Bengaluru: ನಾಗಸಂದ್ರ - ಮಾದಾವರ ಮೆಟ್ರೋ ಸೇವೆ ವಿಳಂಬ

By Sathish Kumar KH  |  First Published Jun 19, 2024, 10:32 AM IST

ಬೆಂಗಳೂರಿನಲ್ಲಿ ನಾಗಸಂದ್ರ ಟು ಮಾದಾವರ ಮೆಟ್ರೋ ವಾಣಿಜ್ಯ ಸೇವೆ ಎದುರು ನೋಡುತ್ತಿದ್ದ ಪ್ರಯಾಣಿಕರಿಗೆ ನಿರಾಸೆ ಎದುರಾಗಿದೆ.


ಬೆಂಗಳೂರು (ಜೂ.19): ಬೆಂಗಳೂರಿನಲ್ಲಿ ನಾಗಸಂದ್ರ ಟು ಮಾದಾವರ ಮೆಟ್ರೋ ವಾಣಿಜ್ಯ ಸೇವೆ ಎದುರು ನೋಡುತ್ತಿದ್ದ ಪ್ರಯಾಣಿಕರಿಗೆ ನಿರಾಸೆ ಎದುರಾಗಿದೆ. ನಾಗಸಂದ್ರದಿಂದ ಮಾದಾವರ ಮೆಟ್ರೋ ಸೇವೆ ವಿಳಂಬವಾಗಲಿದೆ. ಈ ವಿಸ್ತರಿತ ಮಾರ್ಗದಲ್ಲಿ ಎಲೆಕ್ಟ್ರಿಕ್ ಮತ್ತು ಸಿಗ್ನಲಿಂಗ್ ಒಳಗೊಂಡ ಸಿಸ್ಟಮ್ ಕಾಮಗಾರಿ ಆರಂಭವಾಗದ ಹಿನ್ನೆಲೆಯಲ್ಲಿ ವಿಳಂಬ ಆಗಲಿದೆ ಎಂದು ತಿಳಿದುಬಂದಿದೆ.

ನಾಗಸಂದ್ರದಿಂದ ಮಾದಾವಾರ ನಡುವೆ ಮೆಟ್ರೋ ಸಂಚಾರ ಜುಲೈನಲ್ಲಿ ಶುರುವಾಗುತ್ತೆ ಎನ್ನಲಾಗುತ್ತಿತ್ತು. ಆದರೆ, ಇನ್ನೂ ಕೆಲವು ಕಾಮಗಾರಿಗಳು ಬಾಕಿ ಇರುವ ಹಿನ್ನೆಲೆಯಲ್ಲಿ ವಾಣಿಜ್ಯ ಸೇವೆ ಸೆಪ್ಟೆಂಬರ್ ನಲ್ಲಿ ಶುರುವಾಗೋ ಸಾಧ್ಯತೆಯಿದೆ. ಒಟ್ಟು 298 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗ್ತಿರೋ ವಿಸ್ತರಿತ ಮಾರ್ಗ ಸಾರ್ವಜನಿಕ ಸೇವೆಗೆ ಲಭ್ಯವಾಗುವುದು ತಡವಾಗುತ್ತಿದೆ. ಇನ್ನು ಈ‌ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಸೇರಿ ಒಟ್ಟು ಮೂರು ನಿಲ್ದಾಣಗಳು ಹೆಚ್ಚುವರಿಯಾಗಿ ವಿಸ್ತರಣೆಗೊಳ್ಳಲಿವೆ. 

Latest Videos

undefined

ಬೆಂಗಳೂರಿನ ಪ್ರಪ್ರಥಮ ಡಬ್ಬಲ್‌ ಡೆಕ್ಕರ್ ಫ್ಲೈಓವರ್‌ ಸೇವೆಗೆ ಸಿದ್ಧ!

ನಾಗಸಂದ್ರದಂದ ಮಾದಾವಾರ ಮೆಟ್ರೋದ ವಿಶೇಷತೆಗಳು:

  • * ನಾಗಸಂದ್ರ ಟು ಮಾದಾವರ ವಿಸ್ತರಿತ ಮಾರ್ಗ ಇದಾಗಿದೆ.
  • * ಇದು ಹಸಿರು ಮಾರ್ಗದಲ್ಲಿ 3.7 ಕಿ.ಮೀ ಅಂತರದ ಮೆಟ್ರೋ ಕಾಮಗಾರಿ ಆಗಿದೆ.
  • * ವಿಸ್ತರಿತ ಮಾರ್ಗದಲ್ಲಿ ಎಲೆಕ್ಟ್ರಿಕ್ ಮತ್ತು ಸಿಗ್ನಲಿಂಗ್ ಒಳಗೊಂಡ ಸಿಸ್ಟಮ್ ಕಾಮಗಾರಿ ಸಿದ್ದಪಡಿಸಬೇಕು.
  • * ಸಿಸ್ಟಮ್ ಕಾಮಗಾರಿ ಸಿದ್ದಪಡಿಸಲು ಒಂದು ತಿಂಗಳು ಬೇಕಾಗಿದೆ.
  • * ವಿವಿಧ ಟೆಸ್ಟ್ ಗಳ ಜೊತೆಗೆ 45 ದಿನ ಮೆಟ್ರೋ ರೈಲು ಪ್ರಯೋಗಿಕ ಸಂಚಾರ ಮಾಡಬೇಕು.
  • * ನಂತರ ದೆಹಲಿಯಿಂದ ಮೆಟ್ರೋ ಸುರಕ್ಷತಾ ಆಯುಕ್ತರು ಭೇಟಿ ಪರಿಶೀಲನೆ ಮಾಡಬೇಕು.
  • * ಎಲ್ಲವೂ ಸರಿ ಇದ್ರೆ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಿ ಪ್ರಮಾಣಪತ್ರ ನೀಡಲಿದ್ದಾರೆ. 
click me!