ಮೈಸೂರು-ಬೆಂಗಳೂರು ರೈಲು : ಒಂದು ಗುಡ್, ಒಂದು ಬ್ಯಾಡ್ ನ್ಯೂಸ್

By Web DeskFirst Published Aug 15, 2018, 5:30 PM IST
Highlights

ಮೈಲಾಡುತುರೈ-ಮೈಸೂರು ರೈಲು ಪ್ರತಿದಿನ ಬೆಳಗ್ಗೆ 6ಕ್ಕೆ ಹೊರಟು 8.30ಕ್ಕೆ ಮೈಸೂರು ತಲುಪಲಿದೆ. ಯಶವಂತಪುರ-ಮೈಸೂರು ರೈಲು ಪ್ರತಿದಿನ ಮ.1.30ಕ್ಕೆ ಹೊರಟು ಸಂಜೆ 4 ಗಂಟೆಗೆ ತಲುಪಲಿದೆ.

ಮೈಸೂರು[ಆ.15]: ಮೈಸೂರು- ಬೆಂಗಳೂರು ನಡುವೆ ಸಂಚರಿಸುವ ರೈಲುಗಾಡಿಗಳ ವೇಗದ ಮಿತಿ ಹೆಚ್ಚಿಸಲಾಗಿದ್ದು, ಆ.15ರಿಂದ ಜಾರಿಗೆ ಬರಲಿದ್ದು, ವೇಗದ ಮಿತಿ ಹೆಚ್ಚಿಸಿಕೊಂಡ ರೈಲು ಟಿಕೆಟ್ ದರವನ್ನು 15 ರೂ. ಹೆಚ್ಚಿಸಲಾಗಿದೆ.

ರೈಲಿನ ಸಂಖ್ಯೆ, ನಿಲುಗಡೆ, ರೈಲುಗಾಡಿ ಬದಲಿಸುವ ವೇಳೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಕೆಲವು ಬದಲಾವಣೆಯೊಂದಿಗೆ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದೆ. ಈ ಪರಿಷ್ಕರಣೆಯಿಂದ 5ರಿಂದ 20 ನಿಮಿಷ ಬೆಂಗಳೂರನ್ನು ಬೇಗ ತಲುಪಬಹುದಾಗಿದೆ.

ಬೆಂಗಳೂರು-ಮೈಸೂರು:
ಮೈಲಾಡುತುರೈ-ಮೈಸೂರು ರೈಲು ಪ್ರತಿದಿನ ಬೆಳಗ್ಗೆ 6ಕ್ಕೆ ಹೊರಟು 8.30ಕ್ಕೆ ಮೈಸೂರು ತಲುಪಲಿದೆ. ಯಶವಂತಪುರ-ಮೈಸೂರು ರೈಲು ಪ್ರತಿದಿನ ಮ.1.30ಕ್ಕೆ ಹೊರಟು ಸಂಜೆ 4 ಗಂಟೆಗೆ ತಲುಪಲಿದೆ.

ಮೈಸೂರು- ಬೆಂಗಳೂರು: 
ಮೈಸೂರು-ಮೈಲಾಡುತುರೈ ರೈಲು ಸಂಜೆ 4.15ಕ್ಕೆ ಹೊರಟು 6.45ಕ್ಕೆ ಬೆಂಗಳೂರು ತಲುಪಲಿದೆ. ಮೈಸೂರು- ಯಶವಂತಪುರ ರೈಲು ಬೆಳಗ್ಗೆ 8.25ಕ್ಕೆ ಹೊರಟು ಬೆಳಗ್ಗೆ 10.55ಕ್ಕೆ ತಲುಪಲಿದೆ. ಮೈಸೂರು- ಸಾಯಿನಗರ ಶಿರಡಿ ರೈಲು ಬೆಳಗ್ಗೆ 5.30ಕ್ಕೆ ಹೊರಟು 8 ಗಂಟೆಗೆ ತಲುಪಲಿದೆ. ಒಟ್ಟಾರೆ ಮೈಸೂರು- ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರು 2 ಗಂಟೆ 30 ನಿಮಿಷದೊಳಗೆ ತಲುಪಬಹುದು.

click me!