ಹುಬ್ಬಳ್ಳಿ-ಧಾರವಾಡ: ಕೊರೋನಾತಂಕದ ಮಧ್ಯೆಯೇ ಬೇಂದ್ರೆ ಬಸ್‌ ಪ್ರಾರಂಭ

By Kannadaprabha NewsFirst Published Jun 3, 2020, 7:23 AM IST
Highlights

ಮಹಾನಗರದಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿದಿದ್ದು, ಪ್ರತಿದಿನ ಮಹಾನಗರದ ನಡುವೆ 65-70 ಬಸ್‌ಗಳಿಂದ ಸೇವೆ| ಎರಡು ತಿಂಗಳ ಬಳಿಕ ನಗರದಲ್ಲಿ ಖಾಸಗಿ ಬಸ್‌ ಸಂಚಾರ ಆರಂಭ| ಇದರಿಂದ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ| ಪ್ರಯಾಣಿಕರು ಬಸ್‌ ಏರುವ ಮೊದಲೇ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಸ್ಯಾನಿಟೈಸರ್‌ ಮಾಡಲಾಗುತ್ತಿದೆ|

ಹುಬ್ಬಳ್ಳಿ(ಜೂ.03): ಮಹಾನಗರದ ಮಧ್ಯೆ ಸಂಚರಿಸುವ ಬೇಂದ್ರೆ ನಗರ ಸಾರಿಗೆ ಬಸ್‌ ಸೋಮವಾರದಿಂದ ಸಂಚಾರ ಆರಂಭಿಸಿದ್ದು, ಮೊದಲ ದಿನ 12 ಬಸ್‌ಗಳು ಸಂಚಾರ ನಡೆಸಿದವು.

ಈಗಾಗಲೇ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿದಿದ್ದು, ಪ್ರತಿದಿನ ಮಹಾನಗರದ ನಡುವೆ 65-70 ಬಸ್‌ಗಳು ಸೇವೆ ಒದಗಿಸುತ್ತಿವೆ. ಇದೀಗ ಎರಡು ತಿಂಗಳ ಬಳಿಕ ನಗರದಲ್ಲಿ ಖಾಸಗಿ ಬಸ್‌ ಸಂಚಾರ ಮಾಡಿದೆ. ಇದರಿಂದ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಆದಂತಾಗಿದೆ. ಪ್ರಯಾಣಿಕರು ಬಸ್‌ ಏರುವ ಮೊದಲೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಸ್ಯಾನಿಟೈಸರ್‌ ಮಾಡಲಾಗುತ್ತಿದೆ. 

ಧಾರವಾಡ: ಮಹಾಮಾರಿ ಕೊರೋನಾದಿಂದ 16 ಜನ ಗುಣಮುಖ, ಬಿಡುಗಡೆ

ಇನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಯಿತು. ಒಂದು ಬಸ್‌ 40 ಸೀಟ್‌ಗಳ ಸಾಮರ್ಥ್ಯವನ್ನು ಹೊಂದಿದ್ದು, 20 ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸಲಾಗಿದೆ. ಹಿಂದಿನ ದರದಲ್ಲೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಗುತ್ತಿದ್ದು, ಪ್ರಯಾಣಿಕರಿಂದ ಸಾಧಾರಣ ಪ್ರತಿಕ್ರಿಯೆ ಬಂದಿದೆ ಎಂದು ಬೇಂದ್ರೆ ಬಸ್‌ ಮಾಲೀಕರು ತಿಳಿಸಿದ್ದಾರೆ.
 

click me!