ಪ್ರಯಾಣಿಕರ ಗಮನಕ್ಕೆ: ಬೆಂಗಳೂರು- ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆ ರದ್ದು

Published : May 28, 2024, 07:48 AM IST
ಪ್ರಯಾಣಿಕರ ಗಮನಕ್ಕೆ:  ಬೆಂಗಳೂರು- ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೇವೆ ರದ್ದು

ಸಾರಾಂಶ

ಎಸ್‌ಎಂವಿಟಿ ಬೆಂಗಳೂರಿನಿಂದ ಮೇ 29 ರಿಂದ ಜೂನ್ 27 ರವರೆಗೆ ಸಂಚರಿಸುವ ರೈಲು (06262) ಮತ್ತು ಕಲಬುರಗಿಯಿಂದ ಮೇ 30 ರಿಂದ ಜೂನ್ 28ರವರೆಗೆ ಸಂಚರಿಸುವ (06262) ರೈಲನ್ನು ರದ್ದು ಪಡಿಸಲಾಗಿದೆ.  

ಬೆಂಗಳೂರು(ಮೇ.28):  ಸೆಂಟ್ರಲ್‌ ರೈಲ್ವೆ ವ್ಯಾಪ್ತಿಯಲ್ಲಿನ ಕಾರ್ಯಾಚರಣೆ ನಿರ್ಬಂಧಗಳ ಕಾರಣದಿಂದಾಗಿ ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ 14 ಟ್ರಿಪ್‌ ಸಂಚರಿಸಬೇಕಿದ್ದ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‌ಎಂವಿಟಿ ಬೆಂಗಳೂರಿನಿಂದ ಮೇ 29 ರಿಂದ ಜೂನ್ 27 ರವರೆಗೆ ಸಂಚರಿಸುವ ರೈಲು (06262) ಮತ್ತು ಕಲಬುರಗಿಯಿಂದ ಮೇ 30 ರಿಂದ ಜೂನ್ 28ರವರೆಗೆ ಸಂಚರಿಸುವ (06262) ರೈಲನ್ನು ರದ್ದು ಪಡಿಸಲಾಗಿದೆ

ಬೆಂಗಳೂರು: ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಆಗಸ್ಟ್ ಒಳಗೆ ಮೆಟ್ರೋ ಸಂಚಾರ ಶುರು?

ಈ ಹಿಂದೆ ನೈಋತ್ಯ ರೈಲ್ವೆಯು, ಬೇಸಿಗೆ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಗರಗಳ ನಡುವೆ ವಾರಕ್ಕೆ ಮೂರು ಸಲ (ಸೋಮವಾರ, ಬುಧವಾರ ಮತ್ತು ಗುರುವಾರ) ಬೇಸಿಗೆ ವಿಶೇಷ ರೈಲು ಓಡಿಸುವುದಾಗಿ ತಿಳಿಸಿತ್ತು.

PREV
Read more Articles on
click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ