ಕೊರೋನಾರ್ಭಟದ ನಡುವೆ ಬೆಂಗಳೂರು ಏರ್‌ಪೋರ್ಟ್‌ನಿಂದ ಭಾರೀ ಸರಕು ಸಾಗಣೆ

By Suvarna News  |  First Published Aug 15, 2020, 7:20 AM IST

ದೇಶದಲ್ಲಿಕೊರೋನಾ ಆರ್ಭಟ ಹೆಚ್ಚಾಗಿದ್ದಾಗಲೇ ಬೆಂಗಳೂರು ಏರ್ಪೋರ್ಟ್ ಭಾರೀ ಪ್ರಮಾಣದ ಸರಕು ಸಾಗಣೆ ಮಾಡಿದೆ. ಯಾವ ಸರಕು, ಎಷ್ಟು ಸಾಗಾಟ ಇಲ್ಲಿದೆ ಮಾಹಿತಿ.


ಬೆಂಗಳೂರು(ಆ.15): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ವು ಕೊರೋನಾ ಸೋಂಕು ಆರ್ಭಟದ ನಡುವೆಯೂ ಕಳೆದ ನಾಲ್ಕು ತಿಂಗಳಲ್ಲಿ (ಏಪ್ರಿಲ್‌ನಿಂದ ಜುಲೈ) ದೇಶ-ವಿದೇಶಗಳಿಗೆ 71,406 ಮೆಟ್ರಿಕ್‌ ಟನ್‌ನಷ್ಟುಸರಕು ಸಾಗಣೆ ಮಾಡಿದೆ.

ಈ 71,416 ಮೆಟ್ರಿಕ್‌ ಟನ್‌ ಸರಕು ಪೈಕಿ 51,728 ಮೆಟ್ರಿಕ್‌ ಟನ್‌ ವಿದೇಶಿ ಸರಕು ಹಾಗೂ 19,678 ಮೆಟ್ರಿಕ್‌ ಟನ್‌ ಸ್ವದೇಶಿ ಸರಕು ಸಾಗಣೆ ಮಾಡಲಾಗಿದೆ. 

Tap to resize

Latest Videos

undefined

ಕೊರೋನಾ ವಿರುದ್ಧ ಹೊರಾಟ: ಟಾಸ್ಕ್ ಫೋರ್ಸ್ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳು ..

ಇದರಲ್ಲಿ 6,194 ಮೆಟ್ರಿಕ್‌ ಟನ್‌ ಬೇಗ ಕೆಡುವ ವಸ್ತುಗಳು ಹಾಗೂ 2,300 ಮೆಟ್ರಿಕ್‌ ಟನ್‌ ಔಷಧಿಗಳೂ ಸೇರಿವೆ. ಇದರೊಂದಿಗೆ ಎಲೆಕ್ಟಾನಿಕ್‌, ಎಂಜಿನಿಯರಿಂಗ್‌ ಉಪಕರಣಗಳು, ಬಿಡಿಭಾಗಗಳು, ಸಿದ್ಧ ಉಡುಪುಗಳು ಸೇರಿದಂತೆ ಹಲವು ವಸ್ತುಗಳನ್ನು ಸಾಗಿಸಲಾಗಿದೆ. ನಾಲ್ಕು ತಿಂಗಳಲ್ಲಿ ಒಟ್ಟು 38 ಸಾವಿರ ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣ ಸೇವೆ ಪಡೆದಿದ್ದಾರೆ.

click me!