ಬೆಂಗಳೂರು ಪಿ.ಜಿ.ಗಳಿಗೆ ಹೊಸ ಮಾರ್ಗಸೂಚಿ ಪ್ರಕಟ: ಪೊಲೀಸ್ ಇಲಾಖೆಯಿಂದ ಕಠಿಣ ನಿಯಮ

Published : Jan 28, 2024, 03:23 PM ISTUpdated : Jan 28, 2024, 03:24 PM IST
ಬೆಂಗಳೂರು ಪಿ.ಜಿ.ಗಳಿಗೆ ಹೊಸ ಮಾರ್ಗಸೂಚಿ ಪ್ರಕಟ: ಪೊಲೀಸ್ ಇಲಾಖೆಯಿಂದ ಕಠಿಣ ನಿಯಮ

ಸಾರಾಂಶ

ಬೆಂಗಳೂರು ಪೇಯಿಂಗ್ ಗೆಸ್ಟ್‌ (ಪಿಜಿ)ಗಳಿಗೆ ಪೊಲೀಸ್‌ ಇಲಾಖೆಯಿಂದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಮೂಲಕ ಸುರಕ್ಷತೆ ಬಗ್ಗೆ ನಿಗಾವಹಿಸಲಾಗಿದೆ.

ಬೆಂಗಳೂರು (ಜ.28): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ)ಗಳಿಗೆ ಪೊಲೀಸ್‌ ಇಲಾಖೆಯಿಂದ ಕೆಲವು ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಒಂದು ವೇಳೆ ಮಾರ್ಗಸೂಚಿಗಳನ್ನು ಪಾಲನೆ ಮಾಡದಿದ್ದಲ್ಲಿ ಪರವಾನಗಿ ರದ್ದುಗೊಳಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಜಿ ಮಾಲೀಕರಿಗೆ ಶಾಕ್ ನೀಡಲಾಗಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ನುಮುಂದೆ ಪಿಜಿ (Bengaluru paying guest) ಆರಂಭಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಿಂದ (Bruhat Bengaluru Mahanagara Palike) ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಇನ್ನು ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನ ತಡೆಗಟ್ಟಲು  ಪೊಲೀಸ್ ಇಲಾಖೆಯಿಂದ ಕೆಲವು ಕಠಿಣ ನಿಯಮಗಳುಳ್ಳ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ. ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣ 'ಎಕ್ಸ್' ಮೂಲಕ ಪಿ.ಜಿ.ಮಾಲೀಕರಿಗೆ ಮಾರ್ಗಸೂಚಿಯ ಬಗ್ಗೆ ತಿಳಿಸಲಾಗಿದೆ.

ಬೆಂಗಳೂರು: 2000 ಕೋಟಿ ಆಸ್ತಿ ತೆರಿಗೆ ಬಾಕಿ ವಸೂಲಿಗೆ 3 ರೀತಿಯ ವಿನಾಯ್ತಿ?

  • ಪೊಲೀಸ್ ಇಲಾಕೆ ಮಾರ್ಗಸೂಚಿಯಲ್ಲಿ ಏನಿದೆ?
  • - ಎಲ್ಲ ಪಿಜಿಗಳು ಅಗತ್ಯವಿರುವ ಪರವಾನಿಗೆಯನ್ನ ಬಿಬಿಎಂಪಿಯಿಂದ ಪಡೆಯುವುದು ಕಡ್ಡಾಯ
  • - ಪಿಜಿ ವಾಸಕ್ಕೆ ಬರುವ ಎಲ್ಲ ವ್ಯಕ್ತಿಗಳ ಗುರುತಿನ ಚೀಟಿ ಪಡೆಯಬೇಕು.
  • - ಇತ್ತೀಚಿನ ಭಾವಚಿತ್ರ ಮತ್ತು ರಕ್ತ ಸಂಬಂಧಿಗಳ ವಿವರ, ಮೊಬೈಲ್ ನಂಬರ್ ದಾಖಲೆ ಮಾಡಬೇಕು.
  • - ಇನ್ನೂ ಪಿಜಿಗೆ ಭೇಟಿ ನೀಡಲು ಬರುವ ಸಂಬಂಧಿಕರಾಗಲಿ‌ ಅಥವಾ ಯಾರೇ ಆಗಿರಲಿ ಅವರ ವಿವರಗಳನ್ನೂ ಪ್ರತ್ಯೇಕವಾಗಿ ನಿರ್ವಹಿಸಬೇಕು.
  • - ಸಿಸಿಟಿವಿ, ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು.
  • - ಮಾದಕ ವಸ್ತು ಸೇವನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಾರದು.
  • - ಪಿಜಿಗಳಿಗೆ ಅಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್, ಕ್ಲೀನಿಂಗ್‌ಗೆ ಬರುವ ಸಿಬ್ಬಂದಿಯ ಬಗ್ಗೆ ಪೂರ್ವಾಪರಗಳನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಿ ನಂತರ ನೇಮಕ ಮಾಡಿಕೊಳ್ಳಬೇಕು.
  • - ಯಾವುದೇ ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. 
  • - ಪಿಜಿಗಳಲ್ಲಿ ವಾಸಕ್ಕೆ ಇರುವವರನ್ನು ಬಿಟ್ಟು ಇತರರಿಗೆ ತಾತ್ಕಾಲಿಕ ವಾಸ ಕಲ್ಪಿಸಬಾರದು. 
  • - ನ್ಯಾಯಾಲಯದ ಆದೇಶದನ್ವಯದ ರಾತ್ರಿ 10ರಿಂದ ಬೆಳಗ್ಗೆ 6 ವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.

ರಾಷ್ಟ್ರಧ್ವಜಕ್ಕೆ ಅನುಮತಿ ಪಡೆದು, ಹನುಮಧ್ವಜ ಹಾರಿಸಿದ ಕೆರಗೋಡು ಟ್ರಸ್ಟ್: ಕೆಂಡಕಾರಿದ ಸಚಿವ ಚಲುವರಾಯಸ್ವಾಮಿ

ಇನ್ನು ಪೊಲೀಸ್ ಇಲಾಖೆ ಹೊರಡಿಸಿದ ಸುರಕ್ಷತೆ ಹಾಗೂ ಮುಂಜಾಗ್ರತಾ ಮಾರ್ಗಸೂಚಿಗಳನ್ನು ಪಾಲಿಸದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಸಂಬಂಧಪಟ್ಟ ಪಿ.ಜಿ.ಗಳ ಮಾಲೀಕರು ಹಾಗೂ ಅದರ ವ್ಯವಸ್ಥಾಪಕರೇ ನೇರ ಹೊಣೆಗಾರರು ಎಂದು ಸೂಚಿಸಲಾಗಿದೆ.

PREV
Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!