ಬೆಂಗಳೂರು - ಹಂಪಿ ಕೆಎಸ್ಸಾರ್ಟಿಸಿ ಪ್ಯಾಕೇಜ್‌ ಟೂರ್‌ : ದರವೆಷ್ಟು..?

By Kannadaprabha NewsFirst Published Sep 29, 2021, 9:21 AM IST
Highlights
  • ಎಸ್‌ಆರ್‌ಟಿಸಿ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ‘ಬೆಂಗಳೂರು-ಹಂಪಿ-ತುಗಭದ್ರ ಡ್ಯಾಮ್‌’ ಪ್ಯಾಕೇಜ್‌
  • ಹವಾನಿಯಂತ್ರಣ ರಹಿತ ಸ್ಲೀಪರ್‌ ವಾಹನದೊಂದಿಗೆ ಅಕ್ಟೋಬರ್‌ 1ರಿಂದ ಪ್ಯಾಕೇಜ್‌ ಆರಂಭ

 ಬೆಂಗಳೂರು (ಸೆ.29):  ಕೆಎಸ್‌ಆರ್‌ಟಿಸಿ (KSRTC)ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ‘ಬೆಂಗಳೂರು   -ಹಂಪಿ  -ತುಗಭದ್ರ ಡ್ಯಾಮ್‌ (Bengaluru-Hampi- Tungabhdra) ಪ್ಯಾಕೇಜ್‌ನ್ನು ಪ್ರಕಟಿಸಿದೆ.

ಹವಾನಿಯಂತ್ರಣ ರಹಿತ ಸ್ಲೀಪರ್‌ ವಾಹನದೊಂದಿಗೆ ಅಕ್ಟೋಬರ್‌ 1ರಿಂದ ಪ್ಯಾಕೇಜ್‌ ಆರಂಭವಾಗುತ್ತಿದ್ದು, ಇದರಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟದ ವ್ಯವಸ್ಥೆ ಒಳಗೊಂಡಿರಲಿದೆ. ಜೊತೆಗೆ, ಹಂಪಿ ವೀಕ್ಷಣೆಯ ಪ್ರವೇಶ ಶುಲ್ಕವನ್ನು ನಿಗಮದಿಂದ ಭರಿಸಲಾಗುತ್ತಿದೆ.

ಕಾಗದ ರಹಿತ ವ್ಯವಸ್ಥೆಗೆ ಸಾರಿಗೆ ಇಲಾಖೆ ಸಿದ್ಧತೆ: ಸಚಿವ ರಾಮುಲು

ಈ ಪ್ಯಾಕೇಜ್‌ನಲ್ಲಿ ವಯಸ್ಕರಿಗೆ 2,500 ಮತ್ತು ಮಕ್ಕಳಿಗೆ 2,300 ರು.ಗಳನ್ನು ನಿಗದಿಪಡಿಸಿಸಲಾಗಿದ್ದು, ವಿಜಯ ವಿಠ್ಠಲ ದೇವಸ್ಥಾನ, ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಸಾಸಿವೆಕಾಳು, ಕಡಲೇಕಾಳು ಗಣೇಶ, ಲಕ್ಷ್ಮೀ ನರಸಿಂಹ, ಬಡವಲಿಂಗ, ಆನೆಗಳ ಆಶ್ವಶಾಲೆ, ಕಲ್ಯಾಣಿ, ಕಮಲಮಹಲ್‌, ಮಹಾನವಮಿ ದಿಬ್ಬ, ರಾಣಿಯರ ಈಜುಕೊಳವನ್ನು ನೋಡಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಶಿರಡಿಗೆ ಅಂಬಾರಿ ಡ್ರೀಮ್‌ ಕ್ಲಾಸ್‌ ಪುನರಾರಂಭ:

ಕೊರೋನಾದಿಂದ (Coronavirus) ಸ್ಥಗಿತಗೊಂಡಿದ್ದ ಬೆಂಗಳೂರು-ಶಿರಡಿ (Shiradi) ಮಾರ್ಗದಲ್ಲಿ ಅಂಬಾರಿ ಡ್ರೀಮ್‌ ಕ್ಲಾಸ್‌ (ಮಲ್ಟಿಆಕ್ಸ್‌ಲ್‌ ಸ್ಲೀಪರ್‌) ಸೇವೆಯನ್ನು ಕೆಎಸ್‌ಆರ್‌ಟಿಸಿ ಪುನರಾರಂಭಿಸಿದೆ. ಅಕ್ಟೋಬರ್‌ 6 ರಿಂದ ಶಿರಡಿ ಪ್ರಯಾಣಕ್ಕೆ 1,600 ರು.ಗಳನ್ನು ನಿಗದಿ ಪಡಿಸಿದ್ದು, ಪ್ರಯಾಣಿಕರು ಈ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ದಸರಾ ದೀಪಾವಳಿಗೆ ಹೆಚ್ಚುವರಿ ಬಸ್ 

ದಸರಾ ಹಾಗೂ ದೀಪಾವಳಿ ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ (KSRTC) ಬೆಂಗಳೂರಿನಿಂದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಗೆ ಒಂದು ಸಾವಿರ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲಿದೆ.

ಸಾರಿಗೆ ನೌಕರರಿಗೆ ಗುಡ್‌ನ್ಯೂಸ್: ಎಲ್ಲಾ ಕೇಸ್‌ಗಳನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧಾರ

ದಸರಾ ಪ್ರಯುಕ್ತ ಅ.13ರಿಂದ 21ರ ವರೆಗೆ ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ಅ.29ರಿಂದ ನ.11ರ ವರೆಗೆ ಒಂದು ಸಾವಿರ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುವುದು. ರಾಜ್ಯದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌ ಮೊದಲಾದ ಸ್ಥಳಗಳಿಗೆ ಹೆಚ್ಚುವರಿ ಬಸ್‌ ಸಂಚರಿಸಲಿವೆ.

ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್‌, ತಿರುವನಂತಪುರಂ, ಕೊಟ್ಟಾಯಂ, ಚೆನ್ನೈ, ಕೊಯಮತ್ತೂರು, ಪೂನಾ, ಪಣಜಿ ಮೊದಲಾದ ಸ್ಥಳಗಳಿಗೆ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲಾಗುವುದು. ಹೆಚ್ಚುವರಿ ಬಸ್‌ಗಳ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. ನಿಗಮದ ಅಧಿಕೃತ ಜಾಲತಾಣ ಮತ್ತು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿರುವ ಬುಕಿಂಗ್‌ ಕೌಂಟರ್‌ಗಳಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಬಹುದು. ಪ್ರಯಾಣಿಕರು ಈ ಹೆಚ್ಚುವರಿ ಬಸ್‌ಗಳ ಉಪಯೋಗ ಪಡೆದುಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಕೋರಿದೆ.

click me!