ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಡಿಮ್ಯಾಂಡ್ ನೋಟಿಸ್; ವಾರದ ಗಡುವು ಕೊಟ್ಟ ಆಯುಕ್ತ ಜಿ. ಜಗದೀಶ್

Published : Nov 17, 2026, 07:26 PM IST
Bengaluru Property Tax Demand Notice Jagadish G

ಸಾರಾಂಶ

ಬೆಂಗಳೂರು ನಗರ ಪಾಲಿಕೆ ಆಯುಕ್ತರು ಮುಂದಿನ ಒಂದು ವಾರದೊಳಗೆ ಆಸ್ತಿ ತೆರಿಗೆ ಬಾಕಿದಾರರಿಗೆ ನೋಟಿಸ್ ನೀಡಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ವಸತಿ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ವಾಣಿಜ್ಯ ದರದಲ್ಲೇ ತೆರಿಗೆ ವಸೂಲಿ ಮಾಡಲು ಸೂಚಿಸಲಾಗಿದೆ.

ಬೆಂಗಳೂರು (ನ.17): ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ಒಂದು ವಾರದೊಳಗೆ ಬಾಕಿ ಇರುವ ಎಲ್ಲಾ ಆಸ್ತಿ ಮಾಲೀಕರಿಗೆ ಕಡ್ಡಾಯವಾಗಿ ಡಿಮ್ಯಾಂಡ್ ನೋಟಿಸ್ (Demand Notice) ವಿತರಿಸಿ, ತೆರಿಗೆ ವಸೂಲಾತಿ ಚುರುಕುಗೊಳಿಸುವಂತೆ ಪಾಲಿಕೆ ಆಯುಕ್ತರಾದ ಜಗದೀಶ್.ಜಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಬುಧವಾರ ಎಂ.ಜಿ. ರಸ್ತೆಯ ಪಿಯುಬಿ (PUB) ಕಟ್ಟಡದ ಕೇನೋಪಿ ಹಾಲ್‌ನಲ್ಲಿ ನಡೆದ ಕಂದಾಯ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಕಲಿ ಖಾತಾ ಸೃಷ್ಟಿಸುವವರ ವಿರುದ್ಧ ಶಿಸ್ತು ಹಾಗೂ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಆಯುಕ್ತರ ಸೂಚನೆಗಳು:

- ವಾರದೊಳಗೆ ನೋಟಿಸ್ ವಿತರಣೆ: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಶೇ. 80ರಷ್ಟು ಬಾಕಿದಾರರಿಗೆ ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ. ಉಳಿದ ಶೇ. 20ರಷ್ಟು ಆಸ್ತಿ ಮಾಲೀಕರಿಗೆ ಮುಂದಿನ ಒಂದು ವಾರದೊಳಗೆ ನೋಟಿಸ್ ತಲುಪಿಸಿ ತೆರಿಗೆ ವಸೂಲಿ ಮಾಡಲು ಸೂಚಿಸಲಾಗಿದೆ.

- ಮನೆಮನೆಗೆ ಭೇಟಿ ಅಭಿಯಾನ: ಸುಸ್ತಿದಾರರ ಪಟ್ಟಿಯ ಆಧಾರದ ಮೇಲೆ ಅಧಿಕಾರಿಗಳು ಖುದ್ದಾಗಿ ಆಸ್ತಿ ಮಾಲೀಕರ ಮನೆಗಳಿಗೆ ಭೇಟಿ ನೀಡಬೇಕು. ತೆರಿಗೆ ಪಾವತಿಯ ಮಹತ್ವದ ಬಗ್ಗೆ ಅರಿವು ಮೂಡಿಸಿ, ಬಾಕಿ ಹಣ ಪಾವತಿಸುವಂತೆ ಮನವೊಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

- ವಸತಿ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಬ್ರೇಕ್: ವಸತಿ ಉದ್ದೇಶದ ಆಸ್ತಿ ಎಂದು ನೋಂದಾಯಿಸಿಕೊಂಡು ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರನ್ನು ಪತ್ತೆಹಚ್ಚಲು ವಾರ್ಡ್‌ವಾರು ಪರಿಶೀಲನೆ ನಡೆಯಲಿದೆ. ಇಂತಹ ಸ್ವತ್ತುಗಳನ್ನು ನಿಯಮಾನುಸಾರ 'ವಾಣಿಜ್ಯ ಸ್ವತ್ತು' ಎಂದು ಮರುವರ್ಗೀಕರಿಸಿ, ವಾಣಿಜ್ಯ ದರದಲ್ಲೇ ತೆರಿಗೆ ವಸೂಲಿ ಮಾಡಿ ಸಮಗ್ರ ವರದಿ ಸಲ್ಲಿಸಲು ಆದೇಶಿಸಲಾಗಿದೆ.

- Multiple ಮತ್ತು Clubbing ಅರ್ಜಿಗಳ ವಿಲೇವಾರಿ: ವಾರ್ಡ್‌ವಾರು ಬಾಕಿ ಇರುವ Multiple ಮತ್ತು Clubbing ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಡತಗಳನ್ನು ಸಿದ್ಧಪಡಿಸಿ, ವಿಲೀನಗೊಳಿಸುವ ಹಾಗೂ ಅನೂರ್ಜಿತಗೊಳಿಸುವ ಪ್ರಕ್ರಿಯೆಯನ್ನು ನಿಯಮಾನುಸಾರ ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದ್ದಾರೆ.

- ಇ-ಆಸ್ತಿ (e-Aasthi) ಅರ್ಜಿಗಳಿಗೆ ಆದ್ಯತೆ: ಇ-ಆಸ್ತಿ ತಂತ್ರಾಂಶದಲ್ಲಿ ಸಲ್ಲಿಕೆಯಾಗಿರುವ ಬಿ-ಖಾತಾದಿಂದ ಎ-ಖಾತಾ (B to A Khata), ಏಕ ನಿವೇಶನ ಖಾತಾ, ಇ-ಖಾತಾ ತಿದ್ದುಪಡಿ ಹಾಗೂ ಮ್ಯೂಟೇಷನ್ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

- ಮಧ್ಯವರ್ತಿಗಳಿಗೆ ನೋ ಎಂಟ್ರಿ: ಕಂದಾಯ ವಿಭಾಗದ ಕಚೇರಿಗಳಲ್ಲಿ ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ (Brokers) ಅವಕಾಶ ನೀಡಬಾರದು. ಅಧಿಕಾರಿಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ತಾವು ಯಾವುದೇ ಸಮಯದಲ್ಲಾದರೂ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಆಯುಕ್ತರು ಎಚ್ಚರಿಸಿದ್ದಾರೆ.

PREV
Read more Articles on
click me!

Recommended Stories

ವಿಜಯಪುರದಲ್ಲಿ ರಿಲಯನ್ಸ್‌ನಿಂದ ಭಾರೀ ಹೂಡಿಕೆ, 1600 ಕೋಟಿ ವೆಚ್ಚದಲ್ಲಿ ಕ್ಯಾಂಪಾ ಕೋಲಾ ಪ್ಲ್ಯಾಂಟ್‌, 2 ಸಾವಿರ ನೇರ ಉದ್ಯೋಗ
ಸಾಗರದಾಚೆ ತುಳುನಾಡಿನವರ ಅಧಿಪತ್ಯ, ಮಧ್ಯಪ್ರಾಚ್ಯ, ಅಮೆರಿಕ, ಚೀನಾದಲ್ಲಿ ತಮ್ಮದೇ ಸಾಮ್ರಾಜ್ಯ ಕಟ್ಟಿದ ಕರಾವಳಿ ಉದ್ಯಮಿಗಳು!