿ ಕೋಚ್‌

2 ದ್ವಿತೀಯ ದರ್ಜೆ ಎಸಿ ಕೋಚ್‌

ಟಿಕೆಟ್ ಬುಕ್ಕಿಂಗ್ ಆರಂಭ

ಈ ವಿಶೇಷ ರೈಲುಗಳಿಗೆ ಈಗಾಗಲೇ ಆನ್‌ಲೈನ್ ಹಾಗೂ ರೈಲು ನಿಲ್ದಾಣಗಳಲ್ಲಿ ಟಿಕೆಟ್‌ ಬುಕ್ಕಿಂಗ್ ಪ್ರಾರಂಭವಾಗಿದೆ. ಪ್ರಯಾಣಿಕರು IRCTC ವೆಬ್‌ಸೈಟ್ ಅಥವಾ ಕೌಂಟರ್‌ ಮೂಲಕ ಟಿಕೆಟ್‌ ಪಡೆದುಕೊಳ್ಳಬಹುದು.

ದಸರಾ ಹಬ್ಬದ ಕೊನೆಯ ದಿನಗಳಲ್ಲಿ ಆಯುಧ ಪೂಜೆ, ಮಹಾನವಮಿ ಹಾಗೂ ವಿಜಯದಶಮಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಭಕ್ತರು ಮತ್ತು ಪ್ರವಾಸಿಗರಿಗೆ ಈ ವಿಶೇಷ ರೈಲು ದೊಡ್ಡ ಸಹಾಯವಾಗಲಿದೆ. ಇದರಿಂದ ಹಬ್ಬದ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ರೈಲ್ವೆ ಇಲಾಖೆ ಯಶಸ್ವಿ ಕ್ರಮ ಕೈಗೊಂಡಂತಾಗಿದೆ.

PREV
Read more Articles on
click me!

Recommended Stories

ಸಣ್ಣ ಜೆರಾಕ್ಸ್ ಅಂಗಡಿ ಮಾಲೀಕನಿಂದ ₹1.6 ಲಕ್ಷ ವಸೂಲಿ; ಕಗ್ಗಲೀಪುರ PSI ಹರೀಶ್ ಸಸ್ಪೆಂಡ್
ಮುಡಾ ಹಗರಣದಲ್ಲಿ ಕೋರ್ಟ್ ಹೊಸ ಆದೇಶ, ಜೈಲಲ್ಲಿದ್ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಮತ್ತೆ ಪೊಲೀಸ್‌ ಕಸ್ಟಡಿಗೆ!