ಬೆಂಗಳೂರಿನಲ್ಲಿ ಹೊರ ರಾಜ್ಯದ ಟೆಕ್ಕಿಯ ಉದ್ದಟತನ..! BMTCಯಲ್ಲಿ ಬಿಗ್ ಫೈಟ್!

By Web DeskFirst Published May 21, 2019, 1:14 PM IST
Highlights

ಬೆಂಗಳೂರಿನಲ್ಲಿ ಹೊರರಾಜ್ಯದ ಟೆಕ್ಕಿಯ ಉದ್ದಟತನ..!| ಬಿಎಂಟಿಸಿ ಬಸ್ ನಲ್ಲಿ ಟೆಕ್ಕಿ ಮತ್ತು ಕಂಡಕ್ಟರ್ ನಡುವೆ ನಡೀತು ಬಿಗ್ ಫೈಟ್..!| ಬೆಂಗಳೂರಿನಲ್ಲಿ ಹೊರರಾಜ್ಯದವರಿಗೆ ರಕ್ಷಣೆಯೇ ಇಲ್ವಂತೆ, ಹೊರರಾಜ್ಯದವರನ್ನು ನೋಡುವ ರೀತಿಯೇ ಬೇರೆಯಂತೆ..!

ಬೆಂಗಳೂರು[ಮೇ.21]: ಬೆಂಗಳೂರಿನಲ್ಲಿ ಹೊರರಾಜ್ಯದವರಿಗೆ ರಕ್ಷಣೆಯೇ ಇಲ್ವಂತೆ, ಹೊರ ರಾಜ್ಯದವರನ್ನು ನೋಡುವ ರೀತಿಯೇ ಬೇರೆಯಂತೆ. ಹೀಗಂತ ಕನ್ನಡದ ಅನ್ನ ನೀರು ಪಡೆದು ಬೆಂಗಳೂರಿಗರ ಮೇಲೆಯೇ ಹೊರ ರಾಜ್ಯದ ಟೆಕ್ಕಿಯೊಬ್ಬರು ಹರಿಹಾಯ್ದಿದ್ದಾರೆ. ಇಷ್ಟೇ ಅಲ್ಲದೇ ಕಂಡಕ್ಟರ್ ನೀಡಿದ ಕೇಸ್ ಗೆ ಕೌಂಟರ್ ಕೇಸ್ ದಾಖಲಿಸಿ ಪೊಲೀಸರಿಂದ ನ್ಯಾಯವೇ‌ ಸಿಕ್ಕಿಲ್ಲ ಅಂತ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೇ 12 ರಂದು ಇಂತಹುದ್ದೊಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಟೆಕ್ಕಿ ಪಂಕಜ್  ಎಂಬಾತ ಟಿನ್ ಫ್ಯಾಕ್ಟರಿಯಿಂದ ಐಟಿಪಿಎಲ್ ಗೆ ಹೋಗಲು  ಕೆಎ57 ಎಫ್ 3709 ನಂಬರ್ ನ ಬಿಎಂಟಿಸಿ ಬಸ್ ಹತ್ತಿದ್ದ. ಐಟಿಪಿಎಲ್ ನಿಲ್ದಾಣ ಬರುತ್ತಿದ್ದಂತೆ ಪಂಕಜ್ ಡೋರ್ ಬಳಿ ನಿಂತಿದ್ದ. ಇದನ್ನು ಕಂಡ ಬಸ್ ನಿರ್ವಾಹಕ  ಕೃಷ್ಣಪ್ಪ"ನೀನು ಕೆಳಗೆ ಬಿದ್ದು ಸತ್ತರೇ, ನಾನು ಉತ್ತರ ಕೊಡಬೇಕು. ಡೋರ್ ಬಿಟ್ಟು ಒಳ ಹೋಗು" ಎಂದಿದ್ದಾರೆ.

ಈ ಮಾತು ಕೇಳಿ ಕೆಂಡಾಮಂಡಲವಾದ ಟೆಕ್ಕಿ ಪಂಕಜ್, ಕಂಡಕ್ಟರ್ ಕೃಷ್ಣಪ್ಪ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ. ‌ ಈ ಜಗಳ ತಾರಕಕ್ಕೇರಿ ಕೈಕೈ ಮಿಲಾಯಿಸಿದ್ದಾರೆ. ಗಲಾಟೆ ಜೋರಾಗಿ, ಕರ್ತವ್ಯ ನಿರತ ಕಂಡಕ್ಟರ್ ಮೇಲೆ ಪಂಕಜ್ ಹಲ್ಲೆ ನಡೆಸಿದಾಗ ಬೇರೆ ದಾರಿ ಕಾಣದ ಚಾಲಕ ಕೂಡಲೇ ಬಸ್ಸನ್ನು ಕಾಡುಗೋಡಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಠಾಣೆಯಲ್ಲಿ ಕಂಡಕ್ಟರ್ ಕೃಷ್ಣಪ್ಪ ಕರ್ತವ್ಯ ನಿರತ ಸರ್ಕಾರಿ ನೌಕರನ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪದಡಿ ಟೆಕ್ಕಿ ಪಂಕಜ್ ವಿರುದ್ಧ ದೂರು ನೀಡಿದ್ದಾರೆ.

ಇದರಿಂದ ಕುಪಿತಗೊಂಡ ಟೆಕ್ಕಿ ಪಂಕಜ್ ಈ ಕೇಸ್ ಗೆ ಕೌಂಟರ್ ಕೇಸ್ ದಾಖಲಿಸಿದ್ದಾರೆ. ಸಾಲದೆಂಬಂತೆ ತಾನು ದೂರು ನೀಡುವ ವೇಳೆ ಪೊಲೀಸರು ಬೇಜವಾಬ್ದಾರಿತನ ಮೆರೆದಿದ್ದಾರೆ. ಪೊಲೀಸರಿಂದ ನ್ಯಾಯ ಸಿಗಲ್ಲ, ಬೆಂಗಳೂರಿನಲ್ಲಿ ಹೊರ ರಾಜ್ಯದವರಿನ್ನು ನಡೆಸಿಕೊಳ್ಳುವ ರೀತಿ ಸರಿಯಾಗಿಲ್ಲ ಅಂತ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟನ್ನು ಬೆಂಗಳೂರು ಪೊಲೀಸರಿಗೆ ಹಾಗೂ ಬಿಎಂಟಿಸಿ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾನೆ. 

click me!