ಭಾರತೀಯ ಸೇನೆಯಲ್ಲಿ ಈಗಾಗಲೇ ರಾಜ್ಯದ ತಳಿ ಮುಧೋಳು ನಾಯಿಗಳು ತಮ್ಮ ಸಾಮಥ್ರ್ಯ ಪ್ರದರ್ಶಿಸಿವೆ. ಇದೀಗ, ಅದೇ ಸಾಲಿಗೆ ಕಾಫಿನಾಡಲ್ಲಿದ್ದ ಬೆಲ್ಜಿಯಂ ನಾಯಿಗಳು ಸೇರಲಿದ್ದು, ಈಗಾಗಲೇ ನಾಯಿಗಳನ್ನ ಭಾರತೀಯ ಸೇನೆಯ ಬೆಂಗಳೂರು ಶಾಖೆಯ ಬೇಹುಗಾರಿಕೆ ವಿಭಾಗದ ಮುಖ್ಯಸ್ಥ ಕರ್ನಲ್ ಡಾ.ಜೈವಿನ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.17): ಭಾರತೀಯ ಸೇನೆಯಲ್ಲಿ ಈಗಾಗಲೇ ರಾಜ್ಯದ ತಳಿ ಮುಧೋಳು ನಾಯಿಗಳು ತಮ್ಮ ಸಾಮಥ್ರ್ಯ ಪ್ರದರ್ಶಿಸಿವೆ. ಇದೀಗ, ಅದೇ ಸಾಲಿಗೆ ಕಾಫಿನಾಡಲ್ಲಿದ್ದ ಬೆಲ್ಜಿಯಂ ನಾಯಿಗಳು ಸೇರಲಿದ್ದು, ಈಗಾಗಲೇ ನಾಯಿಗಳನ್ನ ಭಾರತೀಯ ಸೇನೆಯ ಬೆಂಗಳೂರು ಶಾಖೆಯ ಬೇಹುಗಾರಿಕೆ ವಿಭಾಗದ ಮುಖ್ಯಸ್ಥ ಕರ್ನಲ್ ಡಾ.ಜೈವಿನ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.
undefined
ಉಚಿತವಾಗಿ ಸೇನೆಗೆ ನೀಡಿದ ವೈದ್ಯರು: ಮಲೆನಾಡಿನ ಭಾಗವಾದ ಕೊಪ್ಪದಲ್ಲಿರುವ ಪಂಚಜನ್ಯ ಆರ್ಯುವೇದಿಕ್ ಆಸ್ಪತ್ರೆ ರಾಜ್ಯ ಮಾತ್ರವಲ್ಲ ಇಡೀ ದೇಶ, ವಿದೇಶದಲ್ಲೂ ಕೂಡ ಹೆಸರುವಾಸಿಯಾಗಿದೆ. ಮಲೆನಾಡಿನ ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿರುವ ಕೊಪ್ಪ ತಾಲೂಕಿನಿಂದ 4 ಕಿಲೋ ಮೀಟರ್ ದೂರದಲ್ಲಿರುವ ಪುಟ್ಟ ಗ್ರಾಮ ಕಡೇಗದ್ದೆ. ಇಲ್ಲಿ ವಾಸಿಯಾಗಿರುವ ಚಕ್ರಪಾಣಿ ಕುಟುಂಬ ಇಡೀ ಕೊಪ್ಪಕ್ಕೆ ಮಾತ್ರವಲ್ಲ ದೇಶ, ವಿದೇಶದಲ್ಲೂ ಹೆಸರುವಾಸಿಯಾಗಿದೆ. ಏಕೆಂದ್ರೆ ಇಲ್ಲಿ ಸಿಗುವ ಆರ್ಯುವೇದ ಚಿಕಿತ್ಯೆಯಿಂದ ಬಹಳಷ್ಟು ಹೆಸರುವಾಸಿಯಾಗಿದೆ. ಚಕ್ರಪಾಣಿ ಎಂಬುವರ ಮಗ ಡಾ.ರಾಘವೇಂದ್ರ ಆಯುರ್ವೇದಿಕ್ ಚಿಕಿತ್ಸೆ ಜೊತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಚಾರ್ಮಾಡಿ ಘಾಟಿನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಲಾರಿ, ಪ್ರಾಣ ಉಳಿಸಿದ ಮರ: ಹೇಗೆ ಗೊತ್ತಾ?
ಇದರ ಜೊತೆ ದೇಶಿಯ ಹಾಗೂ ವಿದೇಶಿಯ ಹಸು ಹಾಗೂ ನಾಯಿಗಳನ್ನ ಸಾಕುವ ಪ್ರವೃತ್ತಿ ಕೂಡ ಇದೆ. ಡಾ.ರಾಘವೇಂದ್ರ ದಂಪತಿಗಳು ಕೊಪ್ಪ ತಾಲೂಕಿನ ಕಡೇಗದ್ದೆ ಗ್ರಾಮದಲ್ಲಿ ಆಯುರ್ವೇದಿಕ್ ಆಸ್ಪತ್ರೆ ನಡೆಸುತ್ತಿದ್ದಾರೆ. ಇಲ್ಲಿಗೆ ಹೊರರಾಜ್ಯ ಹಾಗೂ ವಿದೇಶಿಗರು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಾರೆ. ಹೀಗೆ, ಇವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದ ಬೆಲ್ಜಿಯಂ ಮೂಲದ ರೋಗಿಗಳು ಬೆಲ್ಜಿಯಂನ ನಾಯಿಯನ್ನು ಇವರಿಗೆನೀಡಿದ್ದರು. ಒಂದು ಮಲಿನಾಯ್ಸ್ ಎಂಬ ಜಾತಿನಾಯಿಯನ್ನು ಸಾಕಿದ ವೈದ್ಯರು ನಾಯಿಗೆ ಪಾಲನೆ ಪೋಷಣೆಯನ್ನು ಮಾಡಿದರು.ಮಲಿನಾಯ್ಸ್ ನ ಮೂರು ನಾಯಿಮರಿಗಳನ್ನು ಇದೀಗ ಸೇನೆಗೆ ಉಚಿತವಾಗಿ ಕೊಡುಗೆಯಾಗಿ ನೀಡಿದ್ದಾರೆ.
ಚೈತ್ರಾ ಕುಂದಾಪುರ ಡೀಲ್ ಪ್ರಕರಣಕ್ಕೆ ಟ್ವಿಸ್ಟ್: ಸಲೂನ್ ಮಾಲೀಕನಿಗೆ ಬೆದರಿಕೆ ಕರೆ
ಕಾಶ್ಮೀರದ ಗಡಿ ಪ್ರದೇಶಕ್ಕೆ ಮಲೆನಾಡಿನ ಶ್ವಾನ: ಒಂದು ಲಕ್ಷದ 20 ಸಾವಿರ ಬೆಲಬಾಳುವ ಮಲಿನಾಯ್ಸ್ ನ ಜಾತಿಯ ಶ್ವಾನಗಳನ್ನು ಕುಟುಂಬ ಸೇನಗೆ ನೀಡಿದೆ. ರಾಘವೇಂದ್ರ ಅವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿದ್ದ ಮೂರು ಮೌಲ್ಯದ ಬೆಲ್ಜಿಯಂ ನಾಯಿಗಳನ್ನ ಚಕ್ರಪಾಣಿ ಅವರ ಮೊಮ್ಮಕ್ಕಳಾದ ಸಾನ್ವಿ ಕಾರಂತ್ ಹಾಗೂ ಮಾನ್ವಿ ಕಾರಂತ್ ಅವರು ನಾಯಿಗಳನ್ನ ಭಾರತೀಯ ಸೈನ್ಯದ ಬೇಹುಗಾರಿಕೆ ಶಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ನಾಯಿ ಮರಿಗಳಿಗೆ ಮೀರತ್ನ ಆರ್.ವಿ.ಸಿ.ಕೇಂದ್ರದಲ್ಲಿ ತರಬೇತಿ ನೀಡಿ ಕಾಶ್ಮೀರದ ಗಡಿ ಪ್ರದೇಶಕ್ಕೆ ಕಳುಹಿಸಲಾಗುತ್ತದೆ. ಡಾ.ರಾಘವೇಂದ್ರ ಅವರು ಕಡೆಗದ್ದೆಯ ತಮ್ಮ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಪಂಚಕರ್ಮ ವೈದ್ಯ ವೃತ್ತಿಯ ಜೊತೆ ಕೃಷಿಯಲ್ಲೂ ನಿರತರಾಗಿ ನಾಟಿ ಹಸು, 8-9 ಗಿರ್ ತಳಿಯ ಹಸುಗಳ ಜೊತೆ ಸ್ವದೇಶಿ ಹಾಗೂ ವಿದೇಶಿ ನಾಯಿಗಳನ್ನ ಸಾಕುತ್ತಿದ್ದಾರೆ.