ಗೋವಾದಿಂದ ತಂದಿದ್ದ 16 ಸಾವಿರ ಮದ್ಯದ ಬಾಟಲಿ ವಶಕ್ಕೆ ಪಡೆದ ಅಬಕಾರಿ ಇಲಾಖೆ!

By Sathish Kumar KH  |  First Published Jan 23, 2024, 5:06 PM IST

ಗೋವಾದಿಂದ ಬೆಂಗಳೂರಿಗೆ ಅಕ್ರಮವಾಗಿ ಲಾರಿಯಲ್ಲಿ ತರಲಾಗಿದ್ದ 16 ಸಾವಿರ ಮದ್ಯದ ಬಾಟಲಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.


ಬೆಂಗಳೂರು  (ಜ.23): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮದ್ಯದ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಇದರಿಂದ ಅಕ್ರಮ ಮದ್ಯ ಸಾಗಣೆ ಪ್ರಮಾಣ ಹೆಚ್ಚಾಗುತ್ತಿದೆ. ಅದೇ ರೀತಿ ಗೋವಾದಿಂದ ಅಕ್ರಮವಾಗಿ 16 ಸಾವಿರ ಮದ್ಯದ ಬಾಟಲ್‌ಗಳನ್ನು ಬೆಂಗಳೂರಿಗೆ ತಂದಿದ್ದ ಲಾರಿಯ ಮೇಲೆ ದಾಳಿ ಮಾಡಿದ ಅಬಕಾರಿ ಪೊಲೀಸರು ಎಲ್ಲ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಿದ್ದಾರೆ.

ಕರ್ನಾಟಕ ಅಬಕಾರಿ ಇಲಾಖೆ ಅಧಿಕಾರಿಗಳ ವಿಶೇಷ ಕಾರ್ಯಾಚರಣೆಯ ಮೂಲಕ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮದ್ಯದ ಲಾರಿಯನ್ನು ಸೀಜ್‌ ಮಾಡಿದ್ದಾರೆ. ಗೋವಾದಿಂದ ಬೆಂಗಳೂರಿಗೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ತರಲಾಗಿತ್ತು. ಸುಮಾರು 360 ಬಾಕ್ಸ್ ಮದ್ಯ ಸೀಜ್ ಮಾಡಲಾಗಿದೆ. ಇನ್ನು ಅಕ್ರಮ ದಂಧೆಕೋರರು ಗೀವಾದಿಂದ ಸರಕನ್ನು ಹೊತ್ತು ತಂದಿದ್ದ ಟ್ರಕ್‌ನ ಮೇಲ್ಬಾಗದಲ್ಲಿ ಮದ್ಯದ ಬಾಟಲಿಗಳನ್ನು ತುಂಬಿಕೊಂಡು ಬಂದಿದ್ದರು. ಇನ್ನು ಲಾರಿಯನ್ನು ಗೋವಾದಿಂದ ಕರ್ನಾಟಕಕ್ಕೆ ಬರುವ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ಮಾಡಿದರೂ ಸಿಗದ ರೀತಿಯಲ್ಲಿ ಮದ್ಯವನ್ನು ಲೋಡ್‌ ಮಾಡಿ, ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದರು.

Tap to resize

Latest Videos

ಬಿಯರ್ ರೇಟ್ ಮತ್ತೆ ಹೆಚ್ಚಿಸಲಿದೆ ಸರ್ಕಾರ: ವರ್ಷಕ್ಕೆ ಎಷ್ಟುಬಾರಿ ಬೆಲೆ ಏರಿಸ್ತೀರಾ?

ಆದರೆ, ಅಕ್ರಮವಾಗಿ ಮದ್ಯ ಸಾಗಣೆ ಮಾಡಲಾಗುತ್ತಿದೆ ಎಂಬ ನಿಖರ ಸುಳಿವು ಪಡೆದ ಕರ್ನಾಟಕ ಅಬಕಾರಿ ಇಲಾಖೆ ಅಧಿಕಾರಿಗಳು ಗೋವಾದಿಂದ ಬಂದಿದ್ದ ಲಾರಿಯ ಮೇಲೆ ದಾಳಿ ಮಾಡಿದ್ದಾರೆ. ಲಾರಿಯನ್ನು ಪರಿಶೀಲನೆ ಮಾಡಿದಾದ ಲಾರಿಗೆ ಕಬ್ಬಿಣದಿಂದ ಮಾಡಿಸಲಾದ ಕ್ಯಾಬಿನ್‌ನ ಮೇಲೆ ಮದ್ಯದ ಬಾಟಲಿಗಳನ್ನು ತುಂಬಿರುವುದು ಬೆಳಕಿಗೆ ಬಂದಿದೆ. ಅಬಕಾರಿ ಇಲಾಖೆಯಿಂದ ಸುಮಾರು 16 ಸಾವಿರ ಬಾಟಲ್ ಸೀಜ್ ಮಾಡಲಾಗಿದೆ. ಸುಮಾರು 50 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

ಅಬಕಾರಿ ಡಿವೈಎಸ್ಪಿ ವೀರಣ್ಣ ಬಾಗೇವಾಡಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಲಾಗಿದ್ದು, ಅದರಲ್ಲಿಯೂ ಕರ್ನಾಟಕದಲ್ಲಿ ಮಾರಾಟಕ್ಕೆ ಚಾಲ್ತಿಯಲ್ಲಿ ಇಲ್ಲದ ಬ್ರಾಂಡ್‌ನ ಬಾಟಲಿಗಳನ್ನು ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದ ಲಾರಿ ಹಾಗೂ ಎಣ್ಣೆ ಬಾಟಲಿಗಳ ಸಮೇತವಾಗಿ ಸಾಗಣೆದಾರರಾದ ಅಮಿತ್ ಹಾಗೂ ಮರಮೇಶ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ದೂರವಾಣಿ ನಗರದಲ್ಲಿ ಮದ್ಯ ವಶಕ್ಕೆ ಪಡೆಯಲಾಗಿದೆ.

ಮೇಲುಕೋಟೆ ಶಿಕ್ಷಕಿಯನ್ನು ಕೊಲೆಗೈದು ಮಣ್ಣಲ್ಲಿ ಮುಚ್ಚಿ ಹೋದನಾ ಮಂಡ್ಯ ಹೈದ?

ಇನ್ನು ಅಕ್ರಮ ಮದ್ಯ ಸಾಗಣೆದಾರರನ್ನು ಅಬಕಾರಿ ಇಲಾಖೆ ಸಿಬ್ಬಂದಿ ವಿಚಾರಣೆ ಮಾಡಿದಾಗ ತಾವು ಗೋವಾಕ್ಕೆ ಹೋಗಿಲ್ಲ. ನಾವು ಬೆಳಗಾವಿಯಲ್ಲಿ ಸಂಗ್ರಹಿಸಿದ್ದ ಮದ್ಯದ ಬಾಟಲಿಗಳನ್ನು ಟ್ರಕ್‌ನಲ್ಲಿ ಬೆಂಗಳೂರಿಗೆ ತಂದಿದ್ದೇವೆ. ಇದರಲ್ಲಿ ನಮ್ಮ ತಪ್ಪಿಲ್ಲ ಎಂದು ಹೇಳಿದ್ದಾರೆ. ಇನ್ನು ಅಕ್ರಮ ಸಾಗಾಟದ ಹಿಂದೆ ಇರುವ ಕಿಂಗ್ ಪಿನ್ ಗಳ ಬಂಧಿಸುವುದಾಗಿ ಅಬಕಾರಿ ಇಲಾಖೆ ಜಂಟಿ ಆಯುಕ್ತ ಎ.ಎಲ್.ನಾಗೇಶ್ ಅವರು ಹೇಳಿದ್ದಾರೆ.

click me!