ನಾಳೆ, ನಾಡಿದ್ದು 2 ದಿನ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ಯಾವೆಲ್ಲ ಪ್ರದೇಶಗಳಿಗೆ ತೊಂದರೆ?

Published : Sep 08, 2025, 03:26 PM IST
Bengaluru Power Outage

ಸಾರಾಂಶ

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ವಿದ್ಯುತ್ ಕಡಿತವಿರುತ್ತದೆ. ಬಾಣಸವಾಡಿ 66/11 ಕೆ.ವಿ. ಉಪಕೇಂದ್ರದ ನಿರ್ವಹಣಾ ಕಾರ್ಯಗಳಿಂದಾಗಿ ಈ ವ್ಯತ್ಯಯ ಉಂಟಾಗಲಿದೆ. ನಿಮ್ಮ ಏರಿಯಾದಲ್ಲಿ ಇದೆನಾ ಒಮ್ಮೆ ಚೆಕ್ ಮಾಡಿ.

ಬೆಂಗಳೂರು (ಸೆ.08): ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ಪ್ರಮುಖ ಸುದ್ದಿ ಇಲ್ಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸೆಪ್ಟೆಂಬರ್ 9 ಮತ್ತು 10 ರಂದು ನಿಗದಿತ ವಿದ್ಯುತ್ ಕಡಿತದ ಕುರಿತು ಪ್ರಕಟಣೆಯನ್ನು ಹೊರಡಿಸಿದೆ. ಬಾಣಸವಾಡಿ 66/11 ಕೆ.ವಿ. ಉಪಕೇಂದ್ರದಲ್ಲಿ ನಡೆಯುತ್ತಿರುವ ತುರ್ತು ನಿರ್ವಹಣಾ ಕಾರ್ಯಗಳ ಕಾರಣ ಈ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಕಡಿತದ ಸಮಯ ಮತ್ತು ದಿನಾಂಕಗಳು

ಈ ನಿಗದಿತ ವಿದ್ಯುತ್ ಕಡಿತವು ಸೆಪ್ಟೆಂಬರ್ 9 ಮತ್ತು 10 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:00ರವರೆಗೆ ಇರುತ್ತದೆ. ಈ ಸಮಯದಲ್ಲಿ, ಪಟ್ಟಿ ಮಾಡಲಾದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಲಭ್ಯವಿರುವುದಿಲ್ಲ. ವಿದ್ಯುತ್ ಕಡಿತದಿಂದ ಈ ಕೆಳಗಿನ ಪ್ರದೇಶಗಳಲ್ಲಿನ ನಿವಾಸಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ತೊಂದರೆ ಅನುಭವಿಸಲಿವೆ.

ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಪ್ರದೇಶಗಳು

ಬಾಣಸವಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು: ಬಾಣಸವಾಡಿ, ಹೊರಮಾವು, ಪಿ&ಟಿ ಲೇಔಟ್, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಆಶೀರ್ವಾದ್ ಕಾಲೋನಿ, ಜ್ಯೋತಿನಗರ, ಅಗರ್, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಬಡಾವಣೆ, ತೆಂಗಿನ ತೋಟ, ಅಮರ್ ರೀಜೆನ್ಸಿ, ವಿಜಯಾ ಬ್ಯಾಂಕ್ ಕಾಲೋನಿ, HRBR ಲೇಔಟ್, ಕಮ್ಮನಹಳ್ಳಿ ಮುಖ್ಯ ರಸ್ತೆ, ಕಲ್ಯಾಣ್ ನಗರ, ಹೆಣ್ಣೂರು, ಚೇಳಿಕೆರೆ, ಮೇಗನಹಳ್ಳಿ, ಮತ್ತು ಸಮೀಪದ ಪ್ರದೇಶಗಳು.

ರಾಮಮೂರ್ತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು: ಗೆದ್ದಲಹಳ್ಳಿ, ಕೊತ್ತನೂರು, ವಡ್ಡರಪಾಳ್ಯ, ಜಾನಕಿರಾಮ ಬಡಾವಣೆ, ಬಿಡಿಎಸ್ ಗಾರ್ಡನ್, ಸತ್ಯ ಎನ್ಕ್ಲೇವ್, ಪ್ರಕೃತಿ ಲೇಔಟ್, ಹೊಯ್ಸಳನಗರ, ಬೃಂದಾವನ ಲೇಔಟ್, ವಿನಾಯಕ ಬಡಾವಣೆ, ವಿವೇಕಾನಂದ ಬಡಾವಣೆ, ಮಂಜುನಾಥ್ ನಗರ ರಸ್ತೆ, ಯಾಸಿನ್ ನಗರ, NRI ಲೇಔಟ್, ಪುಣ್ಯಭೂಮಿ ಲೇಔಟ್, ಸಮದ್ ಲೇಔಟ್, ಕುಳ್ಳಪ್ಪ ವೃತ್ತ, ರಾಜ್‌ಕುಮಾರ್ ಪಾರ್ಕ್, ಸಂಗೊಳ್ಳಿ ರಾಯಣ್ಣ ರಸ್ತೆ, ರಾಮಮೂರ್ತಿ ನಗರ ಮುಖ್ಯ ರಸ್ತೆ, ಕೃಷ್ಣಾರೆಡ್ಡಿ ಲೇಔಟ್, ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಗ್ರೀನ್ ಪಾರ್ಕ್ ಲೇಔಟ್, ಫ್ಲವರ್ ಗಾರ್ಡನ್, ದಿವ್ಯ ಉನ್ನತಿ ಲೇಔಟ್, ಪ್ರಕೃತಿ ಟೌನ್‌ಶಿಪ್, ಬೈರತಿ, ಕ್ಯಾಲಸನಹಳ್ಳಿ, ನಕ್ಷತ್ರ ಲೇಔಟ್, ಬೈರತಿ ಬಂಡೆ, ಸಂಗಮ್ ಎನ್‌ಕ್ಲೇವ್, ಅತ್ತಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಗ್ರಾ.ಪಂ, ನಂಜಪ್ಪ ಗಾರ್ಡನ್, ಸಿಎನ್ಆರ್ ಲೇಔಟ್, ಆರ್.ಎಸ್. ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪ ರಸ್ತೆ, ಕಲ್ಕೆರೆ, ಮುನೇಗೌಡ ರಸ್ತೆ, ಸಮೃದ್ಧಿ ಲೇಔಟ್, ಮತ್ತು ಜಯಂತಿ ನಗರ.

ಬೆಸ್ಕಾಂ ಈ ನಿರ್ವಹಣಾ ಕಾರ್ಯವನ್ನು ಅಗತ್ಯ ಎಂದು ಘೋಷಿಸಿದ್ದು, ಇದರಿಂದ ಭವಿಷ್ಯದಲ್ಲಿ ವಿದ್ಯುತ್ ಪೂರೈಕೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ. ಈ ಸಮಯದಲ್ಲಿ ಸಹಕರಿಸುವಂತೆ ಕಂಪನಿ ನಾಗರಿಕರಲ್ಲಿ ಮನವಿ ಮಾಡಿಕೊಂಡಿದೆ. ಈ ಪ್ರಕಟಣೆಯು ಪೀಡಿತ ಪ್ರದೇಶಗಳ ನಿವಾಸಿಗಳಿಗೆ ತಮ್ಮ ಕೆಲಸಗಳನ್ನು ಪೂರ್ವಭಾವಿಯಾಗಿ ಯೋಜಿಸಿಕೊಳ್ಳಲು ಮತ್ತು ವಿದ್ಯುತ್ ಕಡಿತದ ಅವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಮೊಬೈಲ್‌, ಲ್ಯಾಪ್‌ ಟಾಪ್‌ ಮತ್ತು ಇತರ ಅಗತ್ಯ ವಸ್ತುಗಳನ್ನು ಮುಂಚಿತವಾಗಿ ಚಾರ್ಜ್ ಮಾಡುವುದು. ಗೃಹೋಪಯೋಗಿ ಉಪಕರಣಗಳಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು, ವಿದ್ಯುತ್ ಪಂಪ್‌ಗಳು ಹೊಂದಿದ್ದರೆ ನೀರು ಸಂಗ್ರಹಿಸಿಡುವಂತೆ ಬೆಸ್ಕಾಂ ಜನರಿಗೆ ಸಲಹೆ ನೀಡಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ