ಬೆಂಗಳೂರು - ಹೊನ್ನಾವರ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರ ಪರದಾಟ

By Sathish Kumar KH  |  First Published Jul 15, 2024, 12:37 PM IST

ಬೆಂಗಳೂರು - ಹೊನ್ನಾವರ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಗುಡ್ಡ ಕುಸಿತವಾಗಿದ್ದು, ಭಾರಿ ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.


ಉತ್ತರ ಕನ್ನಡ (ಜು.15): ಬೆಂಗಳೂರಿನಿಂದ ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಗುಡ್ಡ ಕುಸಿತವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಇನ್ನು ದಾರಿಯಲ್ಲಿ ಬಿದ್ದ ಮಣ್ಣು ಹಾಗೂ ಕಲ್ಲು ಬಂಡೆಗಳನ್ನು ತೆರವುಗೊಳಿಸಿಲ್ಲದ ಕಾರಣ ವಾಹನ ಸವಾರರು ಮಳೆಯಲ್ಲಿ ನಿಂತುಕೊಂಡು ಪರದಾಡುವಂತಾಗಿದೆ.

ಹೌದು, ಹೊನ್ನಾವರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಂಬೆಳಿಗ್ಗೆ ಬೆಂಗಳೂರು - ಹೊನ್ನಾವರ ಹೆದ್ದಾರಿಯ ಬಳಿ ಗುಡ್ಡ ಕುಸಿತವಾಗಿದೆ. ಹೊನ್ನಾವರ ತಾಲೂಕಿನ ಖರ್ವಾ ಕ್ರಾಸ್ ಬಳಿ ಗುಡ್ಡ ಕುಸಿತವಾಗಿದ್ದು, ವಾಹನ ಸಂಚಾರ ಮಾಡಲಾಗದೇ ಹೆದ್ದಾರಿ ಸಂಪೂರ್ಣವಾಗಿ ಬ್ಲಾಕ್ ಆಗಿದೆ.  ಹೆದ್ದಾರಿಯ ಪಕ್ಕದಲ್ಲಿದ್ದ ಗುಡ್ಡವು ಮಣ್ಣಿನ‌ ರಾಶಿಯೊಂದಿಗೆ ಉರುಳಿ, ರಸ್ತೆಯ ಮೇಲೆ ಬಿದ್ದಿದೆ. ಮಣ್ಣಿನೊಂದಿಗೆ ದೊಡ್ಡ ಕಲ್ಲು ಬಂಡೆಗಳೂ ಕೂಡ ರಸ್ತೆಯ ಮೇಲೆ ಬಿದ್ದಿದ್ದು, ಇದನ್ನು ತೆರವು ಮಾಡಲಾಗದೇ ಹಾಗೂ ಜನರು ಪರದಾಡುತ್ತಿದ್ದಾನೆ. ಇನ್ನು ಕೆಲವರು ಮಣ್ಣಿನ ಮೇಲೆಯೇ ವಾಹನ ಸವಾರಿ ಮಾಡಿಕೊಂಡು ಹೋಗಿದ್ದಾರೆ.

Latest Videos

undefined

ಬೆಂಗಳೂರು: ಆಂಬುಲೆನ್ಸ್‌ಗೆ ಸಿಗ್ನಲ್ ಜಂಪ್ ಮಾಡಿ ದಾರಿ ಬಿಟ್ಟಿದ್ರಾ? ನಿಮ್ಮ ವಾಹನಗಳ ದಂಡ ಹಾಕಲ್ಲ ಬಿಡಿ

ಇನ್ನು ಜಿಲ್ಲಾಡಳಿತದಿಂದ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲು ತೀವ್ರ ಕಸರತ್ತು ಮಾಡಲಾಗುತ್ತಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಒಂದ ವಾಹನ ಸಂಚಾರ ಮಾಡುವಷ್ಟು ರಸ್ತೆಯನ್ನು ತೆರವು ಮಾಡಲಾಗಿದೆ. ಇದರಿಂದ ಚಿಕ್ಕ ವಾಹನಗಳು, ಬೈಕ್‌ಗಳು ಹಾಗೂ ಆಟೋಗಳನ್ನು ಮೊದಲು ಸಂಚಾರಕ್ಕೆ ಬಿಡಲಾಗಿದೆ. ಇದಾದ ನಂತರ ಪ್ರಯಾಣಿಕರ ಬಸ್‌ಗಳಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಟ್ರಕ್‌ಗಳು, ಮಿನಿ ಲಾರಿ ಸೇರಿದಂತೆ ನೂರಾರು ವಾಹನಗಳು ರಸ್ತೆ ದಾಟಲು ನಿಂತುಕೊಂಡಿದ್ದು ಗಂಟೆಗಟ್ಟಲೇ ನಿಂತಲ್ಲೇ ನಿಂತು ಕಾಯುತ್ತಿದ್ದಾನೆ.

ಹೊನ್ನಾವರ: ಹೆಲ್ಮೆಟ್‌ ಧರಿಸದ್ದಕ್ಕೆ ಟಿಪ್ಪರ್‌ಗೆ ಚಾಲಕನಿಗೆ 500 ದಂಡ ಹಾಕಿದ ಪೊಲೀಸರು..!

ಮಣ್ಣು ತೆರವು ಮಾಡಿದರೂ ಮತ್ತಷ್ಟು ಗುಡ್ಡ ಕುಸಿತ ಭೀತಿ: ಇನ್ನು ರಸ್ತೆಯ ಬದಿಯ ಮಣ್ಣಿನ ಗುಡ್ಡ ಕುಸಿತವಾದ ನಂತರ ಅದನ್ನು ತೆರವುಗೊಳಿಸಿದರೂ ಮತ್ತಷ್ಟು ಗುಡ್ಡ ಕುಸಿತವಾಗುವ ಸಾಧ್ಯತೆಯಿದೆ. ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದು, ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಮಣ್ಣು ತೆರವು ಕಾರ್ಯಾಚರಣೆ ಮಾಡಲೂ ಸಮಸ್ಯೆ ಉಂಟಾಗಿದೆ. ಇನ್ನು ಮಣ್ಣನ್ನು ತೆರವು ಮಾಡಿದರೆ ಪುನಃ ಮತ್ತಷ್ಟು ಗುಡ್ಡ ಕುಸಿತ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಟ್ರಾಫಿಕ್ ಕ್ಲಿಯರ್ ಮಾಡುವುದಕ್ಕೆ ಜಿಲ್ಲಾಡಳಿತ ಹೆಣಗಾಡುತ್ತಿದೆ.

click me!