ಕಟ್ಟಡದ ಮೇಲಿಂದ ಬಿದ್ದು ಇಬ್ಬರ ಸಾವು: ಬೆಂಗಳೂರಲ್ಲಿ ಮಾನಸಿಕ ಅಸ್ವಸ್ಥ, ಹುಬ್ಬಳ್ಳಿಯಲ್ಲಿ ಅಪರಿಚಿತ ಮೃತ

Published : Oct 24, 2023, 04:23 PM ISTUpdated : Oct 24, 2023, 04:28 PM IST
ಕಟ್ಟಡದ ಮೇಲಿಂದ ಬಿದ್ದು ಇಬ್ಬರ ಸಾವು: ಬೆಂಗಳೂರಲ್ಲಿ ಮಾನಸಿಕ ಅಸ್ವಸ್ಥ, ಹುಬ್ಬಳ್ಳಿಯಲ್ಲಿ ಅಪರಿಚಿತ ಮೃತ

ಸಾರಾಂಶ

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ವಾಕಿಂಗ್‌ ಮಾಡಿಸುವಾಗ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮತ್ತೊಂದೆಡೆ, ಹುಬ್ಬಳ್ಳಿ ಜನತಾ ಬಜಾರ್‌ ಕಟ್ಟಡದ ಮೇಲಿಂದ ವ್ಯಕ್ತಿ ಬಿದ್ದು ಸಾವನ್ನಪ್ಪಿದ್ದಾರೆ.

ಬೆಂಗಳೂರು/ ಹುಬ್ಬಳ್ಳಿ (ಅ.24): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ ಮೂರನೇ ಮಹಡಿಯಲ್ಲಿ ಆಸ್ಪತ್ರೆ ಸಿಬ್ಬಂದಿ ವಾಕಿಂಗ್‌ ಮಾಡಿಸಲು ಕರೆದುಕೊಂಡು ಹೋದಾಗ ಆತನನ್ನು ದೂಡಿ ಮಹಡಿಯಿಂದು ಜಿಗಿದು ಸಾವನ್ನಪ್ಪಿದ್ದಾನೆ.

ಮೃತ ವ್ಯಕ್ತಿಯನ್ನು ಶುಕೂರ್ ಪಟೇಲ್ ಎಂದು ಗುರುತಿಸಲಾಗಿದೆ. ಇವರು ಮೂಲತ: ಯಾದಗಿರಿ ಜಿಲ್ಲೆಯವರಾಗಿದ್ದಾರೆ. ಬೆಂಗಳೂರಿನ ಕೆಂಚನಪುರ ಕ್ರಾಸ್ ಬಳಿ ಇರುವ ಫೋರ್ ಎಸ್ ಮನೋವೈದ್ಯಕೀಯ ಆಸ್ಪತ್ರೆ ಮತ್ತು ಪುನರ್ವಸತಿ ಕೇಂದ್ರದಲ್ಲಿ ಘಟನೆ ನಡೆದಿದೆ. ಇನ್ನು ಚಿಕಿತ್ಸೆಗೆ ದಾಖಲಾಗಿದ್ದ ಆಸ್ಪತ್ರೆ ಕಟ್ಟದ ಮೂರನೇ ಮಹಡಿಯಲ್ಲಿ ವಾಕಿಂಗ್ ಮಾಡುಸುತ್ತಿದ್ದ ಸಿಬ್ಬಂದಿ ಓಂಕಾರ್ ಎಂಬಾತನನ್ನು ತಳ್ಳಿದ, ಶುಕೂರ್ ಪಾಟೇಲ್ ಮಹಡಿಯಿಂದ ಕೆಳಗಡೆ ಜಿಗಿದ್ದಾನೆ. ಮೂರನೇ ಮಹಡಿಯಿಂದ ಬಿದ್ದ ಪರಿಣಾಮ ಶುಕೂರ್ ಪಾಟೀಲ್ ತಲೆಗೆ ಗಂಭೀರವಾಗಿ ಗಾಯವಾಗಿ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಟಿಕೆಟ್‌ ವಂಚನೆ ಕೇಸ್‌ ಟ್ವಿಸ್ಟ್‌: ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಹೆಸರೇಳಿದ ಆರೋಪಿ

ಹುಬ್ಬಳ್ಳಿ ಜನತಾ ಬಜಾರ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ: ಮತ್ತೊಂದೆಡೆ ಹುಬ್ಬಳ್ಳಿ ನಗರದ ಜನತಾ ಬಜಾರ್‌ನಲ್ಲಿರುವ ಕಟ್ಟಡವೊಂದರ ಮೇಲಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಟ್ಟಡದ ಮೇಲಿನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಹೊಸದಾಗಿ ನಿರ್ಮಾಣವಾದ ಕಟ್ಟಡದಲ್ಲಿ ನಿಂತಿರೋ ನೀರಲ್ಲಿ ಬಿದ್ದಿದ್ದು, ಕೊಳೆತು ನಾರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹೊಸದಾಗಿ ನಿರ್ಮಿಸಿರೋ ಕಟ್ಟಡದಲ್ಲಿ ಯಾರೂ ವಾಸವಿಲ್ಲ. ಹೀಗಾಗಿ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. ಮೃತನ ಗುರುತು ಪತ್ತೆ ಹಚ್ಚಲಾರದಷ್ಟು ಶವ ಕೊಳೆತು ಹೋಗಿದೆ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಪೊಲಿಸರು ಶವವನ್ನು ಕಿಮ್ಸ್ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಘಟನೆ ಕುರಿತಂತೆ ಹುಬ್ಬಳ್ಳಿ ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ರಾಮನಗರ ಜಿಲ್ಲೆಯನ್ನು ಪುನಃ ಬೆಂಗಳೂರಿಗೆ ಸೇರಿಸಲು ನಿರ್ಧಾರ

ವಿಜಯನಗರ (ಅ.24): ಇಡೀ ದೇಶವೇ ಇಂದು ವಿಜಯದಶಮಿ ಸಂಭ್ರಮದಲ್ಲಿದೆ. ಹೀಗಿರುವಾಗ ವಿಜಯನಗರ ಜಿಲ್ಲೆಯಲ್ಲೊಂದು ಎರಡು ಕಾಲಿನ ಕರುವೊಂದು ಜನಿಸಿದ್ದು, ಇದು  ಪರಶಿವನ ಪುನರ್ಜನ್ಮವೆಂದು ಪೂಜಿಸಲು ಮುಂದಾಗಿದ್ದಾರೆ. ವಿಜಯ ದಶಮಿಯ ದಿನದಂದೇ ಅಪರೂಪದ ಕರು ಜನನವಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ವಿಚಿತ್ರ ಕರು ಜನನವಾಗಿದೆ. ಎರಡು ಕಾಲುಗಳು ಇರುವ ವಿಶೇಷ ಕರು ಇದಾಗಿದ್ದು, ಆರೋಗ್ಯವಾಗಿದೆ. ಹಡಪದ ಬಸವಣ್ಣನವರ ಮನೆಯಲ್ಲಿ ಜನಿಸಿದ ಕರುವನ್ನು ನೋಡಲು ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಇನ್ನು ಈ ಕರು ಪರಶಿವನ ಪುನರ್ಜನ್ಮ ಎಂದು ಜನರು ಭಾವಿಸಿ ಪೂಜಿಸುತ್ತಿದ್ದಾರೆ. ಈ ವಿಶೇಷ ಕರುವನ್ನು ನೋಡಲು ಮತ್ತು ಪೂಜೆ ಮಾಡಲು ತಂಡೋಪ ತಂಡವಾಗಿ ಬರಯತ್ತಿದ್ದಾರೆ.

PREV
Read more Articles on
click me!

Recommended Stories

ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ