ಬೆಂಗಳೂರು: ಮನೆ ಕಟ್ಟೋ ಮರಳಲ್ಲಿ ಶವ ಹೂತಿಟ್ಟ ಕಿರಾತಕರು, ಮೃತದೇಹ ಗುರುತೇ ಸಿಕ್ತಿಲ್ಲ

Published : Oct 15, 2023, 06:54 PM IST
ಬೆಂಗಳೂರು: ಮನೆ ಕಟ್ಟೋ ಮರಳಲ್ಲಿ ಶವ ಹೂತಿಟ್ಟ ಕಿರಾತಕರು, ಮೃತದೇಹ ಗುರುತೇ ಸಿಕ್ತಿಲ್ಲ

ಸಾರಾಂಶ

ಮನೆ ಕಟ್ಟಲು ತಂದು ಹಾಕಿದ್ದ ಮರಳಿನ ರಾಶಿಯಲ್ಲಿ ಕಿಡಿಗೇಡಿಗಳು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಮುಚ್ಚಿ ಹಾಕಿರುವ ದುರ್ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು (ಅ.15): ಮನೆ ಕಟ್ಟಲು ರಸ್ತೆಯ ಪಕ್ಕದಲ್ಲಿ ಹಾಕಿದ್ದ ಮರಳಿನ ರಾಶಿಯಲ್ಲಿ ಕಿಡಿಗೇಡಿಗಳು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಮುಚ್ಚಿ ಹಾಕಿರುವ ದುರ್ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಡೆದಿದೆ.

ನಗರದ ಮಹಾಲಕ್ಷ್ಮಿ ಲೇಔಟ್‌ನ ಕುರುಬರಹಳ್ಳಿಯ ಲಗ್ಗೆರೆ 16ನೇ ಕ್ರಾಸ್‌ನಲ್ಲಿ ಮಧ್ಯಾಹ್ನದ ವೇಳೆ ಅನಾಮಿಕ ಮೃತದೇಹ ಪತ್ತೆಯಾಗಿದೆ. ರಸ್ತೆಯ ಪಕ್ಕದಲ್ಲಿ ಮನೆ ನಿರ್ಮಾಣಕ್ಕೆ ತಂದು ಸುರಿಯಲಾಗಿದ್ದ ಎಂ.ಸ್ಯಾಂಡ್‌ನಲ್ಲಿ ಬೀದಿ ನಾಯಿ ವಾಸನೆಯಿಂದ ಶವವನ್ನು ಕೆದರಿ ಹೊರ ತೆಗೆದಿವೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸುಮಾರು 30 ರಿಂದ 40 ವರ್ಷದ ವ್ಯಕ್ತಿಯ ಮೃತದೇಹ ಎಂದು ಹೇಳಲಾಗುತ್ತಿದ್ದು, ಯಾರ ದೇಹವೆಂಬುದು ತಿಳಿದುಬಂದಿಲ್ಲ.
ಇಂದು ಬೆಳಗ್ಗೆ ಬೀದಿ ನಾಯಿಗಳು ಒಟ್ಟಾಗಿ ಸೇರಿಕೊಂಡು ಕಲ್ಲು ಪುಡಿ (ಎಂ ಸ್ಯಾಂಡ್‌) ರಾಶಿಯನ್ನ ಕೆದರುತ್ತಿದ್ದವು. ಈ ವೇಳೆ ಒಂದು ಮೃತದೇಹ ಇರುವ ಬಗ್ಗೆ ಸ್ಥಳೀಯರಿಗೆ ಕಂಡುಬಂದಿದೆ. ಅಲ್ಲಿಂದ ನಾಯಿಗಳನ್ನು ಓಡಿಸಿ ಮೃತದೇಹ ಇರುವ ಬಗ್ಗೆ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಪೊಲೀಸರು ಸ್ಥಳ ಭೇಟಿ ಪರಿಶೀಲನೆ ಮಾಡಿದ್ದಾರೆ.

ಬೆಂಗಳೂರಲ್ಲಿ ನಾಯಿದು ಕಬಾಬ್‌, ನಾಯಿದು ಮಂಚೂರಿ ಮಾರಾಟ: ಈ ಹೋಟೆಲ್‌ಗೆ ಹೋಗೋ ಮುನ್ನ ಎಚ್ಚರ!

ಈ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮರಳಿನ ರಾಶಿಯಲ್ಲಿ ಮೃತದೇಹ ಪತ್ತೆಯಾಗಿರುವುದನ್ನು ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕಟ್ಟಡ ಕಟ್ಟುವ ಎಂ ಸ್ಯಾಂಡ್ ಮರಳಿನೊಳಗೆ ಮೃತದೇಹ ಕಂಡುಬಂದಿದೆ. ಇದುವರೆಗೆ ಈ ಅನಾಥ ಶವ ಯಾವುದು ಎಂದು ತಿಳಿದು ಬಂದಿಲ್ಲ. ಈಗಾಗಲೇ ಕಟ್ಟಡ ಮಾಲಿಕ ಬಂದು ಕಂಪ್ಲೆಂಟ್ ಕೂಡ ಕೊಟ್ಟಿದ್ದಾರೆ. ತನಿಖೆ ಮುಂದುವರಿದಿದ್ದು ಸದ್ಯದಲ್ಲೆ ಮೃತದೇಹ ಯಾರದ್ದೆಂದು ಪತ್ತೆಹಚ್ಚಲಾಗುವುದು ಎಂದು ತಿಳಿಸಿದರು.

ಮಾತು ಕೇಳದ ಮಗಳ ಕೊಂದು ನೇಣಿಗೆ ಶರಣಾದ ತಾಯಿ
ಹರಪನಹಳ್ಳ‍ಿ(ಅ.15): ಕ್ಲುಲ್ಲಕ ವಿಚಾರಕ್ಕೆ ಗಲಾಟೆ ನಡೆದು ತಾಯಿ ತನ್ನಿಬ್ಬರು ಮಕ್ಕಳಿಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದು, ಇದರಿಂದ ಮಗಳು ಮೃತಪಟ್ಟರೆ, ಮಗ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಘಟನೆ ಹರಪನಹಳ್ಳಿ ತಾಲೂಕಿನ ಹುಲ್ಲಿಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ. ನಂತರ ತಾಯಿ ನೇಣಿಗೆ ಶರಣಾಗಿದ್ದಾಳೆ. ಶಮನಾಬಾನು (18) ತಾಯಿ ಹಲ್ಲೆಯಿಂದ ಮೃತಪಟ್ಟಾಕೆ. ಬೇಗಂಬೀ (50) ನೇಣಿಗೆ ಶರಣಾದ ಹಿಳೆಯಾಗಿದ್ದಾಳೆ.

ಟಿವಿ ರಿಮೋಟ್‌ಗಾಗಿ ಮಕ್ಕಳ ಕಿತ್ತಾಟ ಬಿಡಿಸಲು, ಕತ್ತರಿ ಎಸೆದ ತಂದೆ: ಕುತ್ತಿಗೆಗೆ ಕತ್ತರಿ ಸಿಕ್ಕಿಕೊಂಡು ಮಗ ಸಾವು

ಮಕ್ಕಳು ಮಾತು ಕೇಳುತ್ತಿಲ್ಲ ಎನ್ನುವ ವಿಚಾರದಲ್ಲಿ ಶುಕ್ರವಾರ ರಾತ್ರಿ ಮಗಳು ಶಮನಾಬಾನು, ಪುತ್ರ ಅಮಾನುಲ್ಲಾ ಹಾಗೂ ತಾಯಿ ಮಧ್ಯೆ ಜಗಳ ಆರಂಭವಾಗಿದೆ. ಇದು ತಾರಕಕ್ಕೇರಿ ಬೆಳಗಿನ ಜಾವ ಇಬ್ಬರೂ ಮಕ್ಕಳ ತಲೆಗೆ ತಾಯಿ ಕಟ್ಟಿಗೆಯಿಂದ ಹೊಡೆದಿದ್ದಾಳೆ. ಘಟನೆಯಲ್ಲಿ ಪುತ್ರಿ ಸ್ಥಳದಲ್ಲೇ ಮೃತಪಟ್ಟರೆ, ಪುತ್ರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಇಬ್ಬರೂ ಮಕ್ಕಳು ಮೃತಪಟ್ಟರೆಂದು ಭಾವಿಸಿ ನೊಂದುಕೊಂಡ ಬೇಗಂಬೀ ನಂತರ ತಾನು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್