ಮೇಯರ್ ಸ್ಥಾನದ ಕುರ್ಚಿಗೂ ಬಾಡಿಗೆ ಕೊಡ್ಬೇಕು, ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಅಂಧಾ ದರ್ಬಾರ್

By Suvarna News  |  First Published Apr 28, 2022, 7:50 PM IST

* ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಅಂಧಾ ದರ್ಬಾರ್
* ಇಲ್ಲಿ‌ ಮೇಯರ್ ಸ್ಥಾನಕ್ಕೆ ಅಲ್ಲ ಮೇಯರ್ ಸ್ಥಾನದ ಕುರ್ಚಿಗೂ ಬಾಡಿಗೆ ಕೊಡಬೇಕು
*ಚೇರ್ ಖರೀದಿ ಮಾಡಲಾಗದಷ್ಟು ದೀವಾಳಿಗೆ ತಲುಪಿತೇ ಬಳ್ಳಾರಿ ಪಾಲಿಕೆ
*ಬಾಡಿಗೆ ಕುರ್ಚಿ ಹೆಸರಿನಲ್ಲಿ ಹಣ ಲೂಟಿ ಮಾಡ್ತಿದ್ದಾರೆನ್ನೋ ಆರೋಪ


ವರದಿ ; ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ, (ಏ.28) :
ಸಾಮಾನ್ಯವಾಗಿ ಪಾಲಿಕೆಯ  ಚುನಾವಣೆಗಾಗಿ ಮತ್ತು ಗೆದ್ದ ಮೇಲೆ  ಮೇಯರ್ ಉಪಮೇಯರ್ ಆಗೋದಕ್ಕಾಗಿ (ಕುರ್ಚಿಗಾಗಿ) ಹಣ ಖರ್ಚು ಮಾಡೋದನ್ನು  ನೀವು  ನೋಡಿರತೀರಾ. ಆದ್ರೇ  ಬಳ್ಳಾರಿ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕುರ್ಚಿಗೆ ಬಾಡಿಗೆ ಹಣ ಕೊಡ್ತಿದ್ದಾರೆ.. ಕೇವಲ ಮೇಯರ್- ಉಪಮೇಯರ್ ನಿತ್ಯ ಕುಳಿತುಕೊಳ್ಳುವ ಕುರ್ಚಿಗಷ್ಟೇ ಅಲ್ಲ   ಸಾರ್ವಜನಿಕರು ಕುಳಿತುಕೊಳ್ಳುವ ಕುರ್ಚಿಗೂ ನಿತ್ಯ ಸಾವಿರಾರು ರೂಪಾಯಿ ಬಾಡಿಗೆ ಪಾವತಿ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನೋಡ್ತಿದ್ರೇ ಪಾಲಿಕೆ ಕುರ್ಚಿ ಖರೀದಿ ಮಾಡದಷ್ಟು ದಿವಾಳಿತನದ ಸ್ಥಿತಿಗೆ ಬಂತೇ..?  ಅನ್ನೋದು ಒಂದು ಕಡೆಯಾದ್ರೇ,  ಪಾಲಿಕೆಯಲ್ಲಿ ಹಣ ಕೊಳ್ಳೊ ಹೊಡೆಯಲು ಅಧಿಕಾರಿಗಳು ಏನೆಲ್ಲಾ ಐಡಿಯಾ ಹುಡುಕುತ್ತಿದ್ದಾರೆ ಅನ್ನೋದು ಗೊತ್ತಾಗ್ತಿದೆ..

ಕುರ್ಚಿಗಾಗಿ ಪೈಪೋಟಿ ಕುರ್ಚಿ ಮೇಲೆ ಕೂಡದೋದಕ್ಕೂ ಬಾಡಿಗೆ ಹಣ
 ಗಣಿನಾಡು ಬಳ್ಳಾರಿ ಮಹಾನಗರ  ಪಾಲಿಕೆಯ ಪಟ್ಟಕೇರಲು ಕಾಂಗ್ರೇಸ್ ಸದಸ್ಯರು ಮಾಡಿದ ಹೋರಾಟ ಅಷ್ಠಿಷ್ಟಲ್ಲ. ಪಾಲಿಕೆ ಚುನಾವಣೆ ನಡೆದು ವರ್ಷವಾದ್ರು ಮತ್ತು  ಈ ಪಾಲಿಕೆಯ ಪಟ್ಟಕೇರಲು ಕಾಂಗ್ರೆಸ್ ಬಿಜೆಪಿ ಮಧ್ಯೆ ಸಾಕಷ್ಟು ಪೈಪೋಟಿ ಎರ್ಪಟ್ಟಿತ್ತು. ಕಾಂಗ್ರೆಸ್ ಪಕ್ಷದ ಸದಸ್ಯರು ಸ್ಪಷ್ಟ ಬಹುಮತ ಪಡೆದ್ರೂ ಪಾಲಿಕೆಯ ಮೇಯರ್ ಉಪಮೇಯರ್ ಪಟ್ಟ ದಕ್ಕಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಸದಸ್ಯರು ಮೇಯರ್ ಕುರ್ಚಿಯಲ್ಲಿ ಕುಳಿತುಕೊಳ್ಳಲು ಕೋರ್ಟ್ ಮೇಟ್ಟಿಲೇರಿದ್ರು. ವರ್ಷಗಟ್ಟಲೇ ಹೋರಾಟ ಮಾಡಿದ್ರು. ರೆರ್ಸಾಟ್ ರಾಜಕೀಯವೆಂದು ಕೋಟಿ ಕೋಟಿ ಹಣ ಸಹ ಖರ್ಚು ಮಾಡಿದ್ರು. ಹೀಗೆ ಪಾಲಿಕೆಯ ಪಟ್ಟಕೇರಲು ಪೈಪೋಟಿ ನಡೆಸಿದ ಕಾಂಗ್ರೇಸ್ ಸದಸ್ಯರು ಈಗ ಮೇಯರ್ ಉಪಮೇಯರ್ ಕುರ್ಚಿಯಲ್ಲಿ ಕುಳಿತುಕೊಳ್ಳಲು ಬಾಡಿಗೆ ಪಾವತಿ ಮಾಡುತ್ತಿದ್ದಾರಂತೆ ಹೀಗಂತಾ ಪಾಲಿಕೆ ಮೂಲಗಳು ಸ್ಪಷ್ಟವಾಗಿ ಹೇಳ್ತಿವೆ. ಜೊತೆಗೆ ಸ್ಥಳೀಯ ಶಾಸಕ ಸೋಮಶೇಖರ್ ರೆಡ್ಡಿ ಕೂಡ ಈ ಕುರಿತು ನೇರ ವಾಗ್ದಾಳಿ ಮಾಡಿದ್ದು, ಅಧಿಕಾರಿಗಳನ್ನು ಹಿಡಿದಿಟ್ಟುಕೊಂಡು ಅಧಿಕಾರ ಮಾಡಲಿಕ್ಕೆ ಕಾಂಗ್ರೆಸ್ ಗೆ ಬರೋದಿಲ್ಲ ಅಧಿಕಾರಗಳ ಜೊತೆಗೆ ಇವರು ಹಣ ಹೊಡೆಯಲು ಈ ಪ್ಲಾನ್ ಮಾಡ್ತಿದ್ದಾರೆಂದು ಆರೋಪಿಸಿದ್ದಾರೆ..

Tap to resize

Latest Videos

undefined

ಬಳ್ಳಾರಿ, ವಿಜಯನಗರದಲ್ಲಿ ಕಾಂಗ್ರೆಸ್ ಮೇಲುಗೈ, ಆನಂದ್‌ ಸಿಂಗ್‌ಗೆ ಭಾರಿ ಮುಖಭಂಗ
  
ಮಹಾನಗರ ಪಾಲಿಕೆ ಅನುದಾನ ಅದಾಯ ಎರಡು ಇದೆ
ಇನ್ನೂ ಬಳ್ಳಾರಿ ಮಹಾನಗರ ಪಾಲಿಕೆಗೆ ದಶಕಗಳ ಇತಿಹಾಸವಿದೆ. ನಗರಸಭೆಯಿಂದ ಮಹಾನಗರ ಪಾಲಿಕೆ ಆಗಿರೋ ಈ ಪಾಲಿಕೆ ಗೆ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಅನುದಾನ ಬರುತ್ತೆ. ಆದರ ಜೊತೆಗೆ ಆದಾಯವೂ ಬತುತ್ತದೆ.  ಆದ್ರೇ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕುಳಿತುಕೊಳ್ಳಲು ಕುರ್ಚಿಯೇ ಇಲ್ಲದಾಗಿದೆ. ಮೇಯರ್ ಉಪಮೇಯರ್ ಅಷ್ಠೇ ಎಕೆ ಸಾರ್ವಜನಿಕರು ಕುಳಿತುಕೊಳ್ಳಲು ಇಲ್ಲಿ ಬಾಡಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಅನ್ನೋ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ. ಕಳೆದೊಂದು ವರ್ಷದಿಂದ ಮೇಯರ್ ಉಪಮೇಯರ್ ಇಲ್ಲದೇ ಖಾಲಿಯಿದ್ದ ಮಹಾನಗರ ಪಾಲಿಕೆಗೆ ಇತ್ತೀಚಿಗಷ್ಟೇ ನೂತನ ಮೇಯರ್ ಆಯ್ಕೆಯಾಗಿ ಬಂದಿದ್ದಾರೆ. ನೂತನ ಮೇಯರ್, ಉಪಮೇಯರ್ ಕುಳಿತುಕೊಳ್ಳುವ ಕುರ್ಚಿ ಬಾಡಿಗೆ ಕೊಡೋದಷ್ಟೆ ಅಲ, ಅಷ್ಠೆ ಅಲ್ಲ ಮೇಯರ್ ಉಪ ಮೇಯರ್ ರನ್ನ ಭೇಟಿಯಾಗಲು ಬಂದ ಸಾರ್ವಜನಿಕರು ಕುಳಿತುಕೊಳ್ಳುವ ಆಸನಗಳು ಸಹ ಬಾಡಿಗೆಯದ್ದು ಎಂದು  ಆರೋಪಿಸಲಾಗ್ತಿದೆ.. 

ಬಾಡಿಗೆ ಕೊಟ್ರೇ ‌ನಿತ್ಯ ಆದಾಯ
ಪಾಲಿಕೆಯಲ್ಲಿ ಮೇಯರ್ ಉಪಮೇಯರ್ ಕುಳಿತುಕೊಳ್ಳಲು ಈ ಹಿಂದೆಯೇ ಹೊಸ ಕುರ್ಚಿ ಖರೀದಿಸಲಾಗಿದೆ. ಅದೇ ಕುರ್ಚಿಯಲ್ಲಿ ನೂತನ ಮೇಯರ್ ಉಪಮೇಯರ್ ಆಸೀನರಾಗಿ ಅಧಿಕಾರ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ ನೂತನ ಮೇಯರ್ ರಾಜೇಶ್ವರಿ..  ಆದ್ರೇ, ಮೇಯರ್ ಉಪಮೇಯರರನ್ನ ಭೇಟಿ ಮಾಡಲು ಬರೋ ಸಾರ್ವಜನಿಕರು ಕುಳಿತುಕೊಳ್ಳಲು ಬಾಡಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಒಪ್ಪಿಕೊಳ್ಳುತ್ತಿದ್ದಾರೆ.. ಹೆಚ್ಚು ಕಡಿಮೆ ಕಳೆದ ಎರಡು ವರ್ಷ ಪಾಲಿಕೆಯಲ್ಲಿ ಯಾರು ಅಧಿಕಾರದಲ್ಲಿ ಇರದ ಹಿನ್ನೆಲೆ  ಅಧಿಕಾರಿಗಳು ಬಾಡಿಗೆ ಕುರ್ಚಿಗಳಿಗೆ ಸಾವಿರಾರು ರೂಪಾಯಿ ಬಿಲ್ ಪಾವತಿ ಮಾಡುತ್ತಿರುವುದು ಪಾಲಿಕೆಯಲ್ಲಿನ ಭ್ರಷ್ಟ್ರಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಂದೇ ಬಾರಿ ಕುರ್ಚಿ ಖರೀದಿ ಮಾಡಿದ್ರೇ ಬಾಡಿಗೆ ಹೆಸರಲ್ಲಿ ನಿತ್ಯ ಕೊಳ್ಳೆ ಹೊಡೆಯುದು ತಪ್ಪುತ್ತದೆ ಎನ್ನುವುದು ಅಧಿಕಾರಿಗಳ ಕಳ್ಳ ಲೆಕ್ಕಾಚಾರವಾಗಿದೆ.

 ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ರೇ  ಮೇಯರ್ -ಉಪಮೇಯರ್ ಗೆ ಗೊತ್ತಿಲ್ಲದಂತೆ ಪಾಲಿಕೆಯ ಅಧಿಕಾರಿಗಳು ಪ್ರತಿನಿತ್ಯ ಕುರ್ಚಿಯ ಹೆಸರಿನಲ್ಲಿ ಸಾವಿರಾರು ರೂಪಾಯಿ ಬಾಡಿಗೆ ಪಾವತಿ ಮಾಡಿ ಹಣ ಲೂಟಿ ಮಾಡುತ್ತಿರುವುದು ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಇನ್ನಾದ್ರು ಪ್ರತಿ ನಿತ್ಯ ಸಾವಿರಾರು ರೂಪಾಯಿ ಹಣವನ್ನ ಕುರ್ಚಿಗೆ ಬಾಡಿಗೆ ನೀಡುವ ಪಾಲಿಕೆ ಅಧಿಕಾರಿಗಳು ಹೊಸದಾಗಿ ಕುರ್ಚಿಗಳನ್ನ ಖರೀದಿ ಮಾಡಿದ್ರೆ ಸಾರ್ವಜನಿಕರ ಹಣವನ್ನ ಉಳಿಸಬಹುದಾಗಿದೆ.

click me!