
ವರದಿ: ವಿಕ್ರಮ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಮೇ.28): ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ 18 ದಿನಗಳ ಕಾಲ ನಗರದ ಲಾಲ್‌ಬಾಗ್‌ನಲ್ಲಿ ಬೃಹತ್ ಮಾವು ಮತ್ತು ಹಲಸು ಮೇಳವನ್ನ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸಂಜೆ ಈ ಕಾರ್ಯಕ್ರಮಕ್ಕೆ ತೋಟಗಾರಿಕ ಸಚಿವ ಮುನಿರತ್ನ ಹಾಗೂ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಚಾಲನೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ಮಾತನಾಡಿದ ಸಚಿವ ಮುನಿರತ್ನ, ಈ ಮೇಳದಲ್ಲಿ 100ಕ್ಕೂ ಅಧಿಕ ಮಳಿಗೆಗಳಿದ್ದು, 20-22 ಬಗೆಯ ಮಾವು ಲಭ್ಯವಿದೆ.
ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು, ಹಲಸು ಲಭ್ಯವಾಗಲಿ ಎಂಬ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ ಎಂದರು. ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಮೂರು ವರ್ಷದ ಬಳಿಕ ಮತ್ತೆ ಮಾವು ಹಲಸಿನ ಮೇಳಕ್ಕೆ ಚಾಲನೆ ಸಿಕ್ಕಿದೆ. ರಾಜ್ಯದ ನಾನಾ ಕಡೆಯಿಂದ ರೈತರು ತಾವು ಬೆಳದಿರೋ ಮಾವು ಹಲಸಿನ ಹಣ್ಣನ್ನ ಇಲ್ಲಿ ಮಾರಾಟ ಮಾಡಲು ಆಗಮಿಸಿದ್ದು, ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಅಂತಾ ಹಣ್ಣಿನ ದರವನ್ನ ತೋಟಾಗಾರಿಕೆ ಇಲಾಖೆಯೇ ನಿಗದಿ ಮಾಡಿದೆ.
Chikkamagaluru ಜಿಲ್ಲೆಯಲ್ಲಿ ಮಾವಿನ ಹಣ್ಣಿಗೆ ಬಾರೀ ಬೇಡಿಕೆ
ಇನ್ನು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಇಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣು ಮೇಳದಲ್ಲಿ ಸಿಗಲಿದೆ. ರೈತರು ತಾವು ಬೆಳದ ಮಾವು ಮತ್ತು ಹಲಸಿನ ಹಣ್ಣಿಗೆ ತೋಟಾಗಾರಿಕೆ ಇಲಾಖೆ ವೇದಿಕೆ ಸೃಷ್ಟಿ ಮಾಡಿದ್ದು ಲಾಲ್‌ಬಾಗ್‌ನಲ್ಲಿ ಮುಂದಿನ 18 ದಿನ ಮಾವು ಹಲಸಿನ ಪರಿಮಳ ಮಾವು ಪ್ರಿಯರನ್ನ ಹಾಗೂ ಸಿಲಿಕಾನ್ ಸಿಟಿ ಜನರನ್ನ ಸೆಳೆಯಲಿದೆ.
ಮೇಳದಲ್ಲಿ ಮಾವಿನ ದರ ಎಷ್ಟು ಅನ್ನೋದನ್ನ ನೋಡೋದಾದ್ರೆ:
ಇಮಾಮ್ ಪಸಂದ್ - 200
ಸಕ್ಕರೆ ಗುತ್ತಿ - 150
ಕಲಾಪಡ- 120
ಮಲ್ಗೋವಾ - 120
ಮಲ್ಲಿಕಾ - 100
ಬಾದಾಮಿ - 100
ದೆಸೇರಿ - 100
ದೆಸೇರಿ - 100
ಅಮರಪಾಲಿ - 100
ರಸ್ಪುರಿ - 80
ಸಿಂಧೂರ - 50
ತೋತಾಪುರಿ - 30
Udupi Mango Mela: ದೇವಾಲಯಗಳ ನಗರಿಯಲ್ಲಿ ಮಾವಿನ ದರ್ಬಾರು
ಒಟ್ಟಿನಲ್ಲಿ ಮಾವು ಪ್ರಿಯರಿಗೆ ಹಾಗೂ ಸಿಲಿಕಾನ್ ಸಿಟಿ ಮಂದಿಗೆ ಮಾರ್ಕೆಟ್‌ಕ್ಕಿಂತ ಕಡಿಮೆ ದರ ಹಾಗೂ ಉತ್ತಮ ಕ್ವಾಲಿಟಿಯ, ಸಾವಯುವ ಮಾವು ಇಲ್ಲಿ ದೊರೆಯಲಿದ್ದು, ನೀವು ಕೂಡ ಒಮ್ಮೆ ಈ ಮೇಳಕ್ಕೆ ಭೇಟಿ ನೀಡಿ ಬಗೆ ಬಗೆಯ ಹಣ್ಣನ್ನ ಖರೀದಿಸಬಹುದಾಗಿದೆ.