ಕೊಬ್ಬರಿ ಖರೀದಿ ಹಣ ರೈತರ ಖಾತೆಗೆ ಜಮಾ ಮಾಡಲು ಡಿಮ್ಯಾಂಡ್

By Kannadaprabha NewsFirst Published Jun 19, 2024, 8:24 AM IST
Highlights

ನ್ಯಾಫೆಡ್‌ ಕೇಂದ್ರದಲ್ಲಿ ಕೊಬ್ಬರಿಯನ್ನು ಖರೀದಿ ಮಾಡಿ ರೈತರ ಖಾತೆಗೆ ಹಣ ಜಮಾ ಮಾಡುತ್ತಿಲ್ಲ ಎಂದು ಮುಖಂಡ ಶಿವಶಂಕರ ಬಾಬು ಆಕ್ರೋಶ ವ್ಯಕ್ತಪಡಿಸಿದರು.

  ಗುಬ್ಬಿ ;  ನ್ಯಾಫೆಡ್‌ ಕೇಂದ್ರದಲ್ಲಿ ಕೊಬ್ಬರಿಯನ್ನು ಖರೀದಿ ಮಾಡಿ ರೈತರ ಖಾತೆಗೆ ಹಣ ಜಮಾ ಮಾಡುತ್ತಿಲ್ಲ ಎಂದು ಮುಖಂಡ ಶಿವಶಂಕರ ಬಾಬು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಎಪಿಎಂಸಿ ಆವರಣದ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರದಲ್ಲಿ ಮೇ 7 ರಿಂದ ಮೇ 15ರವರೆಗೆ ಕೊಬ್ಬರಿಯನ್ನು ಖರೀದಿ ಮಾಡಿರುವಂತಹ ಸುಮಾರು ನೂರಕ್ಕೂ ಹೆಚ್ಚು ರೈತರಿಗೆ ಇದುವರೆಗೂವನ್ನು ಹಾಕಿಲ್ಲ. ಈ ಹಣವನ್ನೇ ನಂಬಿಕೊಂಡು ಜೀವನ ಮಾಡುತ್ತಿರುವಂತಹ ರೈತರಿಗೆ ಸಮಸ್ಯೆಯಾಗಿದೆ ಎಂದರು.

Latest Videos

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಮಾತನಾಡಿ, ಈಗಾಗಲೇ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದು, ಇನ್ನೇರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಬರಬೇಕಾಗಿರುವಂತಹ ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದರು.

ಮುಖಂಡರಾದ ಸಿದ್ದಲಿಂಗಪ್ಪ, ಸಿದ್ದರಾಮಯ್ಯ, ಮಹೇಶ್, ಮಂಜುನಾಥ್, ಚನ್ನಬಸವಯ್ಯ ಶಿವುಕುಮಾರ್ ಮಹಾಲಿಂಗಯ್ಯ, ಷಡಕ್ಷರಿ ಇದ್ದರು. 

ಅವಧಿ ವಿಸ್ತರಣೆ

ತಿಪಟೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ನ್ಯಾಫೆಡ್ ಸಂಸ್ಥೆ ಕರ್ನಾಟಕ ರಾಜ್ಯ ಮಾರಾಟ ಮಂಡಳಿಯವರ ಮೂಲಕ ಉಂಡೆ ಕೊಬ್ಬರಿನ್ನು ಖರೀದಿಸುತ್ತಿದ್ದಾರೆ.

ಇಲ್ಲಿಯವರೆಗೆ ಶೇ. 99ರಷ್ಟು ನೋಂದಾಯಿತ ಕೊಬ್ಬರಿಯನ್ನು ಖರೀದಿಸಲಾಗಿದ್ದು, ಸರ್ಕಾರವು ಸದರಿ ಖರೀದಿ ಪ್ರಕ್ರಿಯೆಯನ್ನು ಜೂ.29ರವರೆಗೆ ಮುಂದುವರೆಸಿರುವುದರಿಂದ ನೋಂದಣಿ ಮಾಡಿಸಿ ಇಲ್ಲಿಯವರೆಗೆ ಮಾರಾಟ ಮಾಡದೇ ಬಾಕಿ ಇರುವ ರೈತರು ತಮ್ಮ ಉಂಡೆ ಕೊಬ್ಬರಿಯನ್ನು ಜೂ.22ರಂದು ತಮ್ಮ ನೋಂದಣಿ ಕೌಂಟರ್‌ಗಳಾದ ತಿಪಟೂರು, ಕೊನೇಹಳ್ಳಿ, ಕರಡಾಳು ಮತ್ತು ಕೆ.ಬಿ. ಕ್ರಾಸ್‌ಗಳಲ್ಲಿ ತಂದು ಮಾರಾಟ ಮಾಡಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಪಿಎಂಸಿ ಸಂಪರ್ಕಿಸಬಹುದು.

click me!