ಕಂಡ ಕಂಡವರಿಗೆ ಚುಚ್ಚುವ ರೌಡಿಗಳು; ಮೀಮ್ಸ್ ಮಾಡೋದ್ರಲ್ಲಿ ಬ್ಯೂಸಿಯಾದ ಪೊಲೀಸರು!

Published : Feb 10, 2025, 01:24 PM IST
ಕಂಡ ಕಂಡವರಿಗೆ ಚುಚ್ಚುವ ರೌಡಿಗಳು; ಮೀಮ್ಸ್ ಮಾಡೋದ್ರಲ್ಲಿ ಬ್ಯೂಸಿಯಾದ ಪೊಲೀಸರು!

ಸಾರಾಂಶ

ಬೆಂಗಳೂರಿನ ಇಂದಿರಾನಗರದಲ್ಲಿ ರೌಡಿಶೀಟರ್ ಕದಂಬನು ಹಲವಾರು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಐದು ಜನರು ಗಾಯಗೊಂಡಿದ್ದಾರೆ. ಆದರೆ, ಪೊಲೀಸರು ಮಾತ್ರ ಮೀಮ್ಸ್ ಮಾಡುವುದರಲ್ಲಿ ಬ್ಯೂಸಿ ಆಗಿದ್ದಾರೆ.

ಬೆಂಗಳೂರು (ಫೆ.10): ಬೆಂಗಳೂರಿನಲ್ಲಿ ರೌಡಿಶೀಟರ್‌ ಸಿಕ್ಕ ಸಿಕ್ಕ ಜನಸಾಮಾನ್ಯರ ಮೇಲೆ ಚಾಕುವಿನಿಂದ ಇರುದು ಮಾರಣಾಂತಿಕ ಹಲ್ಲೆಯನ್ನು ಮಾಡ ಪರಾರಿ ಆಗುತ್ತಿದ್ದಾನೆ. ರೌಡಿಗಳು ರಸ್ತೆಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೂ ಪೊಲೀಸರು ಮಾತ್ರ ದಿನಕ್ಕೆ ಹತ್ತಾರು ಮೀಮ್ಸ್‌ಗಳನ್ನು ಮಾಡುವುದಲ್ಲಿ ಬ್ಯೂಸಿ ಆಗಿದ್ದಾರೆ. ಜನಸಾಮಾನ್ಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ.

ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿನಿತ್ಯ ರೌಡಿಗಳ ಪುಂಡಾಟ ಹೆಚ್ಚಾಗಿದೆ. ಸಿಕ್ಕ ಸಿಕ್ಕ ಜನಸಾಮಾನ್ಯರು, ವ್ಯಾಪಾರಿಗಳು, ದುಡಿಯುವ ಕಾರ್ಮಿಕರು ಹಾಗೂ ಉದ್ಯೋಗಿಗಳ ಮೇಲೆ ಭೀಕರವಾಗಿ ಮಾರಣಾಂತಿಕ ಹಲ್ಲೆಯನ್ನು ಮಾಡಿ ಪರಾರಿ ಆಗುತ್ತಿದ್ದಾರೆ. ಇವರನ್ನು ಪೊಲೀಸರು ಯಾವಾಗಲೋ ಹಿಡಿದು ನಂತರ ಅವರನ್ನು ಜನರ ಮುಂದೆ ಮೀಮ್ಸ್‌ ಮಾಡುತ್ತಾ ತೋರಿಸುತ್ತಾರೆ. ಆದರೆ, ರೌಡಿಗಳಿಗೆ ಭಯ ಹುಟ್ಟಿಸಿ ಜನಸಾಮಾನ್ಯರನ್ನು ಕಾಪಾಡುವ ಕೆಲಸ ಮಾತ್ರ ಮಾಡುತ್ತಿಲ್ಲ. ಪೊಲೀಸರು ನಮಗೆ ರಕ್ಷಣೆ ಮಾಡುತ್ತಾರೆಂದು ನಂಬಿ ದುಡಿಮೆಯ ಪಾಲಿನಲ್ಲಿ ಸರ್ಕಾರಕ್ಕೆ ತೆರಿಗೆ ಕಟ್ಟುವ ಜನಸಾಮಾನ್ಯರು ಪ್ರಾಣವನ್ನು ಬಿಡುತ್ತಾರೆ. ಅವರನ್ನು ನಂಬಿಕೊಂಡು ಕಟುಂಬಗಳು ಬೀದಿಗೆ ಬೀಳುತ್ತಿವೆ.

ಬೆಂಗಳೂರಿನ ಇಂದಿರಾನಗರ ಹೋಟೆಲ್‌ ಒಂದರಲ್ಲಿ ರೌಡಿಶೀಟರ್ ಕದಂಬ ಎನ್ನುವವನು ಮೂರ್ನಾಲ್ಕು ಮಂದಿ ಮೇಲೆ ಏಕಾಏಕಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೋಟೆಲ್‌ನ ಸಿಸಿಟಿವಿಯಲ್ಲಿ ಆರೋಪಿ ಓಡಿ ಹೋಗುವ ದೃಶ್ಯ ಸೆರೆಯಾಗಿದೆ. ಈ ಘಟನೆ ನಿನ್ನೆ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಾಳಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರೌಡಿಶೀಟರ್ ಜನರ ಮೂಖ ಮೂತಿಯನ್ನೂ ನೋಡದೆ ಹಲ್ಲೆ ನಡೆಸಿದ್ದಾನೆ. ಇದೀಗ ರೌಡಿಶೀಟರ್ ಕದಂಬನಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಈ ಘಟನೆಗೆ ಕುರಿತಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ನಮಗಲ್ಲ: ದರ ಏರಿಕೆಗೆ ಜನಾಕ್ರೋಶ

ಸಿಕ್ಕಸಿಕ್ಕವರಿಗೆ ಡ್ರಾಗರ್‌ನಿಂದ ಇರಿದು ಪರಾರಿ ಆಗಿರುವ ರೌಡಿಶೀಟರ್ ಕದಂಬನಿಂದ ಹಲವು ದಿನಗಳಲ್ಲಿ ಈ ಏರಿಯಾದಲ್ಲಿ ಅಟ್ಟಹಾಸ ಶುರುವಾಗಿದೆ. ಹಾಡು ಹಗಲಿನಲ್ಲಿಯೇ ಡ್ರ್ಯಾಗರ್ ಹಿಡಿದು ಪುಂಡಾಟಿಕೆ ನಡೆಸುತ್ತಾ ಸುತ್ತಾಡುತ್ತಿದ್ದನು. ಮೊದಲು ಪಾನಿ ಪುರಿ ಅಂಗಡಿಯನ ಜೊತೆ ಕಿರಿಕ್  ಆಗಿದ್ದು ಗಲಾಟೆ ವೇಳೆ ಚಾಕು ಇರಿದ್ದಾನೆ. ಅವನನ್ನು ಹಿಡಿದುಕೊಳ್ಳಲು ಬಂದ ಮತ್ತು ಹಲ್ಲೆ ಮಾಡುವುದನ್ನು ತಡೆಯಲು ಬಂದ ಮತ್ತೆ ಮೂವರಿಗೆ ಜನಸಾಮಾನ್ಯರಿಗೂ ಡ್ರ್ಯಾಗರ್  ಇರಿದು ಕುತ್ತಿಗೆ ಹಾಗೂ ಮುಖಕ್ಕೆ ಇರಿದು ಪರಾರಿ ಆಗಿದ್ದಾನೆ.

ಈ ಘಟನೆಯಲ್ಲಿ ಒಟ್ಟು 5 ಮಂದಿಗೆ ಚಾಕು ಇರಿದಿದ್ದಾನೆ. ಇವನು ಇತ್ತೀಚೆಗಷ್ಟೇ ಜೈಲಿನಿಂದ ರಿಲೀಸ್ ಆಗಿ ಹೊರ ಬಂದಿದ್ದನು. ಪೊಲೀಸರು ಅವನಿಗೆ ಕಠಿಣ ಶಿಕ್ಷೆಯನ್ನು ಕೊಡದೇ ಜೈಲಿನಲ್ಲಿದ್ದು, ಮನಪರಿವರ್ತನೆ ಆಗುವ ಬದಲು ಮತ್ತಷ್ಟು ದೊಡ್ಡ ಸಮಾಜಬಾಹಿರ ಕೆಲಸ ಮಾಡಲು ಪ್ರೇರೇಪಣೆ ನೀಡುವ ತಾಣವಾಗುತ್ತಿದೆ ಎಂಬ ಅನುಮಾನ ಎದುರಾಗಿದೆ. ಇದೀಗ ರೌಡಿಶೀಟರ್ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಗಾಯಾಳು ಯದು ಜನರು ಕೂಡ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಎಟಿಎಂ ಹಣ ಕದ್ದರು, ಹಂಚಿಕೊಳ್ಳುವಾಗ ಜಗಳವಾಡಿ ಸಿಕ್ಕಿಬಿದ್ದ ಲಕ್ಕಿ ಭಾಸ್ಕರ್ ಮಾದರಿ ಗ್ಯಾಂಗ್!

ಇಲ್ಲಿದೆ ನೋಡಿ ಬೆಂಗಳೂರು ಪೊಲೀಸರ ಮೀಮ್ಸ್!

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ