ಮೋದಿ ಪ್ರಮಾಣ ವಚನಕ್ಕೆ ಆಹ್ವಾನ: ಸ್ವಾಮೀಜಿ ಅಸಮಾಧಾನ!

By Web Desk  |  First Published May 30, 2019, 1:55 PM IST

ಯಾವುದೇ ಮಠಾಧೀಶರನ್ನು ರಾಜಕಾರಣ ವ್ಯವಸ್ಥೆಯಲ್ಲಿ ಆಹ್ವಾನಿಸೋದು ಯೋಗ್ಯವಲ್ಲ| ಮೋದಿ ಪ್ರಮಾಣ ವಚನಕ್ಕೆ ಸ್ವಾಮೀಜಿ ಆಹ್ವಾನ ಸಿದ್ದರಾಮಾನಂದ ಸ್ವಾಮೀಜಿ ಪರೋಕ್ಷ ವಿರೋಧ


ಬಾಗಲಕೋಟೆ[ಮೇ.30]: ಮೋದಿ ಪ್ರಮಾಣ ವಚನಕ್ಕೆ ವಿದೇಶೀ ಅತಿಥಿಗಳು ಸೇರಿದಂತೆ, ರಾಜಕೀಯ ನಾಯಕರು, ಸ್ವಾಮೀಜಿಗಳು ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಲಾಗಿದೆ. ಆದರೀಗ ಪ್ರಮಾಣ ವಚನಕ್ಕೆ ಸ್ವಾಮೀಜಿಗಳಿಗೆ ಆಹ್ವಾನ ನಿಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕನಕಗುರು ಪೀಠ ತಿಂಥಣಿ ಶಾಖಾಮಠದ ಸಿದ್ದರಾಮಾನಂದ ಸ್ವಾಮೀಜಿ ಮಠಾಧೀಶರನ್ನು ಇಂತಹ ರಾಜಕೀಯ ಕಾರ್ಯಕ್ರಮಗಳಿಗೆ ಅಹ್ವಾನಿಸುವುದು ಸರಿಯಲ್ಲ ಎನ್ನುವ ಮೂಲಕ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿಗಳ ಆಹ್ವಾನ ವಿಚಾರದ ವಿಚರವಾಗಿ ಮಾತನಾಡಿದ ಬಾಗಲಕೋಟೆ ಜಿಲ್ಲೆಯ ಶಿರೂರಿನ ಕನಕಗುರು ಪೀಠ ತಿಂಥಣಿ ಶಾಖಾಮಠದ ಸಿದ್ದರಾಮಾನಂದ ಸ್ವಾಮೀಜಿ 'ಯಾವುದೇ ಮಠಾಧೀಶರನ್ನು ರಾಜಕಾರಣ ವ್ಯವಸ್ಥೆಯಲ್ಲಿ ಆಹ್ವಾನಿಸುವುದು ಯೋಗ್ಯವಲ್ಲ. ಸ್ಥಾನಮಾನಕ್ಕೆ ಗೌರವವಲ್ಲ ಎನ್ನುವುದು ನನ್ನ ಭಾವನೆ' ಎನ್ನುವ ಮೂಲಕ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಇದೇ ವೇಳೆ ಹಿಂದೂ ಧರ್ಮಹಗೂ ರಾಜಕೀಯ ಕುರಿತಾಗಿ ಮಾತನಾಡಿದ ಸ್ವಾಮೀಜಿಗಳು 'ಹಿಂದೂ ಧರ್ಮ ಅಂದಾಕ್ಷಣ ಜಗತ್ತಿನಲ್ಲಿ ಯಾರೋ ಒಬ್ಬರನ್ನು ಪ್ರೊಜೆಕ್ಟ್ ಮಾಡಲಾಗಿದೆ. ಹಿಂದೂ ಧರ್ಮದ ಸಮಗ್ರ ಪ್ರತಿನಿಧಿ ಅಂತ ಜನಾನು ಯೋಚನೆ ಮಾಡುತ್ತಿಲ್ಲ. ಯಾವುದೋ ಮಠಾಧೀಶರನ್ನು ಹಿಂದೂ ಧರ್ಮದ ಪ್ರತಿನಿಧಿ ಎಂದು ಬಿಂಬಿಸಲಾಗಿದೆ. ಹಾಗಾಗಿ ಅವರು ಪ್ರಾತಿನಿಧ್ಯ ಪಡೆಯುತ್ತಿದ್ದಾರೆ, ಉಳಿದವರೆಲ್ಲರೂ ಗೌಣವಾಗಿದ್ದಾರೆ. ಇದು ಸಾಮಾಜಿಕ ವ್ಯವಸ್ಥೆ ಇದಕ್ಕೆ ಯಾರನ್ನು ದೂರಬೇಕು!? ಹಿಂದೂ ಧರ್ಮದ ಬಹು ಸಂಸ್ಕೃತಿ ಪ್ರತಿನಿಧಿಗಳು ಲೋಕಸಭೆಯಲ್ಲಿದ್ರೆ, ಪ್ರಜಾಸತ್ತಾತ್ಮಕ ಅಂತಾರೆ. ಪ್ರಧಾನಿ ಬಹುಸಂಸ್ಕೃತಿ  ನಾಡಿಗೆ ಪ್ರಾಧಾನ್ಯತೆ ಕೊಡಬೇಕು. ಅಂದಾಗ ಹಿಂದೂ ಧರ್ಮ ಎತ್ತಿ ಹಿಡಿದಂತಾಗುತ್ತೆ. ಕೇವಲ ವೈದಿಕ, ವೈಷ್ಣವ, ಪೌರೋಹಿತ್ಯ, ಮೇಲರಿಮೆ ಧರ್ಮ ಪ್ರತಿಷ್ಠಾಪನೆ ಮಾಡೋದು ದೇಶಕ್ಕೆ ಮಾರಕ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಮಠ ಯಾವುದೇ ಪಕ್ಷದ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಸ್ವಾಮೀಜಿ 'ಅಮಿತ್ ಶಾರನ್ನ ಕನಕಗುರುಪೀಠದ ನಾಲ್ಕು ಸ್ವಾಮೀಜಿ ಆಶೀರ್ವಾದ ಶುಭಕೋರಲಾಯ್ತು. ಅಮಿತ್ ಶಾಗೆ ಗೌರವ ಕೊಟ್ಟಿಲ್ಲ ಅನ್ನೋದು ಮಾಧ್ಯಮಗಳ ತಪ್ಪು ಸುದ್ದಿ. ಮೊದಲ ರಾಹುಲ್ ಗಾಂಧಿ ಬಂದ್ರು, ಬಳಿಕ ಅಮಿತ್ ಶಾ ಮಠಕ್ಕೆ ಬಂದಿದ್ರು ಇಬ್ಬರಿಗೂ ಮಠ ಆಶೀರ್ವಾದ ಮಾಡಲಾಗಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಎಂದು ಸ್ವಾಮೀಜಿಗಳಿಂದ ಹೇಳಿಸಿದ್ರೆ ಕನಕಪೀಠ ಸಿದ್ದರಾಮಯ್ಯ ಪರ, ಕಾಂಗ್ರೆಸ್ ಪರ ಅನ್ನೋ ಸಂದೇಶ ಕೊಡ್ತಿದ್ದಾರೆ. ಆದ್ರೆ ಕನಕ ಗುರು ಪೀಠ ಯಾವ ಪಕ್ಷದ ಪರವೂ ಇಲ್ಲ ನಾಯಕನ ಪರವೂ ಇಲ್ಲ. ಧಾರ್ಮಿಕ ಅರಿವು ಮೂಡಿಸೋದು ನಮ್ಮ ಧರ್ಮವಾಗಿದೆ. ನಾವು ಇವರೇ ಸಿಎಂ ಆಗಲಿ ಅಂದ್ರೆ ಸಮಾಜದಲ್ಲಿ ಪಕ್ಷ, ವ್ಯಕ್ತಿ ಪರ ನಿಂತಂತಾಗುತ್ತದೆ. ಸಮಾಜ ಸಿದ್ದರಾಮಯ್ಯರನ್ನು ಬಯಸುತ್ತೇ ಅಂದ್ರೆ ಅವರು ಒಳ್ಳೆಯ ಆಡಳಿತ ಮಾಡಿದ್ದಾರೆ. ಜನ ಸಿದ್ದರಾಮಯ್ಯ ಬಯಸಿದ್ರೆ ಆಗಲಿ. ಈಶ್ವರಪ್ಪ ರನ್ನು ಬಯಸಿದ್ರೆ ಅವರೂ ಆಗಲಿ. ಜನ ಯಡಿಯೂರಪ್ಪ ಬಯಸಿದ್ರೆ ಅವರು ಸಿಎಂ ಆಗಲಿ. ಜನ ಯಾರನ್ನು ಬಯಸ್ತಾರೆ ಅವರಾಗುತ್ತಾರೆ' ಎಂದಿದ್ದಾರೆ.
 

click me!