ಬೆಂಗಳೂರು-ಮಂಗಳೂರು ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

Kannadaprabha News   | Asianet News
Published : Oct 06, 2020, 12:49 PM IST
ಬೆಂಗಳೂರು-ಮಂಗಳೂರು ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

ಸಾರಾಂಶ

ಬೆಂಗಳೂರು ಮಂಗಳೂರು ರೈಲು ಸಂಚಾರದಲ್ಲಿ ಭಾರೀ ಬದಲಾವಣೆಯಾಗಿದೆ. ಅದೇನದು..?

ಬೆಂಗಳೂರು (ಅ.06): ಬೆಂಗಳೂರು ಹಾಗೂ ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ಕೊರೊನಾ ಸಂದರ್ಭದಲ್ಲಿ ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಅಕ್ಟೋಬರ್ 7 ರಿಂದ ಸಂಚಾರ ಸ್ಥಗಿತವಾಗಲಿದೆ. 

ವಾರದಲ್ಲಿ ನಾಲ್ಕು ದಿನ ಈ ರೈಲು ಸಂಚಾರ ನಡೆಸುತಿತ್ತು. 

ಯಲಚೇನಹಳ್ಳಿ- ಅಂಜನಾಪುರ ಮೆಟ್ರೋ ರೈಲು ಸೇವೆಗೆ ಸಿದ್ಧತೆ .

ವಿಶೇಷ ರೈಲಿನ ಜೊತೆಗೆ ವಾರದಲ್ಲಿ ಮೂರು ಬಾರಿ ಸಂಚಾರ ಮಾಡುತ್ತಿದ್ದ ಕೆಎಸ್‌ಆರ್ ರೈಲು ವೇಳಾಪಟ್ಟಿಯಲ್ಲಿಯೂ ಬದಲಾವಣೆಯಾಗಿದೆ. 

ವಾರದಲ್ಲಿ ಬುಧವಾರ ಶುಕ್ರವಾರ, ಭಾನುವಾರ ಸಂಚಾರ ನಡೆಸಲಿದೆ. ಅಕ್ಟೋಬರ್ 7 ರಿಂದ ಬದಲಾವಣೆಯಾಗಲಿದೆ.

ಕೊರೋನಾ ಸಂದರ್ಭದಲ್ಲಿ ರಾಜ್ಯದಲ್ಲಿ ರೈಲು, ರಸ್ತೆ ಸಾರಿಗೆಯಲ್ಲಿ ಭಾರೀ ಬದಲಾವಣೆಯಾಗಿತ್ತು. ಹಲವು ಸೇವೆಗಳು ಬದಲಾಗಿದ್ದವು.  ಇದೀಗ ನಿಧಾನಕ್ಕೆ ಸಾರಿಗೆ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದೆ. 

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!