ಪ್ರಯಾಣಿಕರೆ ಗಮನಿಸಿ..ಟ್ರಿನಿಟಿ ನಿಲ್ದಾಣಕ್ಕೆ ಈ ದಿನಗಳಲ್ಲಿ ಮೆಟ್ರೋ ಇಲ್ಲ

Published : Dec 21, 2018, 10:26 PM ISTUpdated : Dec 21, 2018, 10:42 PM IST
ಪ್ರಯಾಣಿಕರೆ ಗಮನಿಸಿ..ಟ್ರಿನಿಟಿ ನಿಲ್ದಾಣಕ್ಕೆ ಈ ದಿನಗಳಲ್ಲಿ ಮೆಟ್ರೋ ಇಲ್ಲ

ಸಾರಾಂಶ

ಟ್ರಿನಿಟಿ ರೈಲ್ವೆ ನಿಲ್ದಾಣ ಸಮೀಪ ಮೆಟ್ರೋ ಫಿಲ್ಲರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದಕ್ಕೆ ಬಿಎಂಆರ್‌ಸಿಎಲ್ ಪರಿಹಾರ ಕ್ರಮ ತೆಗೆದುಕೊಂಡಿದೆ. ಡಿಸೆಂಬರ್ 28 ರಿಂದ ಟ್ರಿನಿಟಿ ಮೆಟ್ರೋ ನಿಲ್ದಾಣಕ್ಕೆ ರೈಲು ಸೇವೆ ಸ್ಥಗಿತವಾಗಲಿದೆ.

ಬೆಂಗಳೂರು[ಡಿ.21] ಬಿರುಕು ಕಾಣಿಸಿಕೊಂಡಿರುವ ಮೆಟ್ರೋ ಪಿಲ್ಲರ್ ದುರಸ್ತಿ ಮಾಡಬೇಕಾಗಿರುವುದರಿಂದ ಟ್ರಿನಿಟಿ ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆ ಇರುವುದಿಲ್ಲ.  ಬಿಎಂಆರ್ ಸಿಎಲ್ ದುರಸ್ತಿ ಕಾರ್ಯದ ಹಿನ್ನೆಲೆ ರೈಲು ಸಂಚಾರ ಸ್ಥಗಿತ ಮಾಡಲಾಗುತ್ತಿದೆ.  ಡಿಸೆಂಬರ್ 28 ರಿಂದ 30ರವರೆಗೆ ಮೆಟ್ರೋ ಸಂಚಾರ ಬಂದ್‌ ಆಗಲಿದೆ.

ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದಿದೆ

ಮೈಸೂರು ರಸ್ತೆಯಿಂದ ಎಂಜಿ ರಸ್ತೆ, ಇಂದಿರಾನಗರದಿಂದ ಬೈಯ್ಯಪ್ಪನಹಳ್ಳಿ ವರೆಗೆ ರೈಲು ಸೇವೆ 6 ರಿಂದ 15 ನಿಮಿಷಗಳ ಅಂತರದಲ್ಲಿ ಮುಂದುವರೆಯಲಿದೆ. ದಿನಾಂಕ 28 ರಂದು ರಾತ್ರಿ ಎಂಟರಿಂದ 11ಘಂಟೆ ಹಾಗೂ ದಿನಾಂಕ 29, 30 ರಂದು ಮೆಟ್ರೋ ಪ್ರಯಾಣಿಕರಿಗೆ ಉಚಿತ ಬಸ್ ಸೇವೆಯನ್ನ‌ ಬಿಎಂಆರ್ ಸಿಎಲ್ ಕಲ್ಪಿಸಿದೆ. 

ಟ್ರಿನಿಟಿ ಮೆಟ್ರೋ ನಿಲ್ದಾಣದ ನಿರ್ವಹಣಾ ಕಾರ್ಯ ಪೂರ್ಣಗೊಂಡ ಬಳಿಕ‌ ದಿನಾಂಕ 31 ರಂದು ಎಂದಿನಂತೆ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ- ಬಿಎಂಆರ್ ಸಿಎಲ್ ನಿಂದ ಮಾಹಿತಿ ನೀಡಿದೆ.

PREV
click me!

Recommended Stories

Motor Vehical: ರಸ್ತೆಯಲ್ಲಿ ನಿಮ್ಮ ವಾಹನ ತಡೆದರೆ ತಕ್ಷಣ ದಾಖಲೆ ಕೊಡಬೇಕಾ? ಟ್ರಾಫಿಕ್ ಪೊಲೀಸ್‌-RTO ಅಧಿಕಾರದ ಅಸಲಿ ಸತ್ಯ ಇಲ್ಲಿದೆ!
ಕರ್ನಾಟಕ ಜನತೆಗೆ ಬಸ್ ದರ ಏರಿಕೆ ಶಾಕ್? ಶೀಘ್ರದಲ್ಲೇ ಟಿಕೆಟ್ ಬೆಲೆ ಹೆಚ್ಚಳ ಸೂಚಿಸಿದ ಸಚಿವ