ಬೆಂಗಳೂರು ಕಾಮುಕ ಸಿಕ್ಕಿಬಿದ್ದ; ವಾಕಿಂಗ್ ಮಾಡೋ ಮಹಿಳೆಯರ ತುಟಿಗೆ ಮುತ್ತಿಟ್ಟು ಓಡಿಹೋಗುತ್ತಿದ್ದವ ಅರೆಸ್ಟ್!

Published : Jun 10, 2025, 01:26 PM IST
Bengaluru serial Kisser Arrest

ಸಾರಾಂಶ

ಬೆಂಗಳೂರಿನಲ್ಲಿ ವಾಕಿಂಗ್ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಾರ್ವಜನಿಕ ಸ್ಥಳದಲ್ಲಿ ಕಾಮುಕನೊಬ್ಬ ತಬ್ಬಿಕೊಂಡು ಮುತ್ತಿಟ್ಟ ಘಟನೆ ನಡೆದಿದೆ. ಮಹಿಳೆಯರು ಗಲಾಟೆ ಮಾಡಿದಾಗ, 'ಯಾರೂ ಬಂದು ಏನೂ ಮಾಡಲಾಗೊಲ್ಲ' ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜೂ.10): ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರಿಗೆ ರಕ್ಷಣೆ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಮತ್ತೊಬ್ಬ ಕಾಮುಕ ಸಾಕ್ಷಿಯಾಗಿದ್ದಾನೆ. ಸಂಜೆ ವೇಳೆ ವಾಕಿಂಗ್ ಮಾಡುತ್ತಿದ್ದ ಇಬ್ಬರು ಪ್ರತ್ಯೇಕ ಮಹಿಳೆಯರನ್ನು ಸಾರ್ವಜನಿಕ ಸ್ಥಳದಲ್ಲಿಯೇ ಗಟ್ಟಿಯಾಗಿ ತಬ್ಬಿಕೊಂಡು ತುಟಿಗೆ ಮುತ್ತಿಡುವ ಮೂಲಕ ತನ್ನ ಕಾಮಚೇಷ್ಟೆ ಮೆರೆದಿದ್ದಾನೆ. ಇಷ್ಟಕ್ಕೂ ಮಹಿಳೆಯರು ಗಲಾಟೆ ಮಾಡಿ, ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದರೆ, ಯಾರೂ ಬಂದು ಏನೂ ಮಾಡಲಾಗೊಲ್ಲ ಎಂದು ಹೇಳಿದ್ದ ಕಾಮುಕ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ.

ಒಬ್ಬಂಟಿ ಮಹಿಳೆಯರನ್ನು ಬಲವಂತವಾಗಿ ತಬ್ಬಿಕೊಂಡು ಮುತ್ತಿಡುವ ಕಾಮುಕನ ಹೆಸರು ಮದನ್. ಬೆಂಗಳೂರು ನಗರದ ವಿವಿಧ ಉದ್ಯಾನಗಳು, ಸಣ್ಣ ಪಾರ್ಕ್‌ಗಳು, ಮೈದಾನಗಳು ಸೇರಿದಂತೆ ಮಹಿಳೆಯರು ವಾಯು ವಿಹಾರ ಮಾಡುವ ಪ್ರಮುಖ ರಸ್ತೆಗಳನ್ನು ಈ ಕಾಮುಕನ ಅಟ್ಟಹಾಸ ಮಿತಿ ಮೀರಿತ್ತು. ಈ ಘಟನೆ ಕಳೆದ ಜೂನ್ 6 ರಂದು ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರು ಉತ್ತರ ವಿಭಾಗದ ಕಾಕ್ಸ್‌ಟೌನ್‌ನ ಮಿಲ್ಟನ್ ಪಾರ್ಕ್ ಬಳಿ ನಡೆದಿದೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈ ಪ್ರದೇಶದಲ್ಲಿ ಆರೋಪಿ ತನ್ನ ಕೀಳಮಟ್ಟದ ಮನಸ್ಸು ಪ್ರದರ್ಶಿಸಿದ್ದಾನೆ.

ತುಟಿಗೆ ಮುತ್ತು ಕೊಟ್ಟು ಓಡಿಹೋಗುವ ಕಾಮುಕ :

ಬೆಳಗ್ಗೆ ವಾಯು ವಿಹಾರಕ್ಕೆ ಕುಟುಂಬದೊಂದಿಗೆ ಬಂದಿದ್ದ ಮಹಿಳೆಯೊಬ್ಬರ ಬಳಿ ಆರೋಪಿಯು ಮುಗ್ಧವಾಗಿ ಹತ್ತಿರ ಹೋಗಿ ತಬ್ಬಿಕೊಂಡು ಬಲವಂತವಾಗಿ ತುಟಿಗೆ ಮುತ್ತು ಕೊಟ್ಟಿದ್ದಾನೆ ಎನ್ನಲಾಗಿದೆ. ಬಳಿಕ ಇದೇ ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಇನ್ನೊಬ್ಬ ಮಹಿಳೆಯನ್ನೂ ಪಾರ್ಕ್‌ನಲ್ಲಿಯೇ ತಬ್ಬಿ ಮುತ್ತು ಕೊಟ್ಟಿದ್ದಾನೆ ಎಂದು ದೂರುಗಳು ದಾಖಲಾಗಿವೆ. ಈ ಘಟನೆ ನಂತರ ಮಹಿಳೆಯರು ಆರೋಪಿಗೆ ಪ್ರಶ್ನೆ ಮಾಡುತ್ತಿದ್ದಂತೆ, 'ನೀವು ಯಾರಿಗೇ ಹೇಳಿದರೂ ಏನು ಆಗಲ್ಲ' ಎಂದು ಬೆದರಿಕೆ ಹಾಕಿ ಅಲ್ಲಿ ನಿಂತ ಕಾರಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕಾಮುಕನನ್ನು ಬಂಧಿಸಿದ ಪೊಲೀಸರು:

ಈ ಸಂಬಂಧ ಮಹಿಳೆಯರು ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ದೂರು ದಾಖಲಿಸಿದ್ದಾರೆ. ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ವಿಚಾರಣೆ ನಡೆಸಲಾಗುತ್ತಿದ್ದು, ಪೋಕ್ಸೋ (POCSO) ಮತ್ತು ಇತರ ಸಂಬಂಧಿತ ಕಲಂ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆ ಬಗ್ಗೆ ಮಕ್ಕಳ ಪೋಷಕರು, ಮಹಿಳಾ ಹಕ್ಕು ಹೋರಾಟಗಾರರು, ಮತ್ತು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚುವರಿ ಪೊಲೀಸ್ ಭದ್ರತೆ, ಸಿಸಿಟಿವಿ ಕಣ್ಗಾವಲು ಮತ್ತು ಕಠಿಣ ಕಾನೂನು ಜಾರಿ ಮಾಡುವಂತೆ ಒತ್ತಾಯಿಸಲಾಗಿದೆ. ಇಂಥ ಪ್ರಕರಣಗಳು ಪುನರಾವರ್ತನೆಗೊಳ್ಳದಂತೆ ಕ್ರಮ ಕೈಗೊಳ್ಳುವ ಆಗ್ರಹ ಮಾಡಿದ್ದಾರೆ.

ಇತ್ತೀಚಿನ ಸಾಮೂಹಿಕ ಅತ್ಯಾ*ಚಾರ ಕೇಸ್‌ಗಳು:

ಬೆಂಗಳೂರು ನಗರದಲ್ಲಿ ಹಲವು ಮಹಿಳಾ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಕೆಲವೆಡೆ ಲೈಂಗಿಕವಾಗಿ ಹಿಂದೆ, ದೌರ್ಜನ್ಯಗಳು ನಡೆದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ ಸಾಮೂಹಿಕ ಅತ್ಯಾ*ಚಾರ ಮಾಡಿದ ಘಟನೆಗಳೂ ನಡೆದಿವೆ. ಕೆ.ಆರ್. ಮಾರುಕಟ್ಟೆ, ಕೆ.ಆರ್.ಪುರದ ಬಳಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾ*ಚಾರ ಘಟನೆಗಳು ವರದಿ ಆಗಿದ್ದವು. ನಂತರ, ಬೈಕ್‌ನಲ್ಲಿ ಡ್ರಾಪ್ ಕೇಳಿದ ಯುವತಿ ಮೇಲೆ ಅತ್ಯಾ*ಚಾರ ಯತ್ನ ನಡೆದು, ಸ್ವಲ್ಪದರಲ್ಲೇ ಪೊಲೀಸರು ಯುವತಿಯನ್ನು ಪಾರು ಮಾಡಿದ ಘಟನೆಯೂ ನಡೆದಿತ್ತು. 

ಲೈಂಗಿಕ ದೌರ್ಜನ್ಯ ಘಟನೆಗಳು:

ಬಿಟಿಎಂ ಲೇಔಟ್ ಮತ್ತು ಕೋರಮಂಗಲದ ಬಳಿ ಎರಡು ಪ್ರಕರಣದಲ್ಲಿ ಒಬ್ಬಂಟಿ ಯುವತಿಯರು ಹೋಗುವಾಗ ಕಾಮುಕರು ಅವರ ಖಾಸಗಿ ಭಾಗಗಳನ್ನು ಮುಟ್ಟಿ ಪರಾರಿ ಆಗಿದ್ದ ಘಟನೆಗಳು ನಡೆದಿದ್ದರು. ಇಷ್ಟಾದರೂ ಪೊಲೀಸರು ಕಠಿಣ ಕ್ರಮವಹಿಸದ ಹಿನ್ನೆಲೆಯಲ್ಲಿ ಮತ್ತೆ ಇಂಹತ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನೀಡುವಂತಹ ಘಟನೆಗಳು ವರದಿ ಆಗುತ್ತಲೇ ಇವೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ