ನೂತನ ಪಿಂಚಣಿ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವಂತೆ ಆಗ್ರಹಿಸಿ ಡಿ.19ರಂದು ಬೆಂಗಳೂರ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ನೌಕರರ ಸಂಘ ಎನ್‌ಪಿಎಸ್ ಘಟಕದ ಪ್ರಧಾನ ಕಾರ್ಯದರ್ಶಿ ಜಯರಾಜ ಹನಮಶಟ್ಟಿತಿಳಿಸಿದರು.
ಹುಮನಾಬಾದ್ (ಡಿ.16) : ನೂತನ ಪಿಂಚಣಿ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವಂತೆ ಆಗ್ರಹಿಸಿ ಡಿ.19ರಂದು ಬೆಂಗಳೂರ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ನೌಕರರ ಸಂಘ ಎನ್‌ಪಿಎಸ್ ಘಟಕದ ಪ್ರಧಾನ ಕಾರ್ಯದರ್ಶಿ ಜಯರಾಜ ಹನಮಶಟ್ಟಿತಿಳಿಸಿದರು.
ಪಟ್ಟಣದ ತಾಪಂ ಆವರÜಣದಲ್ಲಿರುವ ಕರ್ನಾಟಕ ರಾಜ್ಯ ಪಿಡಿಒ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ನೇತೃತ್ವದಲ್ಲಿ ಯಾವುದೇ ಆಡಳಿತಕ್ಕೆ ತೊಂದರೆ ಆಗದಂತೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಮತ್ತು ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದರು.
undefined
ದೇಶ ಸೇವೆಗೆ ಯುವಕರ ಕಾತುರ ಹೆಮ್ಮೆ ವಿಷಯ: ಕೇಂದ್ರ ಸಚಿವ ಖೂಬಾ
ಎನ್‌ಪಿಎಸ್ ನಿಂದ ನೌಕರರ ಸಂಧ್ಯಾ ಕಾಲದ ಬದುಕು ಕಷ್ಟಕ್ಕೆ ಸಿಲುಕಿದೆ. ನಿವೃತ್ತಿ ನಂತರ ನೌಕರರು ಬದುಕು ಚೆನ್ನಾಗಿರಬೇಕು. ಅಂದರೆ ಎನ್‌ಪಿಎಸ್ ನಿರ್ಮೂಲನೆ ಆಗಬೇಕು, ಒಪಿಎಸ್ ಸೌಲಭ್ಯ ಪಡೆಯಬೇಕಿದೆ. ರಾಜ್ಯದಲ್ಲಿ 39 ಇಲಾಖೆಗಳ 2.5 ಲಕ್ಷ ನೌಕರರು ನೂತನ ಪಿಂಚಣಿ ಯೋಜನೆಗೆ ಒಳಪಡಲಿದ್ದಾರೆ. ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ನೌಕರರು ಎನ್‌ಪಿಎಸ್‌ಗೆ ಒಳಪಡಲಿದ್ದಾರೆ.
ಅಂದು ನಡೆಯಲಿರುವ ರಾರಯಲಿಯಲ್ಲಿ ಹುಮನಾಬಾದ್ ಹಾಗೂ ಚಿಟಗುಪ್ಪ ತಾಲೂಕಿನಿಂದ 200ಕ್ಕೂ ಅಧಿಕ ಸರ್ಕಾರಿ ನೌಕರರು ತಮ್ಮ ಹುದ್ದೆಗೆ ರಜೆ ಅಥವಾ ಇನ್ನಿತರ ರಜೆ ಹಾಕುವ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
Ground Report: ಬೀದರ್ ಕುರುಕ್ಷೇತ್ರ: ಹಾಲಿ ಶಾಸಕರಿಗೆ ಹೊಸ ಸ್ಪರ್ಧಿಗಳೇ ಸವಾಲ್
ಗುರುಶಾಂತ ವಾರದ, ಡಾ. ಪ್ರಥ್ವಿವಿರಾಜ ಹನಮಶಟ್ಟಿ, ಡಾ. ಸಂತೋಷÜ ಕೆ.ಕೆ, ಡಾ. ಗೋವಿಂದ, ಪ್ರದೀಪಕುಮಾರ ಕುಂಬಾರ, ಡಾ. ಶಶಿಧರ ಧುಮ್ಮನಸೂರೆ, ಮಹಿಳಾ ಕಾರ್ಯದರ್ಶಿ ಶಿವಲಿಲಾ ರೇವಣಪ್ಪ, ವಿಶಾಲ ತುಗಾಂವಕರ, ಪ್ರಕಾಶ ಶಹಾಪೂರ, ಶಿವಕುಮಾರ ವಳಸಂಗೆ, ಕಪಿಲ ಕಟ್ಟಿಮನಿ, ಶಂಕರೆಪ್ಪ ಪಸರ್ಗಿ, ಪ್ರಕಾಶ, ಡಾ. ಸಂತೋಷÜ ಕೆ.ಕೆ, ಪೂರ್ಣಿಮಾ, ವಿಜಯಲಕ್ಷ್ಮಿ, ಮಲ್ಲಪ್ಪಾ ಸನ್ನದ್ ಸೇರಿದಂತೆ ಅನೇಕರಿದ್ದರು.