ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರಿ ಸಮಸ್ಯೆಯಾಗಿದೆ. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ಕೆರೆಯ ನೀರು ಕಟ್ಟಡಗೆ ನುಗ್ಗಿದೆ.
ಬೆಂಗಳೂರು (ಅ.07): ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರಿ ಸಮಸ್ಯೆಯಾಗಿದೆ. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ಕೆರೆಯ ನೀರು ಕಟ್ಟಡಗೆ ನುಗ್ಗಿದೆ. ಇದರಿಂದ 4 ಅಡಿ ನೀರು ನಿಂತಿದೆ. ನೀರಿನಲ್ಲಿ 150 ಕಾರು, 600 ಬೈಕ್‌ಗಳು ಮುಳುಗಿವೆ. ಅಪಾರ್ಟ್‌ಮೆಂಟ್‌ನಲ್ಲಿ ಈಗಲೂ 4 ಅಡಿಯಷ್ಟು ನೀರು ನಿಂತಿದ್ದು, ಹೊರಹಾಕಲು ಹರಸಾಹಸ ನಡೆಯುತ್ತಿದೆ. ಟ್ರ್ಯಾಕ್ಟರ್ ಮೂಲಕ ಜನರಿಗೆ ಅವಶ್ಯ ವಸ್ತು ಪೂರೈಸಲಾಗುತ್ತಿದೆ. ಈ ನಡುವೆ, ಬಿನ್ನಿಪೇಟೆ ಪಾರ್ಕ್ ವ್ಯೂವ್ ಅಪಾರ್ಟ್‌ಮೆಂಟ್ ನ 7 ಅಡಿ ಎತ್ತರದ ಸುಮಾರು ಹತ್ತು ಅಡಿ ಉದ್ದದ ಕಾಂಪೌಂಡ್ ಕುಸಿದಿದೆ.
ಇನ್ನು ಇಟಿಎ ಮಾಲ್ ಬಳಿ ಕಾಂಪೌಂಡ್ ಕುಸಿದೆ. ದಕ್ಷಿಣ ವಲಯ ವಿಜಯನಗರದ ಮನುವನದ ಬಳಿ ರಾಜಕಾಲು ವೆಯ ಬಳಿಯಿದ್ದ ಸ್ಯಾನಿಟರಿಲೈನ್‌ನಲ್ಲಿ ನೀರು ತುಂಬಿ ಹರಿದಿದ್ದು, ಸುಮಾರು 10 ಮನೆಗಳಿಗೆ ನುಗ್ಗಿದೆ. ಮಲ್ಲೇಶ್ವರ 17ನೇ ಕ್ರಾಸ್ ಸೇರಿದಂತೆ ವಿವಿಧ ಕಡೆ 20 ಮರಗಳು ಹಾಗೂ 50 ಮರದ ರೆಂಬೆ-ಕೊಂಬೆಗಳು ಧರೆಗುರುಳಿವೆ. ಶನಿವಾರ ಮಧ್ಯಾಹ್ನದಿಂದ ಆರಂಭಗೊಂಡ ಮಳೆ ರಾತ್ರಿ ವರೆಗೆ ಧಾರಾಕಾರವಾಗಿಸುರಿದಿತ್ತು. ಗುಡುಗು, ಮಿ೦ಚು ಸಹಿತ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಜನಜೀವನ ತೊಂದರೆಗೆ ಒಳಗಾಯಿತು. ಮಳೆಯ ಆರ್ಭಟದಿಂದಾಗಿ ಬಿನ್ನಿಪೇಟೆ ಪಾರ್ಕ್ ನ್ಯೂವ್ ಅಪಾರ್ಟ್‌ಮೆಂಟ್‌ನ 1 ಅಡಿ ಎತ್ತರದ ಸುಮಾರು ಹತ್ತು ಅಡಿ ಉದ್ದದ ಕಾಂಪೌಂಡ್ ಕುಸಿದಿದೆ.
ಸಿದ್ದರಾಮಯ್ಯ ಪತ್ನಿಯನ್ನು ನಾವು ಹೊರಗೆ ತಂದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಇದರಿಂದಾಗಿ ಅಪಾರ್ಟ್‌ಮೆಂಟ್ ಬಳಿ ನಿಂತಿದ್ದ ಹಲ ವುಕಾರು, 20ಕ್ಕೂ ಹೆಚ್ಚು ಬೈಕ್‌ಗಳುಜಖಂಗೊಂಡಿವೆ. ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕಾಗಮಿಸಿ ಗೋಡೆಯ ಅವಶೇಷಗಳನ್ನು ತೆರವು ಗೊಳಿಸಿದ್ದಾರೆ. ಮತ್ತೊಂದೆಡೆ ಇಟಿಎ ಮಾಲ್ ಬಳಿ ಕುಸಿದಿರುವ ಕಾಂಪೌಂಡ್ ಗೋಡೆಯ ಅವಶೇಷಗಳನ್ನು ತೆರವು ಗೊಳಿಸಿ ತೊಂದರೆಗೆ ಸಿಲುಕಿದ್ದ ನಿವಾಸಿಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಯಲಹಂಕ ಬಳಿಯ ಕೇಂದ್ರೀಯ ವಿಹಾರ ಅಪಾ ರ್ಟ್‌ಮೆಂಟ್ ಬಳಿ ಕಾಂಪೌಂಡ್ ಕುಸಿದು ಬಿದ್ದಿದೆ. ಯಲಹಂಕ ಕೆರೆ ಹಾಗೂ ಅಪಾರ್ಟ್‌ಮೆಂಟ್ ಮಧ್ಯೆ ಇದ್ದಖಾಲಿಜಾಗಸಂಪೂರ್ಣಜಲಾವೃತಗೊಂಡಿದ್ದು, ಅಪಾರ್ಟ್‌ಮೆಂಟ್ ಮನೆಗಳಿಗೂ ನೀರು ನುಗ್ಗಿದೆ.
ಹಲವು ಕಡೆ ಮನೆಗಳಿಗೆ ನೀರು: ದಕ್ಷಿಣ ವಲಯ ವಿಜಯನಗರದ ಮನುವನದ ಬಳಿ ರಾಜಕಾಲುವೆಯ ಬಳಿಯಿದ್ದ ಸ್ಯಾನಿಟರಿ ಲೈನ್‌ನಲ್ಲಿ ನೀರು ಓವರ್‌ಫ್ಲೋ ಆಗಿದ್ದು, ಸುಮಾರು 10 ಮನೆಗಳಿಗೆ ನುಗ್ಗಿದೆ. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ನೀರನ್ನು ಹೊರಹಾಕುವ ಕಾರ್ಯ ಮಾಡಿದ್ದಾರೆ. ಭಾರಿ ಪ್ರಮಾಣ ಕೆಸರು, ಕೊಳಚೆ ರಸ್ತೆಯಲ್ಲಿ ನಿಂತುಕೊಂಡಿದ್ದರಿಂದ ದುರ್ವಾ ಸನೆ ಬೀರುತ್ತಿತ್ತು. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾಯಿತು.
ಪ್ರಶ್ನೆ ಕೇಳಿದರೆ ‘ಓ ಮೈ ಗಾಡ್’ ಎಂದು ಹೆದರುವುದಕ್ಕೆ ನಾನು ಮೋದಿಯಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಮರಗಳು ಧರೆಗೆ, ವಿದ್ಯುತ್ ಸಮಸ್ಯೆ: ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆಲವೆಡೆ ಸಮಸ್ಯೆಯಾಗಿದ್ದು, ಮಲ್ಲೇಶ್ವರ 17ನೇ ಕ್ರಾಸ್ ಸೇರಿ ವಿವಿಧ ಕಡೆ 20 ಮರಗಳು ಹಾಗೂ 50 ಮರದ ರೆಂಬೆ-ಕೊಂಬೆಗಳು ಧರೆಗುರುಳಿವೆ. ಸದ್ಯ ಪಾಲಿಕೆಯ ನಿಯಂತ್ರಣ ಕೊಠಡಿ ತಂಡಗಳು ಹಾಗೂ ಮರ ತೆರವು ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ತೆರವು ಕಾರ್ಯಾಚರಣೆ ನಡೆಸುತ್ತಿವೆ. ಬಸವೇಶ್ವರನಗರ, ಪುಟ್ಟೇ ನಹಳ್ಳಿ, ಯಲಹಂಕ ಸೇರಿ ವಿವಿಧೆಡೆ ವಿದ್ಯುತ್ ಕಂಬ ಧರೆಗುರುಳಿ, ವಿದ್ಯುತ್ ತಂತಿ ಹರಿದು ಹೋಗಿವೆ. ಹಾಗಾಗಿ ಇಡೀ ರಾತ್ರಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಬೆಸ್ಕಾಂ ಸಿಬ್ಬಂದಿ ಭಾನುವಾರ ಬೆಳಗ್ಗೆ ವಿದ್ಯುತ್ ಸಮಸ್ಯೆ ಪರಿಹಾರ ಕಾರ್ಯ ಮಾಡಿದ್ದಾರೆ.