ಬೆಂಗಳೂರು ನಿವಾಸಿಗಳೇ ನಿಮ್ಮ ಆಸ್ತಿಯ ಅಂತಿಮ 'ಬಿಬಿಎಂಪಿ ಇ-ಖಾತಾ' ಪಡೆಯಲು ಸೂಚನೆ!

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ 22 ಲಕ್ಷ ಆಸ್ತಿಗಳ ಮಾಲೀಕರು ಇ-ಖಾತಾ ಪಡೆಯುವುದು ಕಡ್ಡಾಯ. BBMPeAasthi.karnataka.gov.in ನಲ್ಲಿ ಕರಡು ಇ-ಖಾತಾಗಳನ್ನು ವಾರ್ಡ್‌ವಾರು ಆನ್‌ಲೈನ್‌ನಲ್ಲಿ ಹಾಕಲಾಗಿದೆ.

Bengaluru residents please get the final BBMP e Khata for your property sat

ಬೆಂಗಳೂರು (ಜ.30): ಸಿಲಿಕಾನ್ ಸಿಟಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 22 ಆಸ್ತಿಗಳಿದ್ದು, ಎಲ್ಲ ಆಸ್ತಿಗಳ ಮಾಲೀಕರು ಕೂಡ ನಿಮ್ಮ ಆಸ್ತಿಗೆ ಸಂಬಂಧಪಟ್ಟ ಅಂತಿಮ ಬಿಬಿಎಂಪಿ ಇ-ಖಾತಾ ಪಡೆದುಕೊಳ್ಳಬೇಕು ಎಂದು ಪಾಲಿಕೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಪಾಲಿಕೆ, ಬಿಬಿಎಂಪಿ ಇ-ಖಾತಾ ವ್ಯವಸ್ಥೆಯನ್ನು ನಾಗರಿಕರಿಗೆ ಅನುಕೂಲವಾಗುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಬಯಸಿದರೂ ಸಹ, ನಿಮ್ಮ ಮಾಹಿತಿ ಮತ್ತು ಆಸ್ತಿ ಫೋಟೋವನ್ನು ನೀಡದೆ ಅವರು ನಿಮ್ಮ ಅಂತಿಮ ಇ-ಖಾತಾವನ್ನು ರಚಿಸಲು ಸಾಧ್ಯವಿಲ್ಲ. ಸುಮಾರು 22 ಲಕ್ಷ ಆಸ್ತಿಗಳಿಗೆ ಕರಡು ಇ-ಖಾತಾಗಳನ್ನು ವಾರ್ಡ್‌ವಾರು ಆನ್‌ಲೈನ್‌ನಲ್ಲಿ BBMPeAasthi.karnataka.gov.in ನಲ್ಲಿ ಹಾಕಲಾಗಿರುತ್ತದೆ. ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಅನ್ನು ನೀವು ತಿಳಿದುಕೊಳ್ಳಬಹುದು ಎಂದು ತಿಳಿಸಲಾಗಿದೆ.

Latest Videos

ನಿಮ್ಮ ಬಿಬಿಎಂಪಿ ಇ-ಖಾತಾ ಮತ್ತು ಆಸ್ತಿ ತೆರಿಗೆಯನ್ನು ಪಡೆಯಲು ಅನುಕೂಲ ಆಗುವಂತೆ ಕೆಳಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿರುವ ಎರಡು ವಿಡಿಯೋಗಳ ಲಿಂಕ್ ಕೂಡ ಕೊಡಲಾಗಿದೆ. ಸಂಬಂಧಪಟ್ಟ ಆಸ್ತಿ ಮಾಲೀಕರು ಈ ವಿಡಿಯೋ ನೋಡಿ ಅದರಲ್ಲಿ ಕೊಡಲಾಗಿರುವ ಆಯ್ಕೆಗಳ ಅನುಸಾರ ಇ-ಖಾತಾ ಪಡೆದುಕೊಳ್ಳಬಹುದು. ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿದ್ದರೆ ಬಿಬಿಎಂಪಿ ಸೂಚಿಸಿದ ವಿಡಿಯೋಗಳು ಪ್ರಸಾರ ಆಗಲಿವೆ. ಇನ್ನು ಯಾವುದೇ ಅನುಮಾನ, ಗೊಂದಲಗಳು ಉಂಟಾದಲ್ಲಿ ಇ-ಖಾತಾ ಸಹಾಯವಾಣಿ 94806 83695ಗೆ ಕರೆ ಮಾಡಬಹುದು.

ಕನ್ನಡ: https://m.youtube.com/watch?v=JR3BxET46po
ಇಂಗ್ಲಿಷ್: https://youtu.be/GL8CWsdn3wo?si=Zu_EMs3SCw5-wQwT

ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗಿನ್ ಮಾಡಿ ಮತ್ತು ವಾರ್ಡ್‌ವಾರು ಪಟ್ಟಿಯಲ್ಲಿ ಮಾಲೀಕರ ಹೆಸರನ್ನು ಬಳಸಿಕೊಂಡು ನಿಮ್ಮ ಆಸ್ತಿಯನ್ನು ಹುಡುಕಬಹುದಾಗಿದೆ.
(1) ಮಾಲೀಕರ ಆಧಾರ್
(2) ಆಸ್ತಿ ತೆರಿಗೆ ಅರ್ಜಿ ಸಂಖ್ಯೆ (ಆಸ್ತಿ ತೆರಿಗೆ ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿ ದತ್ತಾಂಶವನ್ನು ಪಡೆಯುತ್ತದೆ)
(3) ಮಾರಾಟ/ನೋಂದಣಿ ಪತ್ರದ  ಸಂಖ್ಯೆ (ಉಪ ನೋಂದಣಿದಾರರಿಂದ ಸ್ವಯಂಚಾಲಿತವಾಗಿ ಅದನ್ನು ಪಡೆಯುತ್ತದೆ)
(4) ಬೆಸ್ಕಾಂ 10-ಅಂಕಿಯ ಐಡಿ (ಖಾಲಿ ನಿವೇಶನಗಳಿಗೆ ಐಚ್ಛಿಕ)
(5) ಆಸ್ತಿ ಫೋಟೋ

ಬಿಬಿಎಂಪಿ ದಾಖಲೆಗಳೊಂದಿಗೆ ವಿವರಗಳು ಹೊಂದಿಕೆಯಾದರೆ, ನಿಮ್ಮ ಅಂತಿಮ ಇ-ಖಾತಾವನ್ನು ಡೌನ್‌ಲೋಡ್ ಮಾಡಿ. ಮಾಹಿತಿ ಲಭ್ಯವಿಲ್ಲದಿದ್ದಾಗ ಅಥವಾ ಪಾಲಿಕೆಯ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ ಮಾತ್ರ, ಪ್ರಕರಣವನ್ನು ಸಹಾಯಕ ಕಂದಾಯ ಅಧಿಕಾರಿಗೆ ಉಲ್ಲೇಖಿಸಲಾಗುತ್ತದೆ.

vuukle one pixel image
click me!
vuukle one pixel image vuukle one pixel image