ಬೆಂಗಳೂರು ವಿದ್ಯಾರ್ಥಿನಿ ಕೊಲೆ ಪ್ರಕರಣ, ಪೊಲೀಸರಿಗೆ ಗುರುತು ಸಿಗದಂತೆ ತಿರುಪತಿಯಲ್ಲಿ ಮುಡಿಕೊಟ್ಟ ಆರೋಪಿ!

Published : Nov 28, 2025, 12:53 PM IST
 Devishree murder case

ಸಾರಾಂಶ

ಬೆಂಗಳೂರಿನಲ್ಲಿ ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀಯನ್ನು ಆಕೆಯ ಸ್ನೇಹಿತ ಪ್ರೇಮ್ ವರ್ಧನ್ ಅಸೂಯೆಯಿಂದ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ, ಆರೋಪಿಯು ಪೊಲೀಸರಿಂದ ತಪ್ಪಿಸಿಕೊಳ್ಳಲು ತಿರುಪತಿಗೆ ಹೋಗಿ ಮುಡಿ ಕೊಟ್ಟಿದ್ದನು, ಆದರೆ ಪೊಲೀಸರು ಆತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಬೆಂಗಳೂರಿನ ಮಾದನಾಯಕನಹಳ್ಳಿ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ಆಂಧ್ರ ಮೂಲದ ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀಯನ್ನು ಆಕೆಯ ಸ್ನೇಹಿತ ಪ್ರೇಮ್ ವರ್ಧನ್ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಇದೀಗ ಪ್ರಕರಣ ಸಂಬಂಧ ಆರೋಪಿ ಪ್ರೇಮ್ ವರ್ಧನ್ ಕೊಲೆ ಮಾಡಿ ತಿರುಪತಿಗೆ ಹೋಗಿ ಮುಡಿಕೊಟ್ಟಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ದೇವಿಶ್ರೀಯನ್ನು ಸ್ನೇಹಿತೆ ರೂಂಗೆ ಕರೆದೊಯ್ದು ಪ್ರೇಮ್ ವರ್ಧನ್ ಕೊಲೆ ಮಾಡಿದ್ದ. ಪ್ರಕರಣ ಸಂಬಂಧ ಈಗಾಗಲೇ ಆರೋಪಿ ಪ್ರೇಮ್ ವರ್ಧನ್ ಬಂಧನವಾಗಿದೆ. ದೇವಿಶ್ರೀ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಾಂಗ ಮಾಡುತ್ತಿದ್ದಳು. ಆಂಧ್ರ ಮೂಲದ ಯವತಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದಳು. ಕೊಲೆಗೂ ಮುನ್ನ ಪ್ರೇಮ್ ವರ್ಧನ ಜೊತೆ ಯುವತಿ ಸ್ನೇಹಿತೆ ರೂಂಗೆ ತೆರಳಿದ್ದಳು. ದೇವಿಶ್ರೀಗೆ ಇನ್ನಿತರರೊಂದಿಗೆ ಇದ್ದ ಸ್ನೇಹದ ಅಸೂಯೆಯಿಂದ ಈ ಕೊಲೆ ಮಾಡಲಾಗಿತ್ತು. ಕೊಲೆ ಮಾಡಿ ಮೆಟ್ರೋ‌ ಮೂಲಕ ಮೆಜೆಸ್ಟಿಕ್ ಬಂದು ಆರೋಪಿ ತಿರುಪತಿ ಹೋಗಿದ್ದ. ಅಲ್ಲಿ ಮುಡಿಕೊಟ್ಟು ಪೊಲೀಸರಿಂದ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.

ಘಟನೆ ಹಿನ್ನೆಲೆ

ಆಂಧ್ರ ಮೂಲದ ದೇವಿಶ್ರೀ (21) ಕೊಲೆಯಾದ ದುರ್ದೈವಿ ವಿದ್ಯಾರ್ಥಿನಿ. ಆಂಧ್ರ ಪ್ರದೇಶದವರಾದ ರೆಡ್ಡಪ್ಪ ಮತ್ತು ಜಗದಾಂಬ ದಂಪತಿಯ ಕೊನೆಯ ಮಗಳು ದೇ‍ವಿಶ್ರೀಯನ್ನು ನಗರದ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ದರು. ಭಾನುವಾರ ಬೆಳಿಗ್ಗೆ ಅವರ ತಂದೆ ದೂರವಾಣಿಯಲ್ಲಿ ಮಾತನಾಡಿದ್ದರು. ಆಮೇಲೆ ಆಕೆ ಕರೆ ಮಾಡಿದ್ರೂ ಸ್ವೀಕರಿಸಿಲ್ಲ. ಬಳಿಕ ಅನುಮಾನಗೊಂಡ ಅವರು ಆಕೆಯ ಸ್ನೇಹಿತೆಗೆ ಕರೆ ಮಾಡಿದಾಗ ನಮ್ಮ‌ ರೂಮ್ ಗೆ ದೇವಿಶ್ರೀ ಬಂದಿದ್ದಳು ಎಂದು ತಿಳಿಸಿದ್ದಾಳೆ. ಆಗ ಪೋಷಕರು ರೂಮಿಗೆ ಹೋಗಿ ನೋಡಿದಾಗ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಯುವತಿಯನ್ನು ಕೊಲೆ ಮಾಡಿ ಯುವಕನೊಬ್ಬನೇ ವಾಪಸ್ ಹೋಗಿರುವ ಸಂಗತಿ ಗೊತ್ತಾಗಿದೆ.

ಇಬ್ಬರು ಪ್ರೇಮಿಗಳಂತೆ!

ದೇವಿಶ್ರಿ ಹಾಗೂ ಪ್ರೇಮ್ ವರ್ಧನ್ ಇಬ್ಬರೂ ಪ್ರೇಮಿಗಳಾಗಿದ್ದು ಇಬ್ಬರೂ ಕೂಡ ಆಂಧ್ರ ಮೂಲದವರು. ದ್ವಿತಿಯ ಪಿಯುಸಿವರೆಗೂ ಒಂದೇ ಶಾಲೆ, ಕಾಲೇಜಿನಲ್ಲಿ ಓದಿದವರು. ದೇವಿಶ್ರೀ ಬಿಬಿಎಂ ಮಾಡಲು ಬೆಂಗಳೂರಿಗೆ ಬಂದಿದ್ದು, ಈ ವೇಳೆ ಆಗಾಗ ಪ್ರೇಮ್ ವರ್ಧನ್ ಬೆಂಗಳೂರಿಗೆ ಬರುತ್ತಿದ್ದು ಅವಳನ್ನು ಭೇಟಿ ಮಾಡುತ್ತಿದ್ದ. ಬೆಂಗಳೂರಿಗೆ ಬಂದಾಗಿನಿಂದ ದೇವಿಶ್ರೀಗೆ ಬೇರೊಂದು ಹುಡುಗನ ಜೊತೆ ಸ್ನೇಹ ಬೆಳೆದು ಪೋನ್ ನಲ್ಲಿ ಮಾತನಾಡುತ್ತಿದ್ದ ದೇವಿಶ್ರಿ ನಡತೆಯಿಂದ ಕೋಪಗೊಂಡಿದ್ದನು. ಭಾನುವಾರ ದೇವಿಶ್ರೀಯನ್ನು ಭೇಟಿ ಮಾಡಲು ಬಂದಿದ್ದ ಪ್ರೇಮ್ ವರ್ಧನ್ ಜಗಳವಾಡಿ ಕೊಲೆ ಮಾಡಿ ಪರಾರಿ ಆಗಿದ್ದನು.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!