ಬೆಂಗಳೂರು: ATM ರಿಪೇರಿ ಮಾಡುವ ನೆಪದಲ್ಲಿ 95 ಲಕ್ಷ ರೂ. ಎಗರಿಸಿದ್ದವರು ಅಂದರ್

By Web DeskFirst Published May 15, 2019, 8:49 PM IST
Highlights

  ATM ರಿಪೇರಿ ಮಾಡುವ ನೆಪದಲ್ಲಿ 95 ಲಕ್ಷ ರೂ. ದೋಚಿ ಎಸ್ಕೇಪ್ ಆಗಿದ್ದವರನ್ನು ಬಂಧಿಸುವಲ್ಲಿ ಬೆಂಗಳೂರಿನ  ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು, [ಮೇ.15]: ಬೆಂಗಳೂರಿನ ಶಾಂತಿ ನಗರದ ಲ್ಯಾಂಗ್‌ಪೋರ್ಡ್ ರಸ್ತೆಯ ಐಸಿಐಸಿಐ ಹಾಗೂ ರೆಸಿಡೆನ್ಸಿ ರಸ್ತೆಯ ಆರ್.ಬಿ.ಎಲ್ ಬ್ಯಾಂಕ್ ನ ಎರಡು ಎಟಿಎಂನಿಂದ 95 ಲಕ್ಷ ರೂ. ಹಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ನಮ್ಮ ಇಂಗ್ಲೀಷ್ ವೆಬ್ ಸೈಟ್ 'ಮೈನೇಷನ್‌ ಡಾಟ್‌ ಕಾಂ'  ಜತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್,  ನಗರದ ಮಡಿವಾಳದಲ್ಲಿನ ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಹಾಗೂ ಯಂತ್ರ ಸರಿಪಡಿಸುವ ಸೆಕ್ಯೂರ್ ವಾಲ್ಯೂ ಎಂಬ ಕಂಪನಿಯಲ್ಲಿ ಸುಮಾರು 6 ವರ್ಷದಿಂದ ಕಸ್ಟೋಡಿಯನ್ ಕೆಲಸ ಮಾಡುತ್ತಿದ್ದ ಕಿಶೋರ್ (28) ಹಾಗೂ ಆತನ ಸ್ನೇಹಿತಿ ರಾಕೇಶ್ (37) ಎನ್ನುವಾತನನ್ನು ಬಂಧಿಸಲಾಗಿದೆ ಎಂದರು. 

ಬೆಂಗಳೂರು ನಗರ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಇಶಾ ಪಂತ್ ಅವರ ಮಾರ್ಗದರ್ಶನದಲ್ಲಿ ಹಾಗೂ ಮಡಿವಾಳ ಉಪವಿಭಾಗದ ಎಸಿಪಿ ಜಿ.ಯು.ಸೋಮೇಗೌಡ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಹೇಳಿದರು.

"

click me!