ಎಸ್‌ಎಂವಿಬಿ ನಿಲ್ದಾಣದಿಂದ ಮಾ.7ರಂದು ರಾತ್ರಿ 11.55ಕ್ಕೆ ಹೊರಡಲಿರುವ ಈ ರೈಲು ಮಾ.8ರ ಮಧ್ಯಾಹ್ನ 2ಕ್ಕೆ ತಲುಪಲಿದೆ. ಕೃಷ್ಣರಾಜಪುರಂ, ಬಂಗಾರಪೇಟೆ, ಸಲೇಮ್, ಎರೊಡೆ ಜಂಕ್ಷನ್, ಕೋಯಿಮತ್ತೂರು, ಪಲಕ್ಕಾಡ್, ಶೋರಣುರ, ತಿರೂರ್, ಕೊಜಿಕ್ಕೊಡೆ ಜಂಕ್ಷನ್‌ಗಳಲ್ಲಿ ಈ ರೈಲು ನಿಲುಗಡೆ ಆಗಲಿದೆ. ಇನ್ನು, ಮಾ.8ರಂದು ಕಣ್ಣೂರಿಂದ ರಾತ್ರಿ 10.40ಕ್ಕೆ ಹೊರಡಲಿರುವ ಈ ರೈಲು ಮಾ.9ರಂದು ಮಧ್ಯಾಹ್ನ 1ಕ್ಕೆ ಎಸ್‌ಎಂವಿಟಿ ತಲುಪಲಿದೆ.
ಬೆಂಗಳೂರು(ಮಾ.05): ರಂಗಪಂಚಮಿ ಹಬ್ಬದ ಪ್ರಯುಕ್ತ ನೈಋುತ್ಯ ರೈಲ್ವೆಯು ಇಲ್ಲಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಕಣ್ಣೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ.
ಎಸ್‌ಎಂವಿಬಿ ನಿಲ್ದಾಣದಿಂದ ಮಾ.7ರಂದು ರಾತ್ರಿ 11.55ಕ್ಕೆ ಹೊರಡಲಿರುವ ಈ ರೈಲು (06501) ಮಾ.8ರ ಮಧ್ಯಾಹ್ನ 2ಕ್ಕೆ ತಲುಪಲಿದೆ. ಕೃಷ್ಣರಾಜಪುರಂ, ಬಂಗಾರಪೇಟೆ, ಸಲೇಮ್, ಎರೊಡೆ ಜಂಕ್ಷನ್, ಕೋಯಿಮತ್ತೂರು, ಪಲಕ್ಕಾಡ್, ಶೋರಣುರ, ತಿರೂರ್, ಕೊಜಿಕ್ಕೊಡೆ ಜಂಕ್ಷನ್‌ಗಳಲ್ಲಿ ಈ ರೈಲು ನಿಲುಗಡೆ ಆಗಲಿದೆ. ಇನ್ನು, ಮಾ.8ರಂದು ಕಣ್ಣೂರಿಂದ ರಾತ್ರಿ 10.40ಕ್ಕೆ ಹೊರಡಲಿರುವ ಈ ರೈಲು (06502) ಮಾ.9ರಂದು ಮಧ್ಯಾಹ್ನ 1ಕ್ಕೆ ಎಸ್‌ಎಂವಿಟಿ ತಲುಪಲಿದೆ.
ಭಾರತೀಯ ರೈಲ್ವೇಯ ತತ್ಕಾಲ್ ಟಿಕೆಟ್ ಬುಕಿಂಗ್ ಸೇವೆ ಸ್ಥಗಿತ, ಪ್ರಯಾಣಿಕರ ಆಕ್ರೋಶ!
ಸಂಚಾರ ರದ್ದು:
ಗತಿಶಕ್ತಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಹಿನ್ನೆಲೆಯಲ್ಲಿ ಮಾ.6ರಿಂದ ಮಾ.11ರವರೆಗೆ ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ರೈಲಿನ (01773/01774) ಬೈಯಪ್ಪನಹಳ್ಳಿ ಹಾಗೂ ಕೆಎಸ್‌ಆರ್ ಬೆಂಗಳೂರು ನಡುವಿನ ಸಂಚಾರ ರದ್ದಾಗಿದೆ. ಅದರಂತೆ ದೇವನಹಳ್ಳಿ-ಬೆಂಗಳೂರು ದಂಡು-ದೇವನಹಳ್ಳಿ ಮೆಮು ರೈಲಿನ (06537/06538) ಯೆಲಹಂಕ- ಬೆಂಗಳೂರು ದಂಡು ನಡುವಿನ ಸಂಚಾರ ರದ್ದಾಗಿದೆ.
ಇನ್ನು ಮೈಸೂರು-ಎಸ್‌ಎಂವಿಬಿ ಸ್ಪೆಷಲ್ ರೈಲಿನ (06269) ಸಂಚಾರ ಮಾರ್ಗವನ್ನು ಮಾ.6, 8 ಹಾಗೂ 10ರಂದು ಬದಲಿಸಲಾಗಿದೆ. ಈ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ ಮೂಲಕ ಎಸ್‌ಎಂವಿಬಿ ನಿಲ್ದಾಣ ತಲುಪಲಿದ್ದು, ಬೆಂಗಳೂರು ದಂಡು ನಿಲ್ದಾಣದ ನಿಲುಗಡೆ ರದ್ದಾಗಿದೆ.