ಬೆಂಗಳೂರು ಮೆಟ್ರೋ: ಅ.3ರಂದು ಹಸಿರು ಮಾರ್ಗದಲ್ಲಿ ಸೇವೆಯಲ್ಲಿ ವ್ಯತ್ಯಯ

By Sathish Kumar KH  |  First Published Oct 1, 2024, 7:34 PM IST

ಸುರಕ್ಷತಾ ತಪಾಸಣೆಯಿಂದಾಗಿ ಅಕ್ಟೋಬರ್ 3, 2024 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ ನಾಗಸಂದ್ರ ಮತ್ತು ಮಾದವಾ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಈ ಅವಧಿಯಲ್ಲಿ ನಾಗಸಂದ್ರ ಮತ್ತು ಪೀಣ್ಯ ಇಂಡಸ್ಟ್ರಿ ನಿಲ್ದಾಣಗಳ ನಡುವೆ ರೈಲು ಸಂಚಾರ ಇರುವುದಿಲ್ಲ.


ಬೆಂಗಳೂರು (ಅ.01): ನಾಗಸಂದ್ರ ಮತ್ತು ಮಾಧವರ ಮೆಟ್ರೋ ನಿಲ್ದಾಣಗಳ ನಡುವಿನ ಹೊಸ ರೈಲು ಮಾರ್ಗದಲ್ಲಿ ಅ.3ರ ಗುರುವಾರದಂದು ಸುರಕ್ಷತಾ ತಪಾಸಣೆ ನಡೆಸುತ್ತರುವುದರಿಂದ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

ನಾಗಸಂದ್ರ ಮತ್ತು ಮಾದವಾರ ನಿಲ್ದಾಣಗಳ ನಡುವಿನ ಹೊಸ ಮಾರ್ಗವನ್ನು ಮೆಟ್ರೋ ರೈಲ್ವೆ ಸುರಕ್ಷತ ಆಯುಕ್ತರಿಂದ ಶಾಸನಬದ್ಧ ಸುರಕ್ಷತಾ ತಪಾಸಣೆ ನಡೆಸುತ್ತಿರುವುದರಿಂದ, ದಿನಾಂಕ 3ನೇ ಅಕ್ಟೋಬರ್ 2024 ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಬದಲಾವಣೆಯಾಗಲಿದೆ.

Latest Videos

undefined

ಬೆಂಗಳೂರು ತಿಂಡೀಸ್ ಚಹಾ ಕೊಡುವ 3ಡಿ ಜಾಹಿರಾತು; ಸಿಲಿಕಾನ್ ಸಿಟಿ ಜನರಿಂದ ಭಾರಿ ಆಕ್ರೋಶ!

ಈ ಹಿನ್ನೆಲೆಯಲ್ಲಿ ಗುರುವಾರ ನಾಗಸಂದ್ರ ಮತ್ತು ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ವಾಣಿಜ್ಯ ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ, ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸೇವೆ ಎಂದಿನಂತೆ ಲಭ್ಯವಿರುತ್ತದೆ. ಬೆಳಿಗ್ಗೆ 9.00 ಗಂಟೆಗೆ ರೇಷ್ಮೆ ಸಂಸ್ಥೆಯಿಂದ ಹೊರಡುವ ಕೊನೆಯ ರೈಲು ನಾಗಸಂದ್ರ ನಿಲ್ದಾಣಕ್ಕೆ ತಲುಪಲಿದೆ. 

ನೇರಳೆ ಮಾರ್ಗದ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು ಸದರಿ ಬದಲಾವಣೆಯನ್ನು ಗಮನಿಸಲು ಮತ್ತು ಸಹಕರಿಸಲು ಕೋರಿದೆ. ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸಿದೆ.

click me!